ಕಾಸರಗೋಡು: ಉದ್ಯೋಗ ಖಾತ್ರಿ ಯೋಜನೆಯ ವಿರುದ್ಧ ಎಡ ಮತ್ತು ಐಕ್ಯರಂಗ ಸುಳ್ಳು ಪ್ರಚಾರ ನಡೆಸಿಕೊಮಡು ಬರುವುದನ್ನು ನಿಲ್ಲಿಸುವಂತೆ ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ವಕೀಲ ಕೆ ಶ್ರೀಕಾಂತ್ ತಿಳಿಸಿದ್ದಾರೆ. ಜಿ20 ಶೃಂಗಸಭೆಯ ಅಂಗವಾಗಿ ತ್ರಿಶೂರಿನಲ್ಲಿ ನಡೆಯಲಿರುವ ಸ್ತ್ರೀಶಕ್ತಿ ಸಂಗಮದ ಅಂಗವಾಗಿ ಕಾಸರಗೋಡು ಜಿಲ್ಲಾ ಉಪಸಮಿತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುಪಿಎ ಸರ್ಕಾರದ ಅವಧಿಯಲ್ಲಿದ್ದ ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರ ವೇತನವನ್ನು ಎನ್‍ಡಿಎ ಸರ್ಕಾರ ಮೂರು ಪಟ್ಟು ಹೆಚ್ಚಿಸಿದೆ. 2013-14ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಬಜೆಟ್‍ನಲ್ಲಿ ಕೇವಲ 32992 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದರೆ, ಮೋದಿ ಸರ್ಕಾರವು ಕರೋನಾ ಕಾಲಘಟ್ಟದಲ್ಲೂ 2021-2022ರಲ್ಲಿ 11170.86 ಕೋಟಿ ರೂಪಾಯಿ ಮೊತ್ತ ವ್ಯಯಿಸಿದೆ. ಇವೆಲ್ಲವನ್ನು ಮರೆಮಾಚುವ ಮೂಲಕ ಸಿಪಿಎಂ-ಕಾಂಗ್ರೆಸ್ ಉಭಯ ರಂಗಗಳು ಸುಳ್ಳು ಪ್ರಚಾರ ಮಾಡುತ್ತಿವೆ ಎಂದು ಆರೋಪಿಸಿದರು.
ಎರಡೂ ರಂಗಗಳು ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿವೆ ದಿನೇಶ್ ಬೀದಿ ಕಾರ್ಮಿಕರನ್ನು ರಾಜಕೀಯವಾಗಿ ಶೋಷಣೆ ಮಾಡಿದಂತೆ ಈಗ ಉದ್ಯೋಗ ಖಾತ್ರಿ ಕಾರ್ಮಿಕರನ್ನು ಶೋಷಣೆ ಮಾಡುತ್ತಿದ್ದು, ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸದಿದ್ದರೆ ಉದ್ಯೋಗ ನೀಡುವುದಿಲ್ಲ ಎಂದು ಸಿಪಿಎಂ ಜನಪ್ರತಿನಿಧಿಗಳು, ಮುಖಂಡರು ಬೆದರಿಕೆ ಹಾಕುತ್ತಿದ್ದಾರೆ 2021-2022ರಲ್ಲಿ 11170.86 ಕೋಟಿ ರೂಪಾಯಿ ವೆಚ್ಚವನ್ನು ಮರೆಮಾಚುವ ಮೂಲಕ ಸಿಪಿಎಂ-ಕಾಂಗ್ರೆಸ್ ಮೋರ್ಚಾಗಳು ಸುಳ್ಳು ಪ್ರಚಾರ ಮಾಡುತ್ತಿವೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ಉಪಾದ್ಯಕ್ಷ ಸುಧಾಮ ಗೋಸಾಡ, ಮಹಿಳಾಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಎಂ.ಎಲ್.ಅಶ್ವಿನಿ, ಬೆಳ್ಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೀತಾ, ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷೆ ಪ್ರಮೀಳಾ ಮಜಲ್, ಮಹಿಳಾಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀತಾ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುಕುಮಾರ್ ಕುದುರೆಪಾಡಿ, ಪಿ.ಆರ್.ಸುನೀಲ್, ಪೈವಳಿಕೆ ಜಿ.ಪಂ. ಸದಸ್ಯೆ ಜಯಲಕ್ಷ್ಮಿ ಭಟ್ ಉಪಸ್ಥಿತರಿದ್ದರು.
ಉದ್ಯೋಗ ಖಾತ್ರಿ ಯೋಜನೆ ವಿರುದ್ಧ ಉಭಯ ರಂಗಗಳು ಸುಳ್ಳು ಪ್ರಚಾರ ಕೊನೆಗೊಳಿಸಬೇಕು-ಬಿಜೆಪಿ
0
ಮಾರ್ಚ್ 08, 2023
Tags

