ತಿರುವನಂತಪುರಂ: ಪರಿಶೀಲನೆ ನಡೆಸದೆ ಲಂಚ ಪಡೆದು ಹೆಲ್ತ್ ಕಾರ್ಡ್ ನೀಡಿದ ಘಟನೆಯಲ್ಲಿ ತಿರುವನಂತಪುರಂ ಜನರಲ್ ಆಸ್ಪತ್ರೆಯ ಆರ್ ಎಂಒ ಉಸ್ತುವಾರಿ ವಹಿಸಿರುವ ಸಹಾಯಕ ಶಸ್ತ್ರಚಿಕಿತ್ಸಕ ಡಾ.ವಿ.ಅಮಿತ್ ಕುಮಾರ್ ಅವರನ್ನು ತನಿSಗೊಳಪಡಿಸಲಾಗಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಶಿಫಾರಸಿನ ಮೇರೆಗೆ ಆರೋಗ್ಯ ಇಲಾಖೆ ನಿರ್ದೇಶಕರ ಕ್ರಮ ಕೈಗೊಂಡಿದ್ದಾರೆ.
ಆರ್‍ಎಂಒ ಜನರಿಂದ 300 ರೂಪಾಯಿ ಲಂಚ ಪಡೆದು ತಪಾಸಣೆ ನಡೆಸದೆ ಪ್ರಮಾಣ ಪತ್ರ ನೀಡಿರುವ ವಿಡಿಯೋಗಳು ಬೆಳಕಿಗೆ ಬಂದಿದ್ದವು. ಒಂಬತ್ತು ಪರೀಕ್ಷೆಗಳನ್ನು ನಡೆಸಿ ವೈದ್ಯರು ಸಹಿ ಮಾಡಿದ ಪ್ರಮಾಣಪತ್ರವನ್ನು ತೋರಿಸಿದ ನಂತರವೇ ಆರೋಗ್ಯ ಕಾರ್ಡ್ ನೀಡಬೇಕು ಎಂಬುದು ನಿಯಮ. ವೈದ್ಯರು ಲಂಚ ಪಡೆದು ಈ ರೀತಿ ಕಾರ್ಡ್ ಗಳಿಗೆ ಸಹಿ ಹಾಕಿಕೊಟ್ಟಿರುವುದು ಪತ್ತೆಯಾಗಿದೆ.
ಆಹಾರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಆರೋಗ್ಯ ಕಾಡ್ರ್ಗಳನ್ನು ಪರಿಚಯಿಸಿದೆ. ಹೆಲ್ತ್ ಕಾರ್ಡ್ ಇಲ್ಲದವರಿಗೆ ಹೋಟೆಲ್, ಬೇಕರಿ ಇತ್ಯಾದಿಗಳಲ್ಲಿ ಕೆಲಸ ಮಾಡಲು ಅನುಮತಿಸುವುದಿಲ್ಲ ಎಂದು ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ ಅವರು, ಆರೋಗ್ಯ ಇಲಾಖೆ ನೀಡಿರುವ ಹೆಲ್ತ್ ಕಾರ್ಡ್ ಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿರುವರು. ಆರೋಗ್ಯ ಇಲಾಖೆ ಲಂಚ ಪಡೆದು ಹೆಲ್ತ್ ಕಾರ್ಡ್ ನೀಡುತ್ತಿದೆ ಎಂದು ವಿ.ಡಿ.ಸತೀಶನ್ ಆರೋಪಿಸಿದರು.





