HEALTH TIPS

ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ಗೆ 2023 ರ 'ವರ್ಷದ ಗವರ್ನರ್' ಪ್ರಶಸ್ತಿ ಗರಿ

 

          ಮುಂಬಯಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ಇಂಟರ್‌ನ್ಯಾಷನಲ್ ಎಕನಾಮಿಕ್ ರಿಸರ್ಚ್ ಜರ್ನಲ್ ಸೆಂಟ್ರಲ್ ಬ್ಯಾಂಕಿಂಗ್ 2023 ರ 'ವರ್ಷದ ಗವರ್ನರ್' ಪ್ರಶಸ್ತಿ ನೀಡಿದೆ.

                  ಕಷ್ಟದ ಸಮಯದಲ್ಲಿ ಅವರ ಸ್ಥಿರ ನಾಯಕತ್ವಕ್ಕಾಗಿ ದಾಸ್ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೋವಿಡ್‌ 19 ಮತ್ತು ಉಕ್ರೇನ್‌- ರಷ್ಯಾ ನಡುವಿನ ಯುದ್ಧದಿಂದಾಗಿ ಸೃಷ್ಟಿಯಾದ ಬಿಕ್ಕಟ್ಟನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದಕ್ಕೆ ಅಂತರರಾಷ್ಟ್ರೀಯ ಆರ್ಥಿಕ ಸಂಶೋಧನಾ ಜರ್ನಲ್‌ ಆಗಿರುವ ಸೆಂಟ್ರಲ್‌ ಬ್ಯಾಂಕಿಂಗ್‌ 2023ರ ವರ್ಷದ ಗವರ್ನರ್‌ ಪ್ರಶಸ್ತಿ ನೀಡಿದೆ.

                   ಕೋವಿಡ್‌ 19  ಉಕ್ರೇನ್‌ ಯುದ್ಧದಿಂದಾಗಿ ಸೃಷ್ಟಿಯಾದ ಹಣದುಬ್ಬರ ಮತ್ತು ಹಲವು ಸವಾಲಿನ ಮಧ್ಯೆಯೂ ಶಕ್ತಿಕಾಂತ್‌ ದಾಸ್‌ ಅವರ ಸ್ಥಿರ ನಾಯಕತ್ವವನ್ನು ಶ್ಲಾಘಿಸಲಾಗಿದೆ.  ದಾಸ್ ಅವರ ನಾಯಕತ್ವದಲ್ಲಿ ಹಣದುಬ್ಬರ ನಿಯಂತ್ರಿಸಲು ಹಲವಾರು ಬಾರಿ ರೆಪೋ ದರಗಳನ್ನು ಹೆಚ್ಚಿಸುವ ಹಲವಾರು ನಿರ್ಣಾಯಕ ಸುಧಾರಣೆಗಳನ್ನು ಜಾರಿಗೆ ತಂದಿತು. ನವೀನ ಪಾವತಿ ವ್ಯವಸ್ಥೆಗಳನ್ನು ಪರಿಚಯಿಸಿತು. ತೀವ್ರವಾದ ರಾಜಕೀಯ ಒತ್ತಡ ಮತ್ತು ಆರ್ಥಿಕ ಸಂಕಷ್ಟದ ನಡುವೆಯೂ ಆರ್‌ಬಿಐಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಪ್ರಕಟಣೆ ಮೆಚ್ಚುಗೆ ವ್ಯಕ್ತಪಡಿಸಿದೆ.

                     ಸಾರ್ವಜನಿಕ ನೀತಿ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ ಪರಿಣತಿ ಹೊಂದಿರುವ ಹಣಕಾಸು ಪ್ರಕಾಶಕವಾಗಿರುವ ಸೆಂಟ್ರಲ್‌ ಬ್ಯಾಂಕಿಂಗ್‌ ಕೇಂದ್ರೀಯ ಬ್ಯಾಂಕುಗಳು ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಮೇಲೆ ಅಧ್ಯಯನ ನಡೆಸುತ್ತದೆ.

                ಭಾರತೀಯ ಸೆಂಟ್ರಲ್ ಬ್ಯಾಂಕ್‌ನ ಗವರ್ನರ್ ಈ ಪ್ರಶಸ್ತಿಯನ್ನು ಗೆದ್ದಿರುವುದು ಇದು ಎರಡನೇ ಬಾರಿ.  ಶಕ್ತಿಕಾಂತ್ ದಾಸ್‌ಗೂ ಮೊದಲು, ರಘುರಾಮ್ ರಾಜನ್ ಅವರು 2015 ರಲ್ಲಿ 'ವರ್ಷದ ಗವರ್ನರ್' ಪ್ರಶಸ್ತಿಯನ್ನು ಪಡೆದರು. ಸೆಂಟ್ರಲ್ ಬ್ಯಾಂಕಿಂಗ್ ಪಬ್ಲಿಕೇಷನ್ಸ್ ಸಾರ್ವಜನಿಕ ನೀತಿ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ ತೊಡಗಿರುವ ಒಂದು ಪ್ರಕಾಶನ ಕಂಪನಿಯಾಗಿದೆ.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries