HEALTH TIPS

ಕನ್ನಡದ ಪ್ರಚೀನ ಕೃತಿಗಳು ಕನ್ನಡದ ಅಧ್ಯಯನದ ವೈಶಿಷ್ಟ್ಯಕ್ಕೆ ಸಾಕ್ಷಿ-ಆರ್‍ವಿಎಸ್ ಸುಂದರಂ ಅಭಿಪ್ರಾಯ: ದಿ. ಸುಬ್ರಾಯ ಭಟ್ ಸಂಸ್ಮರಣೆ, 'ಸಾರಥಿ' ಸಂಸ್ಮರಣಾ ಗ್ರಂಥ ಬಿಡುಗಡೆ ಸಮಾರಂಭ


               ಕಾಸರಗೋಡು: ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಪ್ರಾಚೀನಕೃತಿಗಳು ಇಂದಿಗೂ ಪಠ್ಯವಾಗಿ ಲಭ್ಯವಿದ್ದು, ಇದು ಕನ್ನಡ ಅಧ್ಯಯನದ ವೈಶಿಷ್ಟ್ಯಕ್ಕೆ ಸಾಕ್ಷಿಯಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಪ್ರಸಾರಾಂಗದ ವಿಶ್ರಾಂತ ನಿರ್ದೇಶಕ ಡಾ. ಆರ್ ವಿ ಎಸ್ ಸುಂದರಂ ತಿಳಿಸಿದ್ದಾರೆ.
         ಅವರು ಕಾಸರಗೋಡು ಸರ್ಕಾರಿ ಕಾಲೇಜು ಸಭಾಂಗಣದಲ್ಲಿ ನಡೆದ ಪ್ರಾಚಾರ್ಯ ದಿ. ಸುಬ್ರಾಯ ಭಟ್ ಜನ್ಮಶತಮಾನೋತ್ಸವ ಸಮಾರಂಭದಲ್ಲಿ 'ಸಾರಥಿ' ಸಂಸ್ಮರಣಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.
          ವ್ಯಾಖ್ಯಾನ ಕೃತಿಗಳು ಹೇಗಿರಬೇಕು ಎಂಬುದಕ್ಕೆ ದಿ. ಸುಬ್ರಾಯಭಟ್ ಅವರ ಗದಾಯುದ್ಧ ದರ್ಪಣ ಒಂದು ಮಾದರಿಯಾಗಿದೆ.ಇಂತಹ ಮಹಾನುಭಾವರನ್ನುನೂರು ವರ್ಷಗಳ ನಂತರವೂ ನೆನಪಿಸಿಕೊಳ್ಳುವುದರಲ್ಲಿ ಹಿರಿಮೆ ಇದೆ. ದಿ. ಸಉಬ್ರಾಯ ಭಟ್ಟ ಅವರ  ಸಂಸ್ಮರಣ ಗ್ರಂಥ ಅವರ ನೆನಪಿನ ದ್ಯೋತಕವಾಗಿದೆ ಎಂದು ತಿಳಿಸಿದರು.
ಸಾರಥಿಯ ಪ್ರಧಾನ ಸಂಪಾದಕಿ ಡಾ. ಪ್ರಮೀಳಾ ಮಾಧವ ಅವರು ಮಾತನಾಡಿ, 'ಕಾಸರಗೋಡಿನಲ್ಲಿ ಶೈಕ್ಷಣಿಕವಾಗಿ ಕನ್ನಡವನ್ನು ಉಳಿಸಿ ಬೆಳೆಸಲುಕಾರಣಕರ್ತರಾದ ಸುಬ್ರಾಯಭಟ್ಟರು ಆದರ್ಶ ಗುರುಗಳಾಗಿ ಖ್ಯಾತಿ ಪಡೆದಿದ್ದಾರೆ. ಅವರ ನೂರರನೆನಪಿನಲ್ಲಿ ಸಂಸ್ಮರಣ ಗ್ರಂಥ ರಚನೆಗೆ ಸಂಪಾದಕಿಯಾಗಿ ಆಯ್ಕೆಯಾದದ್ದು ನನ್ನಭಾಗ್ಯ' ಎಂದು ಅವರು ನುಡಿದರು. ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥ ಡಾ.ತಾಳ್ತಜೆ ವಸಂತಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾಷಾವಾರು ಪ್ರಾಂತ್ಯ ರಚನೆಯನ್ವಯ ಕಾಸರಗೋಡು ಕೇರಳ ಸೇರ್ಪಡೆಯಿಂದ ಕಂಗೆಟ್ಟ ಇಲ್ಲಿನ ಕನ್ನಡಿಗರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಿ ಕಾಸರಗೋಡಿನಲ್ಲಿ ಕನ್ನಡವನ್ನು ಕಟ್ಟಿಬೆಳೆಸಿದವರಲ್ಲಿ ಸುಬ್ರಾಯಭಟ್ಟರು ಪ್ರಮುಖರು. ಮಲಯಾಳಿಗರ ಜತೆಯಲ್ಲಿಅವರು ಸಂಘರ್ಷಕ್ಕಿಂತ ಸವನ್ವಯದ ಹಾದಿಯಲ್ಲಿ ನಡೆದರು. ಈ ಮೂಲಕ ಸುಬ್ರಾಯಭಟ್ಟರು ಕಾಸರಗೋಡಿನಲ್ಲಿ ಕನ್ನಡದ ಅಸ್ಮಿತೆಯ ಕುರುಹಾಗಿ ಬದುಕಿದರು ಎಂದು ತಿಳಿಸಿದರು.
         ವಿಶ್ರಾಂತ ಪ್ರಾಂಶುಪಾಲ ಡಾ.ಬಿ.ಭಾಟಿಯ, ಸಾಮಾಜಿಕ ಕಾರ್ಯಕರ್ತ ಎನ್.ಸತೀಶ ಮನ್ನಿಪ್ಪಾಡಿ, ನಿವೃತ್ತ ಮುಖೋಪಾಧ್ಯಾಯ ಪಿ.ವಿ. ಕೇಶವ ಸಂಸ್ಮರಣ ನುಡಿನಮನ ಸಲ್ಲಿಸಿದರು. ವಿದ್ಯಾರ್ಥಿನಿ ಅಮಿತಾ ಆರ್‍ಶೆಟ್ಟಿ ಕಾರ್ಯಕ್ರಮನಿರೂಪಿಸಿದರು. ಪ್ರಾಚಾರ್ಯ ದಿ. ಪಿ. ಸುಬ್ರಾಯ ಭಟ್ ಜನ್ಮ ಶತಮಾನೋತ್ಸವ ಸಮಿತಿ ಮತ್ತುಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗ, ಸರಕಾರಿಕಾಲೇಜು ಕಾಸರಗೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವು ನಡೆಯಿತು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries