ಕಾಸರಗೋಡು:, ತಯಾರಕರು ಉತ್ಪನ್ನಗಳ ಮೇಲೆ ನಕಲಿ ಐಎಸ್ಐ ಮತ್ತು ಬಿಐಎಸ್ ಹಾಲ್ ಮಾರ್ಕ್ ಮಾಡುವುದು ಅಪರಾಧವಾಗಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ನಿಯಮಗಳನ್ನು ಉಲ್ಲಂಘಿಸಿದರೆ ಒಂದರಿಂದ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಐದು ಲಕ್ಷ ರೂ.ವರೆಗೆ ಗುಣಮಟ್ಟವಿಲ್ಲದ ವಸ್ತುಗಳ ಮಾರಾಟ ತಡೆಯಲು ನಿಗಾ ಅಗತ್ಯ ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ ಕೊಚ್ಚಿನ್ ಪ್ರಾದೇಶಿಕ ಜಂಟಿ ನಿರ್ದೇಶಕ ಮತ್ತು ವಿಜ್ಞಾನಿ ಟಿಆರ್ ಜುನೈದಾ ಹೇಳಿರುವರು.
ತಯಾರಕರು ಮತ್ತು ವಿಜ್ಞಾನಿಗಳು ವಿವಿಧ ಉನ್ನತ ಗುಣಮಟ್ಟದ ಪರಿಶೀಲನೆಗಳ ನಂತರ ಗುಣಮಟ್ಟದ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ ಕೊಚ್ಚಿಯ ಪ್ರಾದೇಶಿಕ ಉಪ ನಿರ್ದೇಶಕ ಮತ್ತು ವಿಜ್ಞಾನಿ ಎಂ. ರಮಿತ್ ಸುರೇಶ್ ಹೇಳಿದರು.
ಕಾಸರಗೋಡು ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ಬಿಐಎಸ್ ಜಾಗೃತಿ ಕಾರ್ಯಕ್ರಮದಲ್ಲಿ ಬಿಐಎಸ್ ಅಧಿಕಾರಿಗಳು ವಿಷಯ ಮಂಡಿಸುತ್ತಿದ್ದರು.
. ಜಿಲ್ಲಾ ಯೋಜನಾ ಸಮಿತಿ ಸಭಾಂಗಣದಲ್ಲಿ ನಡೆದ ಜಾಗೃತಿ ಕಾರ್ಯಕ್ರಮವನ್ನು ಆರ್‍ಡಿಒ ಅತುಲ್ ಸ್ವಾಮಿನಾಥ್ ಉದ್ಘಾಟಿಸಿದರು. ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ ಕೊಚ್ಚಿಯ ವಿಜ್ಞಾನಿ ಹಾಗೂ ಜಂಟಿ ನಿರ್ದೇಶಕಿ ಟಿ.ಆರ್.ಜುನೈದಾ ಅಧ್ಯಕ್ಷತೆ ವಹಿಸಿದ್ದರು. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ ಕೊಚ್ಚಿಯ ಪ್ರಾದೇಶಿಕ ಉಪ ನಿರ್ದೇಶಕ ಮತ್ತು ವಿಜ್ಞಾನಿ ಎಂ. ರಮಿತ್ ಸುರೇಶ್ ತರಗತಿ ತೆಗೆದುಕೊಂಡರು. ಜಿಲ್ಲಾ ಉಪ ಯೋಜನಾಧಿಕಾರಿ ನೆನೋಜ್ ಮೆಪ್ಪಾಡಿಯಾಟ್ ಸ್ವಾಗತಿಸಿದರು.
ಬಿಐಎಸ್ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಾಗೃತಿ ಕಾರ್ಯಕ್ರಮ ಆಯೋಜನೆ
0
ಮಾರ್ಚ್ 01, 2023





