ಕಾಸರಗೋಡು: ಕನ್ನಡದ ಖ್ಯಾತ ಕವಿ,ವಿಮರ್ಶಕ, ಭಾಷಾವಿಜ್ಞಾನಿ ಕೆ.ವಿ ತಿರುಮಲೇಶ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ವತಿಯಿಂದ ಕಾಸರಗೋಡಿನ ಸಾಹಿತ್ಯ ಪರಿಷತ್ತು ಕಛೇರಿಯಲ್ಲಿ ನುಡಿ ನಮನ ಸಲ್ಲಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಉಪನ್ಯಾಸಕಿ,ಸಾಹಿತಿ ಡಾ. ಯು. ಮಹೇಶ್ವರಿ ನುಡಿನಮನ ಸಲ್ಲಿಸಿ ಮಾತನಾಡಿ, ದೇಶ ಸುತ್ತು ಕೋಶ ಓದು ಎನ್ನುವ ಮಾತಿನಂತೆ ಕೆ.ವಿ ತಿರುಮಲೇಶರು ಇಂಗ್ಲೆಂಡ್ ,ಅಮೇರಿಕ ,ಯೆಮನ್,ಹೈದರಾಬಾದ್,ಕಾಸರಗೋಡು ಹೀಗೆ ವಿವಿಧೆಡೆ ಉಪನ್ಯಾಸಕರಾಗಿ ಮಾಡಿದ ತಿರುಗಾಟ ಮತ್ತು ಆಳವಾದ ಅಧ್ಯಯನ, ಓದಿನ ಮೂಲಕ ಗಳಿಸಿದ ಅನುಭವದ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ತಿಳಿಸಿದರು. ಕವಿ,ಪತ್ರಕರ್ತ ರಾಧಾಕೃಷ್ಣ.ಕೆ ಉಳಿಯತ್ತಡ್ಕ ಶ್ರದ್ದಂಜಲಿ ಸಲ್ಲಿಸಿ ಮಾತನಾಡಿ, ಕವಿಯಾಗಿ,ಕಥೆಗಾರನಾಗಿ,ಅನುವಾದಕನಾಗಿ ಕಾದಂಬರಿಕಾರನಾಗಿ,ವಿಮರ್ಶಕನಾಗಿ,ಭಾಷಾವಿಜ್ಞಾನಿಯಾಗಿ ಕೆ.ವಿ ತಿರುಮಲೇಶರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅನನ್ಯವಾದುದು ಎಂದು ಹೇಳಿದರು.
ಸಾಹಿತಿ ವೈ.ಸತ್ಯನಾರಾಯಣ ಕಾಸರಗೋಡು,ಸಿರಿಗನ್ನಡ ವೇದಿಕೆಯ ಅಧ್ಯಕ್ಷ ವಿ.ಬಿ ಕುಳಮರ್ವ,ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಜತೆಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಗಮಕಕಲಾ ಪರಿಷತ್ತು ಗಡಿನಾಡ ಘಟಕಾಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್,ಶಶಿ ಭಾಟಿಯ,ಡಿ.ಜಯನಾರಾಯಣ ತಾಯನ್ನೂರು,ಸುಕುಮಾರ ಆಲಂಪಾಡಿ,ಉಪನ್ಯಾಸಕಿ ಲಕ್ಷ್ಮಿ .ಕೆ,ನಿವೃತ್ತ ಮುಖ್ಯಶಿಕ್ಷಕಿ ಜಯಶೀಲ.ಕೆ, ಶಿಕ್ಷಕಿ ರೋಜ ನುಡಿನಮನ ಸಲ್ಲಿಸಿದರು. ಗಣೇಶ ಪ್ರಸಾದ ಪಾಣೂರು ಸ್ವಾಗತಿಸಿದರು. ಉಪನ್ಯಾಸಕಿ ಆಶಾಲತಾ ಸಿ.ಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಾಹಿತ್ಯ ಪರಿಷತ್ತಿನಿಂದ ಕೆ.ವಿ ತಿರುಮಲೇಶರಿ ಅವರಿಗೆ ನುಡಿನಮನ
0
ಫೆಬ್ರವರಿ 01, 2023
Tags





