HEALTH TIPS

ಹಳೆಯ ಪಿಂಚಣಿ ಯೋಜನೆ ಆಯ್ಕೆಮಾಡಿಕೊಳ್ಳಲು ನೌಕರರಿಗೆ ಆಗಸ್ಟ್‌ವರೆಗೆ ಅವಕಾಶ: ಕೇಂದ್ರ

 

             ನವದೆಹಲಿ: ಕೇಂದ್ರದಸಿಬ್ಬಂದಿ ಸಚಿವಾಲಯದ ಆದೇಶದ ಪ್ರಕಾರ, ಕೇಂದ್ರ ಸರ್ಕಾರದ ಆಯ್ದ ನೌಕರರ ಗುಂಪಿಗೆ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್‌) ಆಯ್ಕೆ ಮಾಡಿಕೊಳ್ಳಲು ಒಂದು ಸಲದ ಅವಕಾಶವನ್ನು ನೀಡಲಾಗಿದೆ.

                         ಹೊಸ ಪಿಂಚಿಣಿ ಯೋಜನೆ (ಎನ್‌ಪಿಎಸ್‌) ಜಾರಿ ಅಧಿಸೂಚನೆ 2003ರ ಡಿಸೆಂಬರ್‌ 22ರಂದು ಪ್ರಕಟವಾಗುವುದಕ್ಕೂ ಮುನ್ನ ಕೇಂದ್ರ ಸರ್ಕಾರದ ಸೇವೆಗೆ ಸೇರಿಕೊಂಡ ನೌಕರರು, 'ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮ, 1972'ರ ಅಡಿಯಲ್ಲಿ ಒಪಿಎಸ್‌ ಆಯ್ಕೆ ಮಾಡಿಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

                ಸಂಬಂಧಿಸಿದ ಸರ್ಕಾರಿ ನೌಕರರು ಈ ಆಯ್ಕೆಯನ್ನು 2023ರ ಆಗಸ್ಟ್‌ 31ರೊಳಗೆ ಬಳಸಬಹುದಾಗಿದೆ. ವಿವಿಧ ಅಹವಾಲು/ಶಿಫಾರಸುಗಳು ಹಾಗೂ ನ್ಯಾಯಾಲಯಗಳ ನಿರ್ಣಯಗಳನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉಲ್ಲೇಖಿಸಲಾಗಿದೆ.

                   ಎನ್‌ಪಿಎಸ್‌ಗೆ ಅಧಿಸೂಚನೆ ಹೊರಡಿಸುವುದಕ್ಕೂ ಮೊದಲು ಖಾಲಿ ಹುದ್ದೆಗಳ ಭರ್ತಿಗೆ ಪ್ರಕಟಿಸಲಾದ ಅಧಿಸೂಚನೆಗಳಂತೆ ನೇಮಕಗೊಂಡಿರುವವರಿಗೂ ಒಪಿಎಸ್‌ ಸೌಲಭ್ಯ ವಿಸ್ತರಿಸುವಂತೆ ಹಲವು ಹೈಕೋರ್ಟ್‌ಗಳು ಹಾಗೂ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಗಳು ನೀಡಿದ ಆದೇಶಗಳನ್ನು ಉಲ್ಲೇಖಿಸಿ, 2004ರ ಜನವರಿ 1ರ ನಂತರ ನೇಮಕಗೊಂಡ ನೌಕರರು 'ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮ, 1972'ರ ಅಡಿಯಲ್ಲಿ ಪಿಂಚಣಿ ಸೌಲಭ್ಯವನ್ನು ವಿಸ್ತರಿಸುವಂತೆ ಮಾಡಿದ್ದ ಅಹವಾಲುಗಳನ್ನು ಪರಿಗಣಿಸಲಾಗಿದೆ.

               ನ್ಯಾಯಾಲಯಗಳ ವಿವಿಧ ಶಿಫಾರಸು/ಉಲ್ಲೇಖಗಳು ಮತ್ತು ನಿರ್ಧಾರಗಳ ಹಿನ್ನೆಲೆಯಲ್ಲಿ ಹಣಕಾಸು ಸೇವೆಗಳ ಇಲಾಖೆ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ವೆಚ್ಚ ಇಲಾಖೆ ಮತ್ತು ಕಾನೂನು ವ್ಯವಹಾರಗಳ ಸಚಿವಾಲಯಗಳೊಂದಿಗೆ ಸಮಾಲೋಚನೆ ನಡೆಸಿ ಈ ವಿಚಾರ ಪರಿಶೀಲಿಸಲಾಗಿದೆ ಎಂದೂ ತಿಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries