HEALTH TIPS

ಅಮೆರಿಕದ ಸಾರ್ವಭೌಮತೆಗೆ ಬೆದರಿಕೆವೊಡ್ಡಿದರೆ ಚೀನಾಕ್ಕೆ ತಕ್ಕ ಉತ್ತರ: ಬೈಡನ್

 

                ವಾಷಿಂಗ್ಟನ್: ದೇಶದ ಸಾರ್ವಭೌಮತೆಗೆ ಚೀನಾ ಬೆದರಿಕೆವೊಡ್ಡಿದ್ದೇಯಾದರೆ, ಅದಕ್ಕೆ ಅಮೆರಿಕ ತಕ್ಕ ಪ್ರತ್ಯುತ್ತರ ನೀಡುವುದು ಎಂದು ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ.

                  ಅಮೆರಿಕ ಸಂಸತ್‌ನ ಉಭಯ ಸದನಗಳನ್ನು ಉದ್ದೇಶಿಸಿ ಮಂಗಳವಾರ ಅವರು ಮಾತನಾಡಿದರು.

                    ನೂತನ ವರ್ಷ ಆರಂಭದಲ್ಲಿ ಅಮೆರಿಕದ ಅಧ್ಯಕ್ಷರು ಸಂಸತ್‌ನ ಎರಡೂ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡುವುದು ಸಂಪ್ರದಾಯ. ದೇಶದ ಪ್ರಸಕ್ತ ವಿದ್ಯಮಾನಗಳ ಕುರಿತು ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಾರೆ.

               ಗೂಢಚಾರಿಕೆಗಾಗಿ ಬಲೂನ್‌ ಹಾರಿಬಿಡಲಾಗಿತ್ತು ಎಂಬ ಶಂಕೆಯಿಂದ, ಇತ್ತೀಚೆಗೆ ಅಟ್ಲಾಂಟಿಕ್‌ ಸಾಗರದ ಮೇಲೆ ಕಾಣಿಸಿಕೊಂಡಿದ್ದ ಚೀನಾದ ಬಲೂನ್‌ಅನ್ನು ಅಮೆರಿಕ ಹೊಡೆದುರುಳಿಸಿದೆ. ಈ ಹಿನ್ನೆಲೆಯಲ್ಲಿ ಬೈಡನ್ ಹೇಳಿಕೆಗೆ ಮಹತ್ವ ಬಂದಿದೆ.

                 ಸುಧಾರಣಾ ಕ್ರಮಗಳಿಗೆ ಕರೆ: ದೇಶದಲ್ಲಿ ಜನಾಂಗೀಯ ಹಿಂಸೆ ಹೆಚ್ಚುತ್ತಿರುವ ಕುರಿತು ಪ್ರಸ್ತಾಪಿಸಿದ ಅವರು, ದೇಶದಲ್ಲಿ ವಾಸಿಸುವ ಎಲ್ಲರ ರಕ್ಷಣೆಗಾಗಿ ಪೊಲೀಸ್‌ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಸಂಸದರಿಗೆ ಕರೆ ನೀಡಿದರು.

                       'ಮೇಡ್‌ ಇನ್ ಅಮೆರಿಕ' ತತ್ವದಡಿ ದೇಶದಲ್ಲಿಯೇ ಉತ್ಪಾದನೆ ಹಾಗೂ ಉತ್ಪಾದಿತ ವಸ್ತುಗಳ ಬಳಕೆಗೆ ನನ್ನ ಆಡಳಿತ ಆದ್ಯತೆ ನೀಡುವುದು. ಸೇತುವೆಗಳು, ರಸ್ತೆ, ಹೆದ್ದಾರಿಗಳ ನಿರ್ಮಾಣಕ್ಕೆ ಅಮೆರಿಕದಲ್ಲಿಯೇ ಉತ್ಪಾದಿಸಿದ ವಸ್ತುಗಳನ್ನು ಬಳಸಬೇಕು. ವಿಶ್ವದಲ್ಲಿಯೇ ಅತ್ಯುತ್ತಮ ಮೂಲಸೌಕರ್ಯವನ್ನು ಅಮೆರಿಕ ಹೊಂದುವಂತಾಗಬೇಕು' ಎಂದರು.

                 ದೇಶದ ಆರ್ಥಿಕತೆಯನ್ನು ಹಳಿಗೆ ತರಲು ರಿಪಬ್ಲಿಕನ್ ಸಂಸದರು ಸರ್ಕಾರಕ್ಕೆ ಸಹಕರಿಸಬೇಕು. ರಾಜಕೀಯ ಭಿನ್ನಾಭಿಪ್ರಾಯ ಹಾಗೂ ನಿರಾಶಾವಾದವನ್ನು ಮೆಟ್ಟಿ ನಿಲ್ಲುವ ಅಗತ್ಯತೆ ಇದೆ ಎಂದೂ ಹೇಳಿದರು.

                     ಉಕ್ರೇನ್‌ ಮೇಲಿನ ರಷ್ಯಾ ದಾಳಿಯನ್ನು ಪ್ರಸ್ತಾಪಿಸಿ, ಈ ಆಕ್ರಮಣವು ಜಗತ್ತಿನ ಪಾಲಿಗೇ ಒಂದು ಪರೀಕ್ಷೆಯಾಗಿದೆ ಎಂದರಲ್ಲದೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಿರುದ್ಧ ವಾಗ್ದಾಳಿ ನಡೆಸಿದರು.

                               'ವಲಸೆ ನೀತಿ: ಸಮಗ್ರ ಸುಧಾರಣೆ ಅಗತ್ಯ'

                'ವಲಸೆ ನೀತಿಯಲ್ಲಿ ಸಮಗ್ರ ಸುಧಾರಣೆ ತರುವುದು ಅಗತ್ಯವಿದೆ. ಇದರಿಂದ ಅಕ್ರಮ ವಲಸಿಗರು ಹಾಗೂ ಎಚ್‌-1ಬಿ ವೀಸಾ ಪಡೆದು ದೇಶದಲ್ಲಿ ವಾಸಿಸುವವರಿಗೆ ಅಮೆರಿಕದ ಪೌರತ್ವ ಪಡೆಯಲು ಸುಲಭವಾಗುತ್ತದೆ' ಎಂದು ಅಧ್ಯಕ್ಷ ಜೋ ಬೈಡನ್‌ ಹೇಳಿದರು.

                  'ವಲಸೆ ನೀತಿಯಲ್ಲಿ ಸಮಗ್ರ ಸುಧಾರಣೆಗೆ ಅನುಮೋದನೆ ನೀಡದಿದ್ದರೆ, ಕನಿಷ್ಠ ಪಕ್ಷ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸುವ ಸಲುವಾಗಿ ರಕ್ಷಣಾ ಇಲಾಖೆಗೆ ಅಗತ್ಯ ಸಲಕರಣೆಗಳು ಹಾಗೂ ಸಿಬ್ಬಂದಿಯನ್ನು ನೀಡಬೇಕು ಎಂಬ ನನ್ನ ಯೋಜನೆಗಾದರೂ ಅನುಮೋದನೆ ನೀಡಬೇಕು' ಎಂದು ಅವರು ಸಂಸದರಿಗೆ ಹೇಳಿದರು.

             ಸಂಸತ್‌ನ ಕೆಳಮನೆಯಲ್ಲಿ (ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್) ವಿರೋಧ ಪಕ್ಷವಾದ ರಿಪಬ್ಲಿಕನ್‌ ಬಹುಮತ ಹೊಂದಿದೆ. ಹೀಗಾಗಿ, ವಲಸೆ ನೀತಿಯಲ್ಲಿ ಸುಧಾರಣೆ ತರಬೇಕು ಎಂಬ ಬೈಡನ್‌ ಅವರ ಬೇಡಿಕೆಗೆ ಅನುಮೋದನೆ ಸಿಗುವುದು ಕಷ್ಟ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries