HEALTH TIPS

ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರು ಕನ್ನಡ ಹೋರಾಟದ ಅದಮ್ಯ ಚೇತನ: ಕನ್ನಡ ಅಧ್ಯಯನ ಭವನದ ಭೂಮಿ ಪೂಜೆ ನೆರವೇರಿಸಿ ಡಾ. ಸಿ.ಸೋಮಶೇಖರ್ ಅಭಿಮತ


         ಕಾಸರಗೋಡು: ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರು ಏಕೀಕರಣ ಮತ್ತು ವಿಲೀನೀಕರಣ ಹೋರಾಟದ ಅದಮ್ಯ ಚೇತನ ಆಗಿದ್ದರು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸೋಮಶೇಖರ ಐ.ಎ.ಎಸ್ ತಿಳಿಸಿದ್ದಾರೆ. ಅವರು ಡಾ. ಕಯ್ಯಾರ ಕಿಞಣ್ಣ ರೈ ಅವರ ಹೆಸರಲ್ಲಿ ಬದಿಯಡ್ಕ ಪೆರಡಾಲದ ಕವಿನಿವಾಸ 'ಕವಿತಾ ಕುಟೀರ'ಸನಿಹದ ಕಲ್ಲಕಳಿಯ ಬತ್ತೇರಿ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಸಾಂಸ್ಕøತಿಕ ಕನ್ನಡ ಅಧ್ಯಯನ ಭವನದ ಭೂಮಿ ಪೂಜೆ ನಂತರ ಬದಿಯಡ್ಕ ಗುರುಸದನದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
              ಭಾಷೆ, ಸಂಸ್ಕøತಿಯ ಉಳಿವಿಗಾಗಿ ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ ಕೊಡುಗೆ ಮಹತ್ತರವಾದುದು. ರಾಷ್ಟ್ರಭಕ್ತಿ, ನಾಡ ಪ್ರೀತಿಯ ಸಂಗಮ ಡಾ. ಕಯ್ಯಾರ ಅವರಲ್ಲಿ ಅಡಕವಾಗಿತ್ತು. ಡಾ. ಕಯ್ಯಾರ ಅವರ ಕೃತಿಗಳಲ್ಲಿ ಮಣ್ಣಿನ ಸುವಾಸನೆಯಿದೆ. ಡಾ. ಕಯ್ಯಾರ ಸಾಂಸ್ಕøತಿಕ ಭವನ ನಿರ್ಮಾಣಕ್ಕೆ ಸರ್ಕಾರ ಮಂಜೂರುಗೊಳಿಸಿರುವ 2ಕೋಟಿ ರೂ. ಮೊತ್ತದಲ್ಲಿ 1.75ಕೋಟಿ ರೂ. ಖಾತೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದ ಅವರು ಸಾಹಿತ್ಯ, ಸಂಸ್ಕøತಿಯ ಅಧ್ಯಯನದ ಜತೆಗೆ ಕನ್ನಡ-ಮಲಯಾಳ ಣಾಷೆಗಳ ಜತೆ ಸಮನ್ವಯ ಸಾಧಿಸುವ ಕೇಂದ್ರವಾಗಲಿ ಎಂದು ಹಾರೈಸಿದರು.



           ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಗಡಿನಾಡು ಕಾಸರಗೋಡು ಭಾಷೆಯ ಎಲ್ಲೆ ಮೀರಿ ನಿಂತ ಪ್ರದೇಶವಾಗಿದೆ. ವೈವಿಧ್ಯಮಯ ಭಾಷೆ, ಸಂಸ್ಕøತಿ ಯಿಂದ ಗಡಿನಾಡು ಕಾಸರಗೋಡಿನ ಕೀರ್ತಿ ಮತ್ತಷ್ಟು ಹೆಚ್ಚಲು ಕಾರಣವಾಗಿದೆ. ಡಾ. ಕಯ್ಯಾರ ಅವರ ಹೆಸರಲ್ಲಿ ನಿರ್ಮಾಣಗೊಳ್ಳಲಿರುವ ಅಧ್ಯಯನ ಕೇಂದ್ರ ಕನ್ನಡಿಗರನ್ನು ಒಂದುಗೂಡಿಸುವ ಕೇಂದ್ರವಾಗಲಿ ಎಂದು ಹಾರೈಸಿದರು.
ಮಾಹಿತಿ ಕೇಂದ್ರ ಬರಲಿ:
           ಕಾಸರಗೋಡಿನ ಕನ್ನಡ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ, ಬೆಂಬಲ ನೀಡುತ್ತಿರುವ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾಸರಗೋಡಿನಲ್ಲಿ ಮಾಹಿತಿ ಕೇಂದ್ರವನ್ನು ತೆರೆಯಲು ಮುಂದಾಗಬೇಕು. ಇಲ್ಲಿ ಕಾಯಂ ಅಧಿಕಾರಿಯನ್ನೂ ನೇಮಿಸಬೇಕು. ಇದರಿಂದ ಕನ್ನಡದ ಕೆಲಸಗಳಿಗಾಗಿ ಬೆಂಗಳೂರಿಗೆ ನಡೆಸುವ ಅಲೆದಾಟ ತಪ್ಪಲಿದೆ ಎಂದು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದರು.
            ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಮೋಹನ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಬಹುಭಾಷಾ ಕೇಂದ್ರವಾಗಿರುವ ಕಾಸರಗೋಡು ಸಾಮರಸ್ಯದ ತಾಣವಾಗಿ ಪ್ರಸಿದ್ಧಿ ಪಡೆದಿದೆ. ಡಾ. ಕಯ್ಯಾರ ಅವರ ಜೀವನ, ವ್ಯಕ್ತಿತ್ವ ನಮಗೆಲ್ಲರಿಗೂ ಆದರ್ಶವಾಗಬೇಕು. ಹೆಸರಲ್ಲಿ ತಲೆಯೆತ್ತಲಿರುವ ಅಧ್ಯಯನ ಕೇಂದ್ರದಲ್ಲಿ ನಿರಂತರ ಕನ್ನಡ ಚಟುವಟಿಕೆ ನಡೆಯುವಂತಾಗಲಿ ಎಂದು ತಿಳಿಸಿದರು. ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸಿ ಮಾತನಾಡಿ,  ಕಡ್ಡಾಯ ಮಲಯಾಳ ಹೇರಿಕೆ ವಿರುದ್ಧ ಗಡಿನಾಡ ಕನ್ನಡಿಗರಿಗೆ ಧಕ್ಕೆಯಾಗುವ ಯಾವುದೇ ತೀರ್ಮಾನದ ವಿರುದ್ಧ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದು, ಮುಂದೆಯೂ ಬೆಂಬಲ ಇರಲಿದೆ. ಡಾ. ಕಯ್ಯಾರ ಅವರ ಹೆಸರಲ್ಲಿ ನಿರ್ಮಾಣಗೊಳ್ಳಲಿರುವ ಅಧ್ಯಯನ ಕೇಂದ್ರಕ್ಕೆ ಸರ್ಕಾರದಿಂದ ಲಭಿಸುವ ಎಲ್ಲ ನೆರವು ಲಭ್ಯವಾಗಿಸುವಲ್ಲಿ ಶ್ರಮಿಸುವುದಾಗಿ ತಿಳಿಸಿದರು. ಬದಿಯಡ್ಕ ಗ್ರಾಪಂ ಅಧ್ಯಕ್ಷೆ ಶಾಂತಾ ಬಾರಡ್ಕ, ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ದ.ಕ ಜಿಲ್ಲಾಧಿಕಾರಿ ಪ್ರತಿನಿಧಿ ಅಭಿಷೇಕ್ ವಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಅಬಿದ್ ಗದ್ಯಾಲ್, ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕವಿತಾ ಕುಟೀರ ಅಧ್ಯಕ್ಷ ದುರ್ಗಾಪ್ರಸಾದ್ ರೈ, ಮಾಹಿನ್ ಕೇಳೋಟ್, ಡಾ. ಕಿಞಣ್ಣ ರೈ ಕುಟುಂಬಸ್ಥರು  ಉಪಸ್ಥಿತರಿದ್ದರು. ಕವಿತಾಕುಟೀರ ಕಾರ್ಯದರ್ಶಿ ಡಾ. ಪ್ರಸನ್ನ ರೈ ಸ್ವಾಗತಿಸಿದರು. ಪ್ರೊ. ಎ.ಶ್ರೀನಾಥ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries