ಕುಂಬಳೆ: ದ್ವೈತ-ಅದ್ವೈತದ ಸಂಗಮ ಭೂಮಿ, ಕಾವು ತ್ರಿವಿಕ್ರಮ ಪಂಡಿತಾಚಾರ್ಯರ ಜನ್ಮಭೂಮಿ, ಮದ್ವಾಚಾರ್ಯರ ಪಾದ ಸ್ಪರ್ಶದಿಂದ ಪುನೀತವಾದ ಕಾವುಗೋಳಿ ಶಿವ ಕ್ಷೇತ್ರದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಹಾಗು ನಿಧಿ ಸಂಗ್ರಹಣಾ ಅಭಿಯಾನದ ಚಾಲನೆಯನ್ನು ಶ್ರೀ ಕ್ಷೇತ್ರದಲ್ಲಿ ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನೆರವೇರಿಸಿದರು.
ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ಉಪಸ್ಥಿತಿಯಲ್ಲಿ ಹಿರಿಯ ಉದ್ಯಮಿ ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕಾವು ಲಕ್ಷ್ಮೀನಾರಾಯಣ ತಂತ್ರಿ, ಹಿರಿಯ ಲೆಕ್ಕ ಪರಿಶೋಧಕ ರಘುನಾಥ ಕಾಮತ್, ಕಾಸರಗೋಡು ಜಿಲ್ಲಾ ಬಳಕೆದಾರರ ನ್ಯಾಯಾಲಯದ ನ್ಯಾಯಾಧೀಶ ಕೆ.ಕೃಷ್ಣನ್, ಉದ್ಯಮಿ ಸುರೇಶ್ ಕೃಷ್ಣ ಹಾರ್ಡ್‍ವೇರ್, ಕೃಷ್ಣನ್ ಕತ್ತರ್, ಹಿರಿಯ ಧಾರ್ಮಿಕ ಮುಂದಾಳು ವೆಂಕಟ್ರಮಣ ಹೊಳ್ಳ, ನಾಗೇಂದ್ರ ಭಟ್ ಕೂಡ್ಲು, ರಮೇಶ್ ಕಾರಂತ, ಕೆ.ವಿ.ಅಭಿಲಾಷ್ ಮೊದಲಾದವರು ಉಪಸ್ಥಿತರಿದ್ದರು. ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಕಮಲಾಕ್ಷ ಬೆಳ್ಚಪ್ಪಾಡ ವಂದಿಸಿದರು.
ಕಾವುಗೋಳಿ ಶಿವ ಕ್ಷೇತ್ರದ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
0
ಮಾರ್ಚ್ 08, 2023
Tags

.jpg)
