ಮಂಜೇಶ್ವರ: ಅಧ್ಯಾತ್ಮಿಕ ಆಚರಣೆಗಳ ವಿರುದ್ಧ ತೌಹೀದ್ ಚಳವಳಿ ಎಂಬ ಘೋಷ ವಾಕ್ಯದೊಂದಿಗೆ ಕೇರಳ ರಾಜ್ಯಾದ್ಯಂತ ನಡೆಯುತ್ತಿರುವ ವಿಜ್ಞಾನ ವೇದಿಕೆಯ ಕ್ಯಾಂಪೈನ್ ಭಾಗವಾಗಿ ಐ.ಎಸ್.ಎಂ. ಮಂಜೇಶ್ವರ ಘಟಕದ ವತಿಯಿಂದ ತೂಮಿನಾಡು ಜಂಕ್ಷನಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಎಸ್.ಕೆ.ಎಸ್.ಎಂ. ಅಧ್ಯಕ್ಷ ಬಶೀರ್ ಶಾಲಿಮಾರ್ ವಿಜ್ಞಾನ ವೇದಿಕೆ ಉದ್ಘಾಟಿಸಿದರು. ಇಬ್ರಾಹಿಂ ದಾರಿಮಿ ಅಧ್ಯಕ್ಷತೆ ವಹಿಸಿದರು. ಮುಸ್ತಫಾ ದಾರಿಮಿ ಹಾಗೂ ಮುಹಮ್ಮದ್ ಅಲಿ ಸಲಫಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು. ವೇದಿಕೆಯಲ್ಲಿ ಕೆ.ಎನ್.ಎಂ. ಮಂಜೇಶ್ವರ ಮಂಡಲ ನೇತಾರರಾದ ಅಬ್ದುಲ್ ರಹ್ಮಾನ್ ಅರಿಮಲ, ಅಬ್ದುಲ್ ಖಾದರ್ ಆನೆಕಲ್ಲು, ಸಿದ್ದೀಕ್, ನವಾಝ್ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉನೈಸ್ ಪಾಪಿನಿಶೇರಿ ಮುಖ್ಯ ಭಾಷಣ ಮಾಡಿದರು. ಮಗ್ರಿಬ್ ನಮಾಝಿನ ನಂತರ ಆರಂಭವಾದ ಜ್ಞಾನ ವೇದಿಕೆ ರಾತ್ರಿ 9:30ಕ್ಕೆ ಮುಕ್ತಾಯಗೊಂಡಿತು. ಕಾರ್ಯಕ್ರಮ ವೀಕ್ಷಿಸಲು ಮಂಜೇಶ್ವರ ಉಪ್ಪಳ ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ನೂರಾರು ಮಂದಿ ಆಗಮಿಸಿದ್ದರು.
ಐ ಎಸ್ ಎಂ ಮಂಜೇಶ್ವರ ಘಟಕದ ವತಿಯಿಂದ ತೂಮಿನಾಡು ಜಂಕ್ಷನಿನಲ್ಲಿ ಗಮನ ಸೆಳೆದ ವಿಜ್ಞಾನ ವೇದಿಕೆ
0
ಫೆಬ್ರವರಿ 27, 2023




.jpg)
