HEALTH TIPS

ಉಳಿಯ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಕಳಿಯಾಟ ಮಹೋತ್ಸವಕ್ಕೆ ಸಿದ್ದತೆ


                   ಮಧೂರು : ಉಳಿಯ ಶ್ರೀ ಧನ್ವಂತರಿ ಮಹಾವಿಷ್ಣು ದೇವರ ಸನ್ನಿಧಿಯಲ್ಲಿ ಕಳಿಯಾಟ ಮಹೋತ್ಸವ ಮಾರ್ಚ್ 1 ರಿಂದ 3ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಮಾರ್ಚ್ 1 ರಂದು ಬೆಳಗ್ಗೆ 7 ರಿಂದ ಧಾರ್ಮಿಕ ವಿಧಿ ವಿಧಾನಗಳು ಪ್ರಾರಂಭವಾಗಲಿದೆ. ಸಂಜೆ 6 ಕ್ಕೆ ಅವಳಿ ಕುಟ್ಟಿಚ್ಚಾತನ್ ದೈವಗಳ ಕೋಲ, ರಾತ್ರಿ 10 ರಿಂದ ಪಂಜುರ್ಲಿ ದೈವದ ಕೋಲ ನಡೆಯಲಿದೆ. ಮಾರ್ಚ್ 2 ರಂದು ಬೆಳಗ್ಗೆ 9 ರಿಂದ ಇತ್ತಿಕಟ್ಟೆ ಚಾಮುಂಡಿ ದೈವದ ಕೋಲ, ಮಧ್ಯಾಹ್ನ 12ಕ್ಕೆ ಅರೆಯಾಲ್ ಚಾಮುಂಡಿ ದೈವದ ಕೋಲ, ರಾತ್ರಿ 10 ಕ್ಕೆ ಕಾಡೆತ್ತಿ ದೈವದ ಕೋಲ ಜರಗಲಿದೆ.
          ಮಾರ್ಚ್ 3 ರಂದು ಬೆಳಗ್ಗೆ 6 ಕ್ಕೆ ರಕ್ತಶ್ವರೀ ದೈವದ ಕೋಲ, 11 ಕ್ಕೆ ಪಡ್ಡೆಯಿ ಧೂಮಾವತಿ ದೈವದ ಕೋಲ, ಮಧ್ಯಾಹ್ನ 12 ಕ್ಕೆ ವಿಷ್ಣುಮೂರ್ತಿ ದೈವದ ಕೋಲ, ಅಪರಾಹ್ನ 3ಕ್ಕೆ ಅಧಿಕಾರಿ ಚಾಮುಂಡಿ ದೈವದ ಕೊಲದೊಂದಿಗೆ ಕಳಿಯಾಟ ಸಂಪನ್ನಗೊಳ್ಳಲಿದೆ. 3 ದಿನಗಳಲ್ಲೂ ಮದ್ಯಾಹ್ನ ಮತ್ತು ರಾತ್ರಿ ಅನ್ನಪ್ರಸಾದ ವಿತರಣೆ ನಡೆಯಲಿದೆ. ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರ ಮಾರ್ಗ ದರ್ಶನದಲ್ಲಿ ಕಳಿಯಾಟ ಮಹೋತ್ಸವ ಸಮಿತಿ ಮತ್ತು ಸೇವಾ ಸಮಿತಿಯ ಸರ್ವ ಸದಸ್ಯರು ಕಳಿಯಾಟ ಮಹೋತ್ಸವದ ಯಶಸ್ವಿಗೆ ಸಕ್ರಿಯರಾಗಿದ್ದು, ಬುಧವಾರ ಸಂಪ್ರಾರ್ಥನೆ ನಡೆಯಿತು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries