HEALTH TIPS

ಮಣಿಯದ ಗವರ್ನರ್; ವಿವಾದಾತ್ಮಕ ಮಸೂದೆಗಳಿಗೆ ಸಹಿ ಹಾಕದಿರುವ ಸೂಚನೆ: ಮುಖ್ಯಮಂತ್ರಿ ವಿರುದ್ಧ ಕಟು ಟೀಕೆ


            ತಿರುವನಂತಪುರಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಬಹಿರಂಗವಾಗಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
            ಆಡಳಿತಾತ್ಮಕ ವಿಷಯಗಳನ್ನು ವಿವರಿಸುವ ಸಾಂವಿಧಾನಿಕ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ ಈಡೇರಿಸಿಲ್ಲ ಎಂದು ರಾಜ್ಯಪಾಲರು ಆರೋಪಿಸಿದರು. ರಾಜಭವನದಲ್ಲಿ ನಿನ್ನೆ ಸಂಜೆ ಆಯೋಜಿಸಿದ್ದ ಸಚಿವರಾದ ಪಿ ರಾಜೀವ್, ವಿಎನ್ ವಾಸವನ್, ಆರ್ ಬಿಂದು ಮತ್ತು ವಿ ಅಬ್ದುರ್ ರೆಹಮಾನ್ ಅವರೊಂದಿಗಿನ ಸಭೆಯ ಸ್ವಲ್ಪ ಮೊದಲು ಅವರ ಪ್ರತಿಕ್ರಿಯೆ ನೀಡಿದರು.
         "ಯಾರೂ ತಮ್ಮದೇ ನ್ಯಾಯಾಧೀಶರಾಗಲು ಸಾಧ್ಯವಿಲ್ಲ. ಸಚಿವರ ವಿವರಣೆಯನ್ನು ನೋಡಿ ತಮ್ಮ ನಿರ್ಧಾರಗಳನ್ನು ತಳೆಯಲಾಗುವುದು. ತೃಪ್ತಿಕರ ವಿವರಣೆಯನ್ನು ಪಡೆದರೆ, ತಮ್ಮ ನಿಲುವನ್ನು ತಿಳಿಸಲಾಗುವುದು. ಸಂವಿಧಾನ ಮತ್ತು ಕಾನೂನು ಸುವ್ಯವಸ್ಥೆಗೆ ನಿμÉ್ಠ ಎಂದು ಪ್ರಮಾಣ ವಚನ ಸ್ವೀಕರಿಸಲಾಗಿದೆ. ಅದನ್ನು ಕಾರ್ಯರೂಪಕ್ಕೆ ತರಲು ಅವರು ಸದಾ ಜಾಗೃತರಾಗಿರುತ್ತಾರೆ. ಕುಲಪತಿಯಾಗಿ ಕೂರುವಂತೆ ಸ್ವತಃ ಮುಖ್ಯಮಂತ್ರಿಗಳೇ ಪತ್ರ ನೀಡಿದ್ದಾರೆ. ಕೆಲವು ಬಿಲ್‍ಗಳಿಗೆ ಸಹಿ ಹಾಕಬೇಕಿದೆ. ಮಸೂದೆಗಳು ಇನ್ನೂ ಸ್ಪಷ್ಟವಾಗಬೇಕಿದೆ. ರಾಜ್ಯಪಾಲರಾಗಿ ಸಂವಿಧಾನದ ಪ್ರಕಾರವೇ ನಡೆದುಕೊಳಲಾಗುವುದು ಎಂದು ರಾಜ್ಯಪಾಲರು ಹೇಳಿದರು.
         ಏಕ ನಾಗರಿಕ ಸಂಹಿತೆಯ ಪರವಾಗಿದ್ದ ಎಡಪಕ್ಷಗಳು ಈಗ ತಮ್ಮ ನಿಲುವು ಬದಲಿಸುತ್ತಿವೆ. ಇದು ಹೊಸ ರಾಜಕೀಯ ಮೈತ್ರಿಗಳಿಗೆ ಇರಬಹುದು ಎಂದು ತೋರುತ್ತದೆ. ಎಡಪಕ್ಷಗಳು ತ್ರಿವಳಿ ತಲಾಖ್ ಬಗ್ಗೆ ಇಎಂಎಸ್‍ಗಿಂತ ಭಿನ್ನವಾದ ನಿಲುವನ್ನು ತೆಗೆದುಕೊಳ್ಳುತ್ತವೆ. ಈ ಕ್ರಿಯೆಯಿಂದ ಇಎಮ್‍ಎಸ್‍ನ ಚೈತನ್ಯವು ಕದಡಬಹುದು. ಸರ್ಕಾರದ ವಿರುದ್ಧದ ದೂರುಗಳ ಬಗ್ಗೆ ತನಿಖೆ ನಡೆಸಬೇಕೆ ಎಂದು ನಿರ್ಧರಿಸುವುದು ಸರ್ಕಾರವಲ್ಲ. ಸಂವಿಧಾನದ ತತ್ವಗಳನ್ನು ಪಾಲಿಸಲು ಎಚ್ಚರಿಕೆ ವಹಿಸುವುದಾಗಿ ಹೇಳಿದರು. ರಾಜಭವನದಲ್ಲಿ ಸಚಿವರಿಗೆ ಸ್ವಾಗತ ಈ ಹಿಂದೆ ಭೇಟಿಯಾಗಲು ಸಚಿವರು ಸಮಯ ಕೇಳಿರÀಲಿಲ್ಲ. ಯಾವುದೇ ಕಾರಣ ನೀಡಿಲ್ಲ. ಆಡಳಿತಾತ್ಮಕ ವಿಷಯಗಳ ಬಗ್ಗೆ ತಿಳಿಸುವುದು ಮುಖ್ಯಮಂತ್ರಿಯ ಕರ್ತವ್ಯವಾಗಿದ್ದು, ಮುಖ್ಯಮಂತ್ರಿ ಆ ಕರ್ತವ್ಯ ನಿರ್ವಹಿಸುತ್ತಿಲ್ಲ. ಬದಲಿಗೆ ಸಚಿವರನ್ನು ಕಳುಹಿಸುವ ಅಗತ್ಯವಿಲ್ಲ ಎಂದು ಆರಿಫ್ ಮುಹಮ್ಮದ್ ಖಾನ್ ಪ್ರತಿಕ್ರಿಯಿಸಿದ್ದಾರೆ

           ಇದೇ ವೇಳೆ ವಿಧಾನಸಭೆ ಅಂಗೀಕರಿಸಿದ ಹಾಗೂ ರಾಜ್ಯಪಾಲರು ಅಂಕಿತ ಹಾಕಬೇಕಿರುವ ಕೆಲವು ವಿಧೇಯಕಗಳ ಕುರಿತು ಸಚಿವರು ರಾಜ್ಯಪಾಲರಿಗೆ ಸರ್ಕಾರದ ಪರ ವಿವರಿಸಿದರು.ಆದರೆ ರಾಜ್ಯಪಾಲರು ಈ ಬಗ್ಗೆ ಸಚಿವರ ಬಳಿ ಅಸಮಾಧಾನ ವ್ಯಕ್ತಪಡಿಸಿದರು. ಸಚಿವರು ಬಂದು ವಿವರಣೆ ನೀಡಿದರೆ ಮಾತ್ರ ವಿಧೇಯಕಕ್ಕೆ ಅಂಕಿತ ಹಾಕುವ ಕುರಿತು ಚಿಂತನೆ ನಡೆಸುವುದಾಗಿ ರಾಜ್ಯಪಾಲರು ಇದಕ್ಕೂ ಮುನ್ನ ಸ್ಪಷ್ಟಪಡಿಸಿದ್ದರು. ಇದರ ಆಧಾರದ ಮೇಲೆ ಸಚಿವರು ರಾಜಭವನಕ್ಕೆ ಬಂದು ವಿವರಣೆ ನೀಡಿದರು. ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ, ರಾಜ್ಯಪಾಲರನ್ನು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯಿಂದ ವಜಾಗೊಳಿಸುವ ವಿಧೇಯಕ ಸೇರಿದಂತೆ ಎಂಟು ವಿಧೇಯಕಗಳು ರಾಜಭವನದಲ್ಲಿವೆ. ದೆಹಲಿಯಲ್ಲಿದ್ದ ರಾಜ್ಯಪಾಲರು ನಿನ್ನೆ ಸಂಜೆ ತಿರುವನಂತಪುರಕ್ಕೆ ಮರಳಿದ್ದರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries