ಕಾಸರಗೋಡು: ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್‍ಸ್ಟಿಟ್ಯೂಟ್ (ಸಿಪಿಸಿಆರ್ ಐ)ನೇತೃತ್ವದಲ್ಲಿ ಶೆಡ್ಯೂಲ್ಡ್ ಕಾಸ್ಟ್ ಸಬ್ ಪ್ಲೇನ್ (ಎಸ್.ಸಿ.ಎಸ್.ಪಿ) ಅಡಿಯಲ್ಲಿ ಜೇನು ಗೂಡು ಚೌಕಟ್ಟು (ಸೂಪರ್) ನಿರ್ಮಾಣದ ಕ್ಷೇತ್ರ ಪ್ರಾತ್ಯಕ್ಷಿಕೆ ಹಾಗೂ 'ಜೇನು ಉತ್ಪಾದನೆಗೆ ಜೇನುನೊಣಗಳ ಆವಾಸ ಸಿದ್ಧಪಡಿಸುವುದು' ಕುರಿತು ಕ್ಯಾಂಪಸ್‍ನಿಂದ ಹೊರಗೆ ತರಬೇತಿಯನ್ನು ಆಯೋಜಿಸಲಾಗಿತ್ತು. ಬದಿಯಡ್ಕ ಪಿಲಾಂಕಟ್ಟೆ ಗ್ರಾಮದಲ್ಲಿ ನಿನ್ನೆ ಈ ಪ್ರಾತ್ಯಕ್ಷಿಕಾ ಶಿಬಿರ ಆಯೋಜನೆಗೊಂಡಿತ್ತು.
ಮಾಸ್ಟರ್ ಟ್ರೈನರ್ ರಾಮಚಂದ್ರನ್ ಪಿ, ಪುತಿಯೋಡು (ಎಚ್) ಪೆರಡಾಲ ಅವರು ಫಲಾನುಭವಿಗಳ ಸ್ಥಳಕ್ಕೆ ಭೇಟಿ ನೀಡಿದರು ಮತ್ತು ಹೆಚ್ಚಿನ ಜೇನು ಇಳುವರಿಯನ್ನು ಪಡೆಯಲು ಜೇನು ಗೂಡು ಚೌಕಟ್ಟು (ಸೂಪರ್) ಅನ್ನು ಹೇಗೆ ನಿರ್ಮಿಸುವುದು ಮತ್ತು ಜೋಡಿಸುವುದು ಹೇಗೆ ಎಂಬ ಬಗೆಗೆ ಕ್ಷೇತ್ರ ಪ್ರಾತ್ಯಕ್ಷಿಕೆ ನಡೆಸಿದರು.
ಎಸ್.ಸಿ.ಎಸ್.ಪಿ. ಯೋಜನೆಯಡಿ ಡಿಸೆಂಬರ್ 2022 ರಲ್ಲಿ ಸಿ.ಪಿ.ಸಿ.ಆರ್.ಐ ಯಲ್ಲಿ ಆಯ್ದ 35 ಪರಿಶಿಷ್ಟ ಜಾತಿಯ ರೈತರಿಗೆ (ಪ್ರತಿ 10 ಜೇನುಗೂಡುಗಳು) ಮತ್ತು ಸ್ಟ್ಯಾಂಡ್‍ಗಳೊಂದಿಗೆ 350 ಜೇನುನೊಣಗಳ ಜೇನುಗೂಡುಗಳನ್ನು ಒದಗಿಸಲಾಗಿತ್ತು. ಜೇನು ಉತ್ಪಾದನೆಯ ಹಂತದಲ್ಲಿ ಹಿರಿಯ ವಿಜ್ಞಾನಿ ಹಾಗೂ ತರಬೇತಿಯ ಕೋರ್ಸ್ ನಿರ್ದೇಶಕ ಡಾ.ರಾಜಕುಮಾರ್ ಅವರು ಜೇನು ಇಳುವರಿಯನ್ನು ಸುಧಾರಿಸಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಮತ್ತು ಅಗತ್ಯ ನಿರ್ವಹಣೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ತಂತ್ರಜ್ಞರಾದ ಆಶಾಮೋಲ್ ಇ.ಪಿ. ತರಬೇತಿ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.






