ತಿರುವನಂತಪುರಂ: ಅಂಗನವಾಡಿಗೆ ಹೋಗಲು ನಿರಾಕರಿಸಿದ ನಾಲ್ಕೂವರೆ ವರ್ಷದ ಬಾಲಕಿಗೆ ಅಮಾನುಷವಾಗಿ ಥಳಿಸಿದ ಮಗುವಿನ ಅಜ್ಜಿ ಮತ್ತು ತಂದೆಯನ್ನು ಬಂಧಿಸಲಾಗಿದೆ.
ಪೋಲೀಸರು ಇಬ್ಬರ ವಿರುದ್ಧವೂ ಗಂಭೀರ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲನ್ಯಾಯ ಕಾಯ್ದೆಯ ಒಂದು ವಿಭಾಗವು ಮಕ್ಕಳ ಮೇಲೆ ದೌರ್ಜನ್ಯ ಎಸಗಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ದಂಡ ವಿಧಿಸುತ್ತದೆ. ಇದಲ್ಲದೆ ಆಯುಧ ಅಥವಾ ಯಾವುದೇ ವಸ್ತುವಿನಿಂದ ಮಾರಣಾಂತಿಕ ಹಲ್ಲೆ ಮತ್ತು ಹಲ್ಲೆ ಮಾಡಿದ ಆರೋಪಗಳನ್ನು ಸಹ ಅವರ ವಿರುದ್ಧ ಹೊರಿಸಲಾಗಿದೆ.
ಆದರೆ ಪೆÇಲೀಸ್ ಎಫ್‍ಐಆರ್ ಸಂಪೂರ್ಣವಾಗಿ ವಿಭಿನ್ನ ವಿಷಯಗಳನ್ನು ಹೇಳುತ್ತದೆ. ಎಫ್‍ಐಆರ್‍ನಲ್ಲಿ, ಮಗು ಅಂಗನವಾಡಿಗೆ ಹೋಗುವ ಬದಲು ಆರೋಪಿಯೊಂದಿಗೆ ದ್ವೇಷ ಸಾಧಿಸಿದವರ ಮನೆಗೆ ಹೋಗಿದ್ದು, ಕೋಪದಿಂದ ಅಜ್ಜಿ ಥಳಿಸಿದ್ದಾರೆ ಎಂದು ಹೇಳಲಾಗಿದೆ. ಸಂಜೆ ಮನೆಗೆ ಬಂದ ತಂದೆ ಈ ವಿಷಯ ತಿಳಿದು ಮಗುವಿಗೆ ಥಳಿಸಿದ್ದಾರೆ ಎನ್ನಲಾಗಿದೆ.
ಅಂಗನವಾಡಿಗೆ ಹೋಗಲು ಮನಸ್ಸಿಲ್ಲದ ಕಾರಣ ಅಜ್ಜಿ ಮನೆಯಿಂದ ರಸ್ತೆಗೆ ಹೋಗುವ ದಾರಿಯಲ್ಲಿ ಮಗುವಿಗೆ ದೊಣ್ಣೆಯಿಂದ ಹೊಡೆದಿದ್ದಾಳೆ ಎಂದು ಮೊನ್ನೆ ಬಂದ ವರದಿಯಲ್ಲಿ ಹೇಳಲಾಗಿತ್ತು. ಘಟನೆಯ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.' ವೀಡಿಯೋದಲ್ಲಿ ಮಗು ಅಳುತ್ತಾ ``ಹೊಡೀಬೇಡಿ, ಶಾಲೆಗೆ ಹೋಗುತ್ತೇನೆ’ ಎಂದು ಹೇಳುತ್ತಿರುವುದು ಕಂಡುಬಂದಿದೆ. ಅಜ್ಜಿ ಮತ್ತು ತಂದೆ ಬಾಲಕಿಗೆ ನಿತ್ಯ ಥಳಿಸುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ನೆರೆಹೊರೆಯವರು ಮಗುವನ್ನು ಥಳಿಸುವ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಈ ಮೂಲಕ ಘಟನೆ ಬೆಳಕಿಗೆ ಬಂದಿದೆ. ನಂತರ ಸ್ಥಳೀಯ ಸಾರ್ವಜನಿಕ ನೌಕರನ ದೂರಿನ ಮೇರೆಗೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಲ್ಲೆಗೊಳಗಾದ ನಾಲ್ಕೂವರೆ ವರ್ಷದ ಬಾಲಕಿ ಕುಟುಂಬದ ಮೂವರು ಹೆಣ್ಣು ಮಕ್ಕಳಲ್ಲಿ ಕಿರಿಯವಳು.
ಅಂಗನವಾಡಿಗೆ ಹೋಗಲು ನಿರಾಕರಿಸಿ ನಾಲ್ಕೂವರೆ ವರ್ಷದ ಬಾಲಕಿಗೆ ಥಳಿಸಿದ ಘಟನೆ; ಅಜ್ಜಿ ಮತ್ತು ತಂದೆ ಬಂಧನ
0
ಫೆಬ್ರವರಿ 02, 2023





