ಮಾರ್ಚ್ 16ಕ್ಕೆ ರಾಷ್ಟ್ರೀಯ ಲಸಿಕೆ ದಿನ. ಲಸಿಕೆಯ ಅವಶ್ಯಕತೆ ಕುರಿತು ಜನರಲ್ಲಿ ಅರಿವು ಮೂಡಿಸಲು ಲಸಿಕೆ ದಿನವನ್ನು ಆಚರಿಸಲಾಗುವುದು. ಕೆಲವೊಂದು ಕಾಯಿಲೆಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಲಸಿಕೆಗಳು ದೇಹಕ್ಕೆನೀಡುತ್ತವೆ, ಹೀಗಾಗಿ ಲಸಿಕೆ ಪಡೆಯಬೇಕಾಗಿರುವುದು ಅವಶ್ಯಕ.
ಲಸಿಕೆಗಳು ಕಾಯಿಲೆಗಳನ್ನು ಹೇಗೆ ತಡಗಟ್ಟುತ್ತದೆ? ಮಕ್ಕಳಿಗೆ, ಗರ್ಭಿಣಿಯರಿಗೆ, ವಯಸ್ಸಾದವರಿಗೆ ಲಸಿಕೆ ಅವಶ್ಯಕ ಏಕೆ, ಯಾವ ವಯಸ್ಸಿನಲ್ಲಿ ಯಾವ ಲಸಿಕೆ ತೆಗೆದುಕೊಳ್ಳಬೇಕು ಎಂದು ನೋಡೋಣ ಬನ್ನಿ?
ಲಸಿಕೆಯ ಕಾರ್ಯವೇನು?
ಲಸಿಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಲಸಿಕೆಯನ್ನು ದುರ್ಬಲ ಅಥವಾ ಸತ್ತ
ವೈರಸ್ ಬಳಸಿ ತಯಾರಿಸಲಾಗುವುದು. ಇವುಗಳನ್ನು ದೇಹಕ್ಕೆ ಸೇರಿಸಲಾಗುವುದು. ಇವು
ದೇಹದಲ್ಲಿ ಆ ವೈರಸ್ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು.
ಈ ವೈರಸ್‌ಗಳು ದೇಹದ ಮೇಲೆ ದಾಳಿ ಮಾಡಿದಾಗ ನಮ್ಮ ದೇಹವು ಆ ವೈರಸ್‌ಗಳ ವಿರುದ್ಧ ಹೋರಾಡಿ ನಮ್ಮ ಆರೋಗ್ಯ ರಕ್ಷಣೆ ಮಾಡುತ್ತದೆ.
ಮಕ್ಕಳ ಲಸಿಕೆ ಕುರಿತು ಪೋಷಕರಲ್ಲಿ ಈ ಗೊಂದಲ ಅಧಿಕವಿರುತ್ತದೆ
* ಮಗುವಿಗೆ ಜ್ವರವಿದ್ದಾಗ ಕೊಡಬಹುದೇ?
ಲಸಿಕೆ ಕೊಡುವ ಸಮಯದಲ್ಲಿ ತುಂಬಾ ಜ್ವರವಿದ್ದರೆ ಆ ಸಮಯದಲ್ಲಿ ಲಸಿಕೆ ನೀಡುವುದಿಲ್ಲ.
ವೈದ್ಯರು ನಿಮಗೆ ಜ್ವರ ಕಡಿಮೆಯಾದ ಬರಲು ಸೂಚಿಸುತ್ತಾರೆ, ಆವಾಗ ತೆಗೆದುಕೊಳ್ಳಬಹುದು.
ಗರ್ಭಿಣಿಯರಿಗೆ
ಗರ್ಭಿಣಿ ಎಂದು ಖಚಿತವಾದಾಗ ವೈದ್ಯರು ಗರ್ಭಿಣಿಯರಿಗೆ ಲಸಿಕೆ ನೀಡುತ್ತಾರೆ. ಇದು ಕೆಮ್ಮಿನಿಂದ ಹಾಗೂ ಇತರ ಬ್ಯಾಕ್ಟಿರಿಯಾ, ವೈರಸ್‌ಗಳಿಂದ ರಕ್ಷಣೆ ನೀಡುವುದು.
ಇನ್ನು ಮಹಿಳೆಯರಿಗೆ ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟಲು ಲಸಿಕೆಯಿದೆ. ಇದನ್ನು ತೆಗೆದುಕೊಳ್ಳುವುದರಿಂದ ಗರ್ಭಕೋಶಕ್ಕೆ ಹಾನಿಯುಂಟಾಗುವುದನ್ನು ತಡೆಗಟ್ಟಬಹುದು.
ಹೀಗೆ ನಮ್ಮನ್ನು ಹಲವು ವೈರಸ್‌ಗಳಿಂದ ರಕ್ಷಣೆ ಮಾಡುವ ಹಲವಾರು ಲಸಿಕೆ ರಕ್ಷಣೆ ನೀಡುತ್ತದೆ.
ಲಸಿಕೆಯನ್ನು ನಿಗದಿತ ಸಮಯಕ್ಕೆ ಮಕ್ಕಳಿಗೆ ಕೊಡಿಸಿ.
ದೊಡ್ಡವರು ಕೂಡ ಫ್ಲೂ ಲಸಿಕೆ ಸೇರಿದಂತೆ ಹಲವು ಲಸಿಕೆಗಳಿವೆ. ನಿಮ್ಮ ಆರೋಗ್ಯದ ದೃಷ್ಟಿಯಿಂದ ಯಾವ ಲಸಿಕೆ ಒಳ್ಳೆಯದು ಎಂದು ನಿಮ್ಮ ವೈದ್ಯರ ಸಲಹೆ ಪಡೆಯಿರಿ.





