ಮುಳ್ಳೇರಿಯ: ಕಾಸರಗೋಡಿನ ಪುರಾಣ ಪ್ರಸಿದ್ಧ ನಾಲ್ಕು ದೇವಸ್ಥಾನಗಳಲ್ಲಿ ಒಂದಾದ ಅಡೂರು ಶ್ರೀ ಮಹಾಲಿಂಗೇಶ್ವರ, ಮಹಾವಿಷ್ಣು, ವಿನಾಯಕ ದೇವರ ಜಾತ್ರಾ ಮಹೋತ್ಸವವು ಮಾ. 12 ರಿಂದ 20 ರ ವರೆಗೆ ವಿವಿಧ ಧಾರ್ಮಿಕ ವೈದಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಸಹಸ್ರಾರು ಭಕ್ತಾಭಿಮಾನಿಗಳ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಜರುಗತ್ತಲಿರುವುದು. ಈ ಜಾತ್ರಾ ಮಹೋತ್ಸವದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ 15 ರಂದು ಸಂಜೆ 6.ರಿಂದ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ ಕಾಸರಗೋಡು ಸಂಸ್ಥೆಯ ವತಿಯಿಂದ ಸಾಹಿತ್ಯ ಗಾನ ನೃತ್ಯ ವೈಭವವು ನೆರೆದಿರುವ ಕಲಾಭಿಮಾನಿಗಳ ಹಾಗೂ ಭಕ್ತಾಭಿಮಾನಿಗಳ ಮನಸೂರೆಗೊಳ್ಳುವಂತೆ ಅದ್ಭುತವಾಗಿ ಮೂಡಿ ಬಂದು ಇಳೆ ಸಂಜೆಯನ್ನು ಆಹ್ಲಾದಮಯವಾಗಿಸಿತು.
ಕಾರ್ಯಕ್ರಮದ ನಿರೂಪಣೆ ಹಾಗೂ ದೇವರ ಕುರಿತಾದ ಸಾಹಿತ್ಯ ಪ್ರಸ್ತುತಿ ಡಾ. ವಾಣಿಶ್ರೀ ನೆರವೇರಿಸಿದರು. ಗುರುರಾಜ್ ಕಾಸರಗೋಡು, ಡಾ. ವಾಣಿಶ್ರೀ ಕಾಸರಗೋಡು, ಆದ್ಯಂತ್ ಅಡೂರ್, ಪ್ರಥಮ್ಯ ಯು ವೈ, ದೀಪ್ತಿ, ಜ್ಞಾನ ರೈ, ಭಾಸ್ಕರ್ ಅಡೂರ್, ಪೂಜಾ ಶ್ರೀ, ಧನ್ವಿತ್ ಕೃಷ್ಣ, ಕೀರ್ತಿ, ಸನುμÁ ಸುಧಾಕರನ್, ಹರೀಶ್ ಪಂಜಿಕಲ್ಲು, ಅಹನಾ ಎಸ್ ರಾವ್, ವಿಷ್ಣು ಸುಧಾಕರನ್, ಆದ್ಯಂತ್ ಅಡೂರ್, ಕವನ ಅಡೂರ್, ಉμÁ ಸುಧಾಕರನ್, ಚೈತ್ರಾ, ಪ್ರಜ್ಞಾ, ರಚಿತಾ ಕೆ ರಾವ್, ರಕ್ಷಿತಾ ಕೆ ರಾವ್, ಹೀಗೆ ಸಂಸ್ಥೆಯ ಹಲವಾರು ಪ್ರತಿಭಾ ಕಾರಂಜಿಗಳು ಭಾಗವಹಿಸಿ ಕಾರ್ಯಕ್ರಮವನ್ನು ವರ್ಣರಂಜಿತಗೊಳಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು. ದೇವಸ್ಥಾನದ ಆಡಳಿತ ಮಂಡಳಿಯವರಾದ ಅತ್ತನಾಡಿ ರಾಮಚಂದ್ರ ಮಣಿಯಾಣಿ, ಗಂಗಾಧರ್ ರಾವ್, ರಾಮಣ್ಣ ಹಾಗೂ ಬಾಲಕೃಷ್ಣ ಮಾಸ್ತರ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು. ವೇದಿಕೆಯ ಮೇಲಿರುವ ಗಣ್ಯರ ಸಮ್ಮುಖದಲ್ಲಿ ಸಂಸ್ಥೆಯ ವತಿಯಿಂದ ಎಲ್ಲಾ ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

.jpg)
