ಪೆರ್ಲ: ಪರಿಶಿಷ್ಟ ಜಾತಿ ಮತ್ತು ವರ್ಗ ವಿಭಾಗದಲ್ಲಿ ಕ್ಷೀರೋತ್ಪಾದಕ ಸಂಘಕ್ಕೆ ಗರಿಷ್ಠ ಹಾಲು ನೀಡಿದ ಹಾಲುತ್ಪಾದಕರಿಗಿರುವ ರಾಜ್ಯ "ಕ್ಷೀರ ಸಹಕಾರಿ" ಪ್ರಶಸ್ತಿಯನ್ನು ಗಳಿಸಿದ ನೆಕ್ಕರೆಮಜಲಿನ ಬಾಲಕೃಷ್ಣ ನಾಯ್ಕ ಎನ್ ಇವರನ್ನು ಪಡ್ರೆ ವಾಣೀನಗರ ಹೈಯರ್ ಸೆಕಂಡರಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಅಭಿನಂದಿಸಲಾಯಿತು. ಪಡ್ರೆ ಕ್ಷೀರೋತ್ಪಾದಕ ಸಹಕಾರಿ ಸಂಘದ ಆಶ್ರಯದಲ್ಲಿ ನಡೆದ ಹುಟ್ಟೂರ ಅಭಿನಂದನಾ ಸಭೆಯನ್ನು ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು.
ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯ ಎಸ್.ಬಿ ನರಸಿಂಹ ಪೂಜಾರಿ ಅಧ್ಯಕ್ಷತೆ ವಹಿಸಿದರು. ಅಭಿನಂದನಾ ಪತ್ರವನ್ನು ಕುಮಾರಿ ರಮ್ಯಾಶ್ರೀ ಕೊಲ್ಲಮಜಲು ವಾಚಿಸಿದರು. ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯ ರಾಮಚಂದ್ರ ಎನ್, ನಿವೃತ್ತ ವಿದ್ಯಾಧಿಕಾರಿ ಸತ್ಯನಾರಾಯಣ ಭಟ್ ಐ, ನಿವೃತ್ತ ಮುಖ್ಯೋಪಾಧ್ಯಾಯ ರಾಮಕೃಷ್ಣ ಎನ್, ಶ್ರೀನಿವಾಸ ಭಟ್ ಅಜಕ್ಕಳಮೂಲೆ ಶುಭಾಸಂಶನೆಗೈದರು. ಕುಮಾರಿ ಪ್ರತಿಭಾ ವಾಣೀನಗರ ಪ್ರಾರ್ಥನೆ ಮತ್ತು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರವಿ ವಾಣೀನಗರ ಸ್ವಾಗತಿಸಿ, ನಿರ್ದೇಶಕ ದಯಾನಂದ ರೈ ವಂದಿಸಿದರು.




.jpg)
.jpg)
