HEALTH TIPS

ಮಕ್ಕಳು ನಿದ್ರಿಸಲು ಹಠ ಮಾಡ್ತಾರಾ? ಹಾಗಾದ್ರೆ ಈ ವಿಧಾನ ಫಾಲೋ ಮಾಡಿ

 

ಪುಟ್ಟ ಮಕ್ಕಳು ಮನೆಯಲ್ಲಿದ್ದರೆ ಏನೋ ಒಂಥರಾ ಖುಷಿ, ಸಂತೋಷ ಮನೆಯಲ್ಲಿ ಆವರಿಸಿರುತ್ತದೆ. ಅದೇ ರೀತಿ ಮಕ್ಕಳು ಹಠ ಮಾಡೋದಕ್ಕೆ ಶುರು ಮಾಡಿದ್ರೆ ಕೇಳೋದೇ ಬೇಡ. ಆ ಮಕ್ಕಳನ್ನು ಸಮಾಧಾನ ಮಾಡುವಷ್ಟರಲ್ಲಿ ಸಾಕಾಗಿ ಬಿಡುತ್ತೆ.

ದೊಡ್ಡವರಿಗೆ ಹೋಲಿಕೆ ಮಾಡಿದ್ರೆ ಮಕ್ಕಳಿಗೆ ಅಧಿಕ ಪ್ರಮಾಣದ ನಿದ್ದೆ ಬೇಕಾಗಿರುತ್ತದೆ. ಆದರೆ ಕೆಲವೊಂದು ಸಾರಿ ಎಷ್ಟೇ ಪ್ರಯತ್ನ ಪಟ್ರು ಮಕ್ಕಳು ನಿದ್ದೆಗೆ ಜಾರೋದೇ ಇಲ್ಲ. ಒಂದು ವೇಳೆ ನಿದ್ದೆ ಮಾಡಿದ್ರು ಕೂಡ ಕೆಲವೇ ಕ್ಷಣದಲ್ಲಿ ಎದ್ದು ಮತ್ತೆ ಪೀಡಿಸೋದಕ್ಕೆ ಶುರು ಮಾಡುತ್ವೆ. ಆದರೆ ನೀವು ಕೆಲವೊಂದು ಹೋಮ್‌ ರೆಮಿಡಿಗಳನ್ನು ಫಾಲೋ ಮಾಡೋ ಮುಖಾಂತರ ಮಕ್ಕಳನ್ನು ನಿದ್ರಿಸುವಂತೆ ಮಾಡಬಹುದು. ಅವು ಯಾವುದು ಅಂತ ನೋಡೋದಾದ್ರೆ.

1. ಬೆಚ್ಚಗಿನ ಸ್ನಾನ ಮಾಡಿಸುವುದು

ನಿದ್ರೆಗೂ ಮೊದಲು ಮಕ್ಕಳಿಗೆ ಹದಾ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಸಬೇಕು. ಇದೇ ದಿನಚರಿಯನ್ನು ನಿತ್ಯವು ಮಾಡಿದಾಗ ಇದು ದೇಹಕ್ಕೆ ನಿದ್ರೆಯ ಸಮಯ ಎಂದು ಸೂಚನೆ ನೀಡುತ್ತದೆ. ನೀರಿಗೆ ಎಪ್ಸಮ್ ಲವಣಗಳನ್ನು ಸೇರಿಸುವುದರಿಂದ ಕೂಡ ಇದು ನಿದ್ರಾಹೀನತೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಎಪ್ಸಮ್ ಲವಣಗಳನ್ನು ಮೆಗ್ನೀಸಿಯಮ್ ಸೇರಿದಂತೆ ನೈಸರ್ಗಿಕ ಖನಿಜಗಳಿಂದ ತಯಾರಿಸಲಾಗುತ್ತದೆ. ಇದು ದೇಹದಲ್ಲಿ ನೈಸರ್ಗಿಕ ಸಿರೊಟೋನಿನ್ ಉತ್ಪಾದನೆಯನ್ನು ಪ್ರಚೋದಿಸಲು ಸಹಾಯ ಮಾಡುತ್ತದೆ ಮತ್ತು ಶಾಂತತೆಯ ಭಾವನೆಯನ್ನು ಉಂಟುಮಾಡುತ್ತದೆ. (ಪ್ಯಾಕೇಜ್ನಲ್ಲಿರುವ ಸೂಚನೆಗಳನ್ನು ಓದಿ ಮತ್ತು ನಿಮ್ಮ ಮಗುವಿನ ವಯಸ್ಸು ಮತ್ತು ಗಾತ್ರಕ್ಕೆ ಡೋಸ್ ನೀಡಿ)

2. ಮಲಗುವ ಸಂದರ್ಭದಲ್ಲಿ ಗೆಜೆಟ್‌ಗಳನ್ನು ನೀಡದಿರಿ

ಇತ್ತೀಚಿನ ಮಕ್ಕಳು ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್‌ನಂತಹ ಗೆಜೆಟ್‌ಗಳಿಗೆ ಅಡಿಕ್ಟ್‌ ಆಗಿದ್ದಾರೆ. ಇನ್ನೂ ಕೆಲವು ಮಕ್ಕಳು ಟಿವಿ ಇಲ್ಲದೇ ಏನನ್ನೂ ಮಾಡುವುದಿಲ್ಲ ಅನ್ನುವಷ್ಟರಮಟ್ಟಿಗೆ ಟಿವಿಯನ್ನು ನೆಚ್ಚಿಕೊಂಡಿದ್ದಾರೆ. ಊಟದ ಸಮಯದಲ್ಲಿ ಮಕ್ಕಳಿಂದ ಎಲ್ಲಾ ಗೆಜೆಟ್‌ಗಳನ್ನು ತೆಗೆದು ಎತ್ತಿಡಿ. ಮಲಗುವ ಎರಡು ಗಂಟೆಗೂ ಮೊದಲೇ ಮಕ್ಕಳು ಗೆಜೆಟ್‌ಗಳಿಂದ ಆದಷ್ಟು ದೂರವಿರಬೇಕು. ಹೀಗಾದಾಗ ನೈಸರ್ಗಿಕವಾಗಿ ಅವರು ನಿದ್ದೆಗೆ ಜಾರುವ ಸಾಧ್ಯತೆ ಇರುತ್ತದೆ.

3. ನಿದ್ದೆಗೂ ಮೊದಲು ಬೆಚ್ಚಗಿನ ಪಾನೀಯ ನೀಡಿರಿ

ಮಕ್ಕಳು ನಿದ್ರಿಸುವ ಮೊದಲು ಬೆಚ್ಚಗಿನ ಹಾಲು ನೀಡಿದರೆ ಉತ್ತಮ. ಪುಟ್ಟ ಮಕ್ಕಳಾದರೆ ತಾಯಿಯ ಎದೆಹಾಲು ಕುಡಿಸಿದರಷ್ಟೇ ಸಾಕು. ಮಲಗುವ ಮೊದಲು ಹಾಲು ಸೇವಿಸಿದರೆ ಒಳ್ಳೆಯದು. ಇದು ನಿದ್ರಾ ಪ್ರಚೋದಕವಾಗಿ ಕೆಲಸ ಮಾಡುತ್ತದೆ.

4. ಮಕ್ಕಳು ಎದ್ದಿರುವ ಸಣ್ಣ ವ್ಯಾಯಾಮ ಮಾಡಿಸಿ

ಚಿಕ್ಕ ಮಕ್ಕಳಿಗೆ ಅವರು ಎಚ್ಚರವಿರುವಾಗ ಅಂದರೆ ಹಗಲಿನ ಸಮಯದಲ್ಲಿ ಚಿಕ್ಕದಾಗಿ ವ್ಯಾಯಾಮ ಮಾಡಿಸಿ. ಅಥವಾ ಯೋಗಾದ ಕೆಲ ಭಂಗಿಗಳನ್ನು ಅಭ್ಯಾಸಿಸಿ. ಈ ರೀತಿ ಮಾಡುವುದರಿಂದ ಅವರು ಆರೋಗ್ಯವಾಗಿಯೂ ಇರುತ್ತಾರೆ. ಇದರ ಜೊತೆಗೆ ಕೊಂಚ ಸುಸ್ತು ಅನ್ನಿಸೋದ್ರಿಂದ ಬೇಗನೆ ನಿದ್ರೆ ಜಾರಲು ಸಹಾಯ ಮಾಡುತ್ತದೆ.

5. ಜೋಗುಳ, ಹಾಡುವುದು, ಕಥೆ ಹೇಳಿ ಮಲಗಿಸಿ

ಮಕ್ಕಳು ಅಷ್ಟು ಸುಲಭವಾಗಿ ಮಲಗೋದಿಲ್ಲ. ಕೆಲ ಮಕ್ಕಳಂತೂ ಮಧ್ಯರಾತ್ರಿಯವರೆಗೂ ಎಚ್ಚರವಿರುತ್ತಾರೆ. ಹೀಗಾಗಿ ಪುಟ್ಟ ಮಕ್ಕಳಾದರೆ ಅವರು ಮಲಗುವ ಸ್ಥಳ ನಿಶಬ್ಧವಾಗಿರುವಂತೆ ನೋಡಿಕೊಳ್ಳಿ. ಸಾಧ್ಯವಾದರೆ ಪ್ರತಿನಿತ್ಯ ಅವರಿಗೆ ಜೋಗುಳ ಹಾಡಿ ಮಲಗೋದನ್ನ ಅಭ್ಯಾಸ ಮಾಡಿಸಿ. ಅಥವಾ ಹಾಡು ಕೇಳಿಸಬಹುದು. ಇನ್ನೂ ಸ್ವಲ್ಪ ದೊಡ್ಡವರಾದರೆ ಕಥೆ ಹೇಳುವ ಮೂಲಕ ಅವರನ್ನು ನಿದ್ರೆಗೆ ಜಾರುವಂತೆ ಮಾಡಬಹುದು.


6. ಮಕ್ಕಳ ಭಯ, ಆತಂಕ ದೂರಗೊಳಿಸಿ

ಪುಟ್ಟ ಮಕ್ಕಳಿಗೆ ಕತ್ತಲ ಭಯ ಹೆಚ್ಚಾಗಿರುತ್ತದೆ. ರಾತ್ರಿ ಮಲಗೋವಾಗ ಅವರಲ್ಲಿ ಆತಂಕ, ಭಯ ಕಾಡೋದು ಸಹಜ. ಇನ್ನೂ ಕೆಲ ಮಕ್ಕಳಿಗೆ ದೆವ್ವ, ಭೂತದ ಹೆದರಿಕೆ ಇರುತ್ತದೆ. ಇಂತಹ ಸಮಯದಲ್ಲಿ ಪೋಷಕರು ಮಕ್ಕಳ ಭಯವನ್ನು ದೂರ ಮಾಡಬೇಕು. ಉಸಿರಾಟದ ವ್ಯಾಯಾಮಗಳನ್ನು, ಧ್ಯಾನ ಮುಂತಾದವುಗಳನ್ನು ಅಭ್ಯಾಸ ಮಾಡಬೇಕು.


7. ಬೆಡ್‌ರೂಂ ದೀಪದ ಬಗ್ಗೆ ಗಮನ ಕೊಡಿ

ಮಕ್ಕಳ ಬೆಡ್‌ ರೂಂನಲ್ಲಿ ರಾತ್ರಿ ಹಾಗೂ ಬೆಳಗ್ಗಿನ ಸಮಯದಲ್ಲಿ ಒಂದೇ ರೀತಿಯ ದೀಪಗಳನ್ನು ಬಳಸಬೇಡಿ. ಹಗಲಿನಲ್ಲಿ ಬಳಸುವ ಡಾರ್ಕ್‌ ಲೈಟ್‌ ರಾತ್ರಿ ಬೇಡ. ರಾತ್ರಿ ಮಕ್ಕಳ ಬೆಡ್‌ ರೂಂನಲ್ಲಿ ಮಂದ ಬೆಳಕಿನ ಲೈಟ್‌ ಅನ್ನು ಬಳಸಿ. ಯಾಕಂದ್ರೆ ಇಂತಹ ಬಲ್ಬ್‌ಗಳು ಅವರ ನಿದ್ದೆಗೂ ಅಡ್ಡಿ ಪಡಿಸೋದಿಲ್ಲ. ಜೊತೆಗೆ ಕತ್ತಲಿನ ಭಯವನ್ನು ದೂರ ಮಾಡುತ್ತೆ.


8. ಉತ್ತಮ ಎಣ್ಣೆಯಿಂದ ಮಸಾಜ್‌ ಮಾಡಿ

ಮಕ್ಕಳಿಗೆ ಎಣ್ಣೆ ಹಚ್ಚಿ ಮಸಾಜ್‌ ಮಾಡಿ ಸ್ನಾನ ಮಾಡಿಸುವ ಅಭ್ಯಾಸ ತುಂಬಾನೇ ಒಳ್ಳೆಯದು. ನಿಮ್ಮ ಮಗುವಿನ ತ್ವಚೆಗೆ ಸೂಕ್ತವೆನಿಸುವ ಯಾವುದೇ ಎಣ್ಣೆಯಾದ್ರು ಪರವಾಗಿಲ್ಲ ಅದನ್ನು ಬಳಸಿ. ಇದರ ಜೊತೆಗೆ ತಲೆಗೂ ಚೆನ್ನಾಗಿ ಮಸಾಜ್‌ ಮಾಡಿ. ನಂತರ ಹದಾ ಬಿಸಿ ನೀರಿನಿಂದ ಸ್ನಾನ ಮಾಡಿಸಿ. ಈ ರೀತಿ ಮಾಡಿದ್ರೆ ಮಕ್ಕಳು ಬೇಗನೆ ನಿದ್ರೆಗೆ ಜಾರುತ್ತಾರೆ.

ಈ ಎಲ್ಲಾ ವಿಧಾನಗಳು ಮಕ್ಕಳನ್ನು ರಾತ್ರಿಯ ವೇಳೆ ನಿದ್ರೆಗೆ ಜಾರುವಂತೆ ಮಾಡುತ್ತದೆ. ಮಕ್ಕಳು ಸುಖ ನಿದ್ರೆ ಮಾಡಿದ್ರೆ ಆರೋಗ್ಯವು ಚೆನ್ನಾಗಿರುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries