ಪೆರ್ಲ: ಎಣ್ಮಕಜೆ ಪಂಚಾಯಿತಿಯ ಬಣ್ಪುತ್ತಡ್ಕ ಸನಿಹದ ಶೇಣಿ ಮಙËರೆ ಎಂಬಲ್ಲಿ ಮನೆಯೊಳಗೆ ಮಹಿಳೆ ಮೃತದೇಹ ಜೀರ್ಣಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಮಹಿಳೆ ಜತೆ ವಾಸಿಸುತ್ತಿದ್ದ ಈಕೆ ಪತಿಯೆನ್ನಲಾದ ವ್ಯಕ್ತಿ ಸ್ಥಳದಿಂದ ನಾಪತ್ತೆಯಗಿದ್ದು, ನಿಗೂಢತೆಗೆ ಕಾರಣವಾಗಿದೆ.ಕೊಲ್ಲಂ ನಿವಾಸಿ ನೀತುಕೃಷ್ಣ(30)ಎಂಬೇಕೆ ಮೃತಪಟ್ಟವರು.ಇವರ ಜತೆಗಿದ್ದ ವಯನಾಡ್ ನಿವಾಸಿ ಆಂಟೋಸೆಬಾಸ್ಟಿಯನ್ ನಾಪತ್ತೆಯಾಗಿದ್ದಾನೆ.
ಶೇಣಿ ಮಙËರೆ ಎಂಬಲ್ಲಿ ರಿಜೋಜೋಸೆಫ್ ಎಂಬವರ ಮೂರು ಎಕರೆ ರಬ್ಬರ್ ತೋಟದ ಟ್ಯಾಪಿಂಗ್‍ಗಾಗಿ ಒಂದುವರೆ ತಿಂಗಳ ಹಿಂದೆ ಈ ಜೋಡಿ ಆಗಮಿಸಿದ್ದು, ಇಲ್ಲಿನ ಶೆಡ್‍ನಲ್ಲಿ ವಾಸಿಸುತ್ತಿದ್ದರು. ಇವರ ವಾಸ ಸ್ಥಳದ ಸನಿಹ ವೆಳ್ಳರಿಕುಂಡು ನಿವಾಸಿ ರಿಜೋ ಹಾಗೂ ಬಂಗಾಳಿ ನಿವಾಸಿಗಳಿಬ್ಬರೂ ವಾಸಿಸುತ್ತಿದ್ದು, ಮಹಿಳೆ ಎರಡು ದಿವಸಗಳಿಂದ ಕಾಣದಿರುವುದರಿಂದ ಈಕೆ ಜತೆಗಿದ್ದ ವ್ಯಕ್ತಿಯಲ್ಲಿ ವಿಚಾರಿಸಿದಗ ಮಹಿಳೆ ಊರಿಗೆ ತೆರಲಿರುವುದಾಗಿ ತಿಳಿಸಿದ್ದನು. ಭಾನುವಾರದಿಂದ ಆಂಟೋ ಸೆಬಾಸ್ಟಿಯನ್ ಕೂಡಾ ನಾಪತ್ತೆಯಾಗಿದ್ದಾನೆ. ಈ ಮಧ್ಯೆ ಮನೆಯೊಳಗಿಂದ ದುರ್ಗಂಧ ಹೊರಬರುತ್ತಿದ್ದ ಹಿನ್ನೆಲೆಯಲ್ಲಿ ಹೆಂಚುಸರಿಸಿ ನೋಡಿದಗ ಮ್ರತದೇಹ ಪತ್ತೆಯಾಗಿದೆ.ಬದಿಯಡ್ಕ ಠಾಣೆ ಪೊಲೀಸರು ಹಾಗೂ ಫೋರೆನ್ಸಿಕ್ ವಿಭಾಗದ ತಜ್ಞರು ಸತಲಕ್ಕಾಗಮಿಸಿ ಪಂಚನಾಮೆ ನಡೆಸಿದ್ದಾರೆ.
ಮನೆಯೊಳಗೆ ಮಹಿಳೆಯ ಜೀರ್ಣಗೊಂಡ ಮೃತದೇಹ ಪತ್ತೆ-ಸಾವಿನ ಬಗ್ಗೆ ನಿಗೂಢತೆ
0
ಫೆಬ್ರವರಿ 01, 2023





