ಮಂಜೇಶ್ವರ: ಮಂಜೇಶ್ವರ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿರುವುದನ್ನು ಹಾಗೂ ಹೊಸಂಗಡಿ, ಉಪ್ಪಳ ಸೇರಿದಂತೆ ವಿವಿಧೆಡೆ ಕಾಣಿಸಿಕೊಂಡಿರುವ ಮಾಲಿನ್ಯ ಸಮಸ್ಯೆ ಪರಿಹರಿಸುವ ಬಗ್ಗೆ ಮಂಜೇಶ್ವರ ಶಾಸಕ ನೀಡಿ ಭರವಸೆಗಳನ್ನು ಈಡೇರಿಸದಿರುವುದನ್ನು ಪ್ರತಿಭಟಿಸಿ ಬಿಜೆಪಿ ಮಂಜೇಶ್ವರ ಕ್ಷೇತ್ರ ಸಮಿತಿಯು ಫೆ. 28ರಂದು ಉಪ್ಪಳದಲ್ಲಿರುವ ಶಾಸಕರ ಕಚೇರಿ ಎದುರು ಧರಣಿ ನಡೆಸಲಿದೆ. ಧರಣಿಗೆ ಮೊದಲು ಉಪ್ಪಳ ಕೈಕಂಬದಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿರುವುದು.
ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಬೆಳಗ್ಗೆ 10ಕ್ಕೆ ಕೈಕಂಬದಿಂದ ಉಪ್ಪಳದವರೆಗೆ ನಡೆಯುವ ಮೆರವಣಿಗೆಯನ್ನು ಉದ್ಘಾಟಿಸುವರು. ಪ್ರತಿಭಟನೆಯಲ್ಲಿ ಬಿಜೆಪಿ ಕಾಸರಗೋಡು ಜಿಲ್ಲಾ ಮುಖಂಡರು ಭಾಗವಹಿಸಲಿರುವುದಾಗಿ ಪ್ರಕಟಣೆ ತಿಳಿಸಿದೆ.
ಈಡೇರದ ಭರವಸೆ: ಮಂಜೇಶ್ವರ ಶಾಸಕರ ಕಚೇರಿಗೆ ಇಂದು ಮುತ್ತಿಗೆ
0
ಫೆಬ್ರವರಿ 27, 2023




