ಪೆರ್ಲ: ಜಿಲ್ಲಾ ಅಗಸರ ಯಾನೆ ಮಡಿವಾಳರ ಸಂಘದ ದಶಮಾನೋತ್ಸವ ಪೆರ್ಲದ ಶ್ರೀ ಗಣೇಶ ಮಂದಿರದಲ್ಲಿ ಜರಗಿತು. ಮೈಸೂರು ಪೆಯಿಂಟ್ ಹಾಗೂ ವಾರ್ನಿಷ್ ಲಿಮಿಟೆಡ್ ಅಧ್ಯಕ್ಷ ಆರ್ ರಘು ಕೌಟಿಲ್ಯ ಸಮಾರಂಭ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಬಾಬು ನೀರ್ಚಾಲು ಅಧ್ಯಕ್ಷತೆ ವಹಿಸಿದ್ದರು.
ಮೂಡುಬಿದ್ರೆ ಕರಿಂಜೆ ಶ್ರೀ ಲಕ್ಷ್ಮೀನಾರಾಯಣ ವೀರಾಂಜನೇಯ ಕ್ಷೇತ್ರದ ಪರಮಪೂಜ್ಯ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಕರ್ನಾಟಕ ರಾಜ್ಯ ಮಡಿವಾಳರ ಮಹಿಳಾ ಸಂಘದ ಅಧ್ಯಕ್ಷೆ ಎನ್. ಆರ್ ವಿಜಯಲಕ್ಷ್ಮಿ ಅಂಜನಪ್ಪ, ದ.ಕ ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ವಿಶ್ವನಾಥ ಕಾಟಿಪಳ್ಳ, ಪುತ್ತೂರು ತಾಲೂಕು ಸಂಘದ ಅಧ್ಯಕ್ಷ ಪಿ.ಎನ್. ಸುಭಾಷ್ ಚಂದ್ರ, ಸುಳ್ಯ ತಾಲೂಕು ಸಂಘದ ಅಧ್ಯಕ್ಷ ನಾಗರಾಜ ಅಜ್ಜಾವರ, ಮುಲ್ಕಿ ತಾಲೂಕು ಸಂಘದ ಅಧ್ಯಕ್ಷ ಸದಾಶಿವ ಹೊಸದುರ್ಗ, ಮೂಡುಬಿದ್ರೆ ತಾಲೂಕು ಸಂಘದ ಅಧ್ಯಕ್ಷ ಅಧ್ಯಕ್ಷೆ ಕವಿತಾ ಹರೀಶ್, ಡಾ ಜಯರಾಜನ್ ಪಯ್ಯನ್ನೂರ್, ಎನ್. ಕೆ.ಶಿವ, ಸುರೇಶ್ ಕಾರ್ಕಳ, ಪದ್ಮನಾಭನ್. ಕೆ ಉಪಸ್ಥಿತರಿದ್ದರು. ಸಂದರ್ಭ ನಾರಾಯಣ ಕರಿಂಬಿಲ, ನಾರಾಯಣ ನಾಯ್ಕಪು, ಸುಂದರಿ ಮಿಂಜಾ, ನಾರಾಯಣ ಬಂಗೇರ ಬಾಡೂರು, ಕೃಷ್ಣ ಮಧೂರು, ನಾರಾಯಣ ಕುಂಜತ್ತೂರು ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ, ಸರ್ಕಾರಿ ಐ.ಟಿ.ಐ. ನಿವೃತ್ತ ಪ್ರಾಂಶುಪಾಲ ಚಂದ್ರಶೇಖರ ಕೂಡ್ಲು, ಪ್ರಕಾಶ್ ಬಿ.ಎನ್. ಮಂಗಳೂರು, ಕೋ ಓಪರೇಪರೇಟಿವ್ ಬ್ಯಾಂಕ್ ಕಾರ್ಯದರ್ಶಿ ಪರಮೇಶ್ವರ ಪೈವಳಿಕೆ, ನಿವೃತ್ತ ಪೆÇಲೀಸ್ ಅಧಿಕಾರಿ ವಸಂತ ಬಂಗೇರ ಪೆರಡಾಲ, ನಿವೃತ್ತ ಶಾಲಾ ಮುಖ್ಯೋಪಾದ್ಯಾಯಿನಿ ಶಶಿಕಲಾ. ಪಿ. ಕುಂಜತ್ತೂರು, ಹಾಗೂ ಡಾಕ್ಟರೇಟ್ ಪದವಿ ಪಡೆದ ಸೌಮ್ಯ ಪ್ರವೀಣ್ ಕುಂಬಳೆ, ಹಾಗೂ ಡಾ.ವಾಣಿಶ್ರೀ ಅವಿನಾಶ್ ಬಂಬ್ರಾಣ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಸಚ್ಚಿದಾನಂದ ಖಂಡೇರಿ, ಶಿವರಾಮ ಮೆಣಸಿನಪಾರೆ, ಮೈನಾ ಕುಮಾರಿ ಕುಂಬಳೆ, ರಾಮ ಮುರಿಯಂಕೂಡ್ಲು, ಸಂದೇಶ ಕುಂಬಳೆ, ವಿಠಲ ಸಾಲಿಯನ್ ಕಾಟುಕುಕ್ಕೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಕಲಾ,ಸಾಂಸ್ಕøತಿಕ ವೈವಿಧ್ಯ ಹಾಗೂ ಪ್ರತಿಭಾ ಪುರಸ್ಕಾರ ನಡೆಯಿತು. ದಶಮಾನೋತ್ಸವದ ಅಂಗವಾಗಿ ಆಯೋಜಿಸಲಾದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ರಾಘವ ಶೇಣಿ, ಸ್ವಾಗತಿಸಿದರು. ರಂಗಕರ್ಮಿ ಉದಯಕುಮಾರ್ ಮನ್ನಿಪ್ಪಾಡಿ ಹಾಗೂ ಯಶವಂತ ಮಾಸ್ಟರ್ ಕಾಟುಕುಕ್ಕೆ ಕಾರ್ಯಕ್ರಮ ನಿರೂಪಿಸಿದರು. ಸದಾಶಿವ ಟಿ. ಪ್ರತಾಪ ನಗರ ವರದಿ ವಾಚಿಸಿದರು. ಸಂಜೀವ ಮಾನ್ಯ ಹಾಗೂ ಸ್ವಾತಿಕ್ ಎಸ್ ವಂದಿಸಿದರು.
ಕಾಸರಗೋಡು ಜಿಲ್ಲಾ ಅಗಸರ ಯಾನೆ ಮಡಿವಾಳರ ಸಂಘದ ದಶಮಾನೋತ್ಸವ
0
ಫೆಬ್ರವರಿ 01, 2023
Tags





