ಮಂಜೇಶ್ವರ: ಹಿಂದುತ್ವದ ಆಚರಣೆಗಳು ಕೇವಲ ನಂಬಿಕೆ ಮಾತ್ರವಲ್ಲ ಅದು ಧರ್ಮ ಸಂರಕ್ಷಣೆಯ ಅಂಗ. ಆಚರಣೆಗಳು ಮೂಢ ನಂಬಿಕೆ ಅಲ್ಲ, ಅದು ಮೂಲ ನಂಬಿಕೆಯ ಸಂರಕ್ಷಣೆಯ ಭಾಗ ಎಂದು ಮಾಡ ಕ್ಷೇತ್ರದ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಡÀ ಹೇಳಿದರು.
ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಾಹ್ಮಕಲಶೋತ್ಸವದ ಧಾರ್ಮಿಕ ಸಭಾ ವೇದಿಕೆಯಲ್ಲಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಪದ್ಮನಾಭ ಕಡಪ್ಪÀರ ಅಧ್ಯಕ್ಷತೆ ವಹಿಸಿದ್ದರು. ಮೋಹನ್ ಶೆಟ್ಟಿ ತೂಮಿನಾಡ್, ಯದುನಂದ ಆಚಾರ್ಯ ಬಿ.ಎಂ, ಹರಿಶ್ಚಂದ್ರ ಶೆಟ್ಟಿಗಾರ್, ನವೀನ್ ರಾಜ್, ಗುರುಸ್ವಾಮಿ ಉದಯ ಪಾವಳ, ಅಂಬುಜಾಕ್ಷಿ, ಜಯಂತ ಆಚಾರ್ಯ, ಬಾಡೂರು ಪದ್ಮನಾಭ ಆಚಾರ್ಯ ಉಪಸ್ಥಿತರಿದ್ದರು.
ಕ್ಷೇತ್ರ ಪ್ರ.ಕಾರ್ಯದರ್ಶಿ ಆದರ್ಶ್ ಬಿ.ಎಂ ಸ್ವಾಗತಿಸಿ, ಹರೀಶ್ ಶೆಟ್ಟಿ ಮಾಡ ವಂದಿಸಿದರು.
ಧಾರ್ಮಿಕ ಆಚರಣೆಗಳು ಸಂರಕ್ಷಣೆಯ ಸಂಕೇತ: ರಾಜ ಬೆಳ್ಚಡ
0
ಫೆಬ್ರವರಿ 24, 2023
Tags

.jpg)
