ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಹಾಗೂ ಐ.ಸಿ.ಡಿ.ಎಸ್. ನೇತೃತ್ವದಲ್ಲಿ ವಿಭಿನ್ನ ಸಾಮಾಥ್ರ್ಯದ ಮಕ್ಕಳ ಕಲೋತ್ಸವ ಪೆರ್ಲ ಸಮೀಪದ ಬಜಕೂಡ್ಲಿನ ಶ್ರೀಶಾರದಾ ಮರಾಟಿ ಬೋರ್ಡಿಂಗ್ ಸಭಾಂಗಣದಲ್ಲಿ ಜರಗಿತು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಕಲೋತ್ಸವವನ್ನು ಉದ್ಘಾಟಿಸಿದರು.
ಗ್ರಾ.ಪಂ.ಉಪಾಧ್ಯಕ್ಷೆ ಡಾ. ಜಹನಾಸ್ ಹಂಸಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಾಮೂಹಿಕ ನ್ಯಾಯ ಇಲಾಖೆ ಅಧಿಕಾರಿ ಶೀಬಾ ಮುಂತಾಸ್, ಬ್ಲಾಕ್ ಪಂ.ಸದಸ್ಯ ಅನಿಲ್ ಕುಮಾರ್ ಕೆ.ಪಿ, ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಪಂ.ಸದಸ್ಯರಾದ ಇಂದಿರಾ, ಉಷಾ ಕುಮಾರಿ, ಆಶಾಲತಾ, ಪಂ.ಕಾರ್ಯದರ್ಶಿ ಸುನಿಲ್ ಆರ್, ಹೆಡ್ ಕ್ಲಾರ್ಕ್ ಪ್ರೇಮ್ ಚಂದ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಪಂ.ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌದಭಿ ಹನೀಫ್ ಸ್ವಾಗತಿಸಿ, ಐ.ಸಿ.ಡಿ.ಸಿ. ಮೇಲ್ವಿಚಾರಕಿ ಪ್ರೇಮಲತ ವಂದಿಸಿದರು. ನವಾಸ್ ಮತ್ರ್ಯ ನಿರೂಪಿಸಿದರು. ಬಳಿಕ ನಡೆದ ಮಕ್ಕಳ ಕಲಾ ಪ್ರದರ್ಶನದಲ್ಲಿ ಬಡ್ಸ್ ಶಾಲೆ ಹಾಗೂ ನವಜೀವನ ಸ್ಪೇಶಲ್ ಶಾಲಾ ಮಕ್ಕಳು ತಮ್ಮ ಪ್ರತಿಭಾ ಪ್ರದರ್ಶನಗೈದರು.




.jpg)
