HEALTH TIPS

ಭಾರತದಲ್ಲಿ ಆಸ್ಟ್ರೇಲಿಯಾದ ದೇಕಿನ್‌ ವಿ.ವಿ ಕ್ಯಾಂಪಸ್‌ ತೆರೆಯಲು ಒಪ್ಪಿಗೆ

 

             ಅಹಮದಾಬಾದ್‌: ಗುಜರಾತ್‌ನ ಅಂತರರಾಷ್ಟ್ರೀಯ ಆರ್ಥಿಕ ತಾಂತ್ರಿಕ ನಗರದಲ್ಲಿ (ಗಿಫ್ಟ್‌ ಸಿಟಿ) ಆಸ್ಟ್ರೇಲಿಯಾದ ದೇಕಿನ್ ವಿಶ್ವವಿದ್ಯಾಲಯವು ಕ್ಯಾಂಪಸ್‌ ತೆರೆಯಲು ಅನುಮೋದನೆ ನೀಡಿರುವುದಾಗಿ ಅಂತರ ರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರದ ಪ್ರಾಧಿಕಾರ (ಐಎಫ್‌ಎಸ್‌ಸಿಎ) ಶುಕ್ರವಾರ ತಿಳಿಸಿದೆ.

                    ಈ ಮೂಲಕ ಭಾರತದಲ್ಲಿ ಕ್ಯಾಂಪಸ್‌ ತೆರೆಯಲು ಅನುಮತಿ ಪಡೆದ ಮೊದಲ ವಿದೇಶಿ ವಿಶ್ವವಿದ್ಯಾಲಯವಾಗಿದೆ.

                    ಗಾಂಧಿನಗರದಲ್ಲಿ ಮಾ.8ರಂದು ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಆಯಂಟನಿ ಅಲ್ಬನೀಸ್‌ ಅವರು ಈ ಕುರಿತಂತೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.

                'ಹೆಚ್ಚು ಹೆಚ್ಚು ವಿದೇಶಿ ವಿಶ್ವವಿದ್ಯಾಲಯಗಳು ಭಾರತದಲ್ಲಿ ಕ್ಯಾಂಪಸ್ ತೆರೆಯಲಿ ಎಂದು ಬಯಸುತ್ತೇವೆ. ಈ ಕುರಿತಂತೆ ಆಸ್ಟ್ರೇಲಿಯಾದ ಇನ್ನೊಂದು ವಿಶ್ವವಿದ್ಯಾಲಯದೊಂದಿಗೆ ಮಾತುಕತೆ ನಡೆಸುತ್ತಿದ್ದು, ಅದು ಉತ್ಸಾಹ ತೋರಿದೆ' ಎಂದು ಐಎಫ್‌ಎಸ್‌ಸಿಎ ಮುಖ್ಯಸ್ಥ ಇಂಜೇತಿ ಶ್ರೀನಿವಾಸ್ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries