ಬೀಜಿಂಗ್: ಚೀನಾದ ಶಂಕಿತ ಬೇಹುಗಾರಿಕಾ ಬಲೂನು ಹಾರಾಟ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕವು ಚೀನಾದ ಆರು ಕಂಪನಿಗಳನ್ನು ಶುಕ್ರವಾರ ಕಪ್ಪು ಪಟ್ಟಿಗೆ ಸೇರಿಸಿದೆ.
ಈ ಕಂಪನಿಗಳು ಚೀನಾದ ಅಂತರಿಕ್ಷ ಕಾರ್ಯಕ್ರಮಗಳೊಂದಿಗೆ ನಂಟು ಹೊಂದಿವೆ ಎಂದೂ ಆರೋಪಿಸಿದೆ.
'ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ(ಪಿಎಲ್‌ಎ) ಅಂತರಿಕ್ಷ ಕಾರ್ಯಕ್ರಮಗಳಿಗೆ ನೆರವು ನೀಡುತ್ತಿದ್ದ ಕಾರಣಕ್ಕೆ ಈ ಆರು ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ' ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಬಲೂನು ಹಾರಾಟ ಪ್ರಕರಣದ ಬಳಿಕ ಚೀನಾ ಮತ್ತು ಅಮೆರಿಕ ನಡುವೆ ತಲೆದೋರಿರುವ ರಾಜತಾಂತ್ರಿಕ ಸಂಘರ್ಷವನ್ನು ಅಮೆರಿಕದ ಈ ನಡೆ ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.





