HEALTH TIPS

ನಾಳೆಯಿಂದ ಮುಹಿಮ್ಮತ್‍ನಲ್ಲಿ 'ಪೆÇ್ರಫ್‍ಸಮ್ಮಿಟ್-2023'ಕಾರ್ಯಕ್ರಮ



           ಕಾಸರಗೋಡು: ಸುನ್ನಿ ಸಟೂಡೆಂಟ್ ಫೆಡರೇಶನ್(ಎಸ್‍ಎಸ್‍ಎಫ್)ಕೇರಳ ಆಯೋಜಿಸಿರುವ 13ನೇ 'ಪೆÇ್ರಫ್‍ಸಮ್ಮಿಟ್-2023'ಕಾರ್ಯಕ್ರಮ ಮಾ. 10ರಿಂದ 12ರ ವರೆಗೆ  ಕಾಸರಗೋಡಿನ ಮುಹಿಮ್ಮತ್‍ನಲ್ಲಿ ನಡೆಯಲಿದೆ. ಕೇರಳದ ವೃತ್ತಿಪರ ಕ್ಯಾಂಪಸ್‍ಗಳು ಮತ್ತು ರಾಷ್ಟ್ರೀಯ ವಿಶ್ವವಿದ್ಯಾಲಯಗಳಿಂದ ಸುಮಾರು 4000 ಮಂದಿ ವಿದ್ಯಾರ್ಥಿಗಳು ಪೆÇ್ರಫ್‍ಸಮ್ಮಿಟ್‍ನಲ್ಲಿ ಭಾಗವಹಿಸಲಿದ್ದಾರೆ.  'ಡಯಗ್ನೋಸ್ ವ್ಯಾಲ್ಯೂಸ್ ಏಂಡ್ ಡಿಸೈನ್ ಎತಿಕ್ಸ್'ಎಂಬುದು ಪೆÇ್ರಫ್‍ಸಮ್ಮಿಟ್‍ನ ಮುಖ್ಯ ವಿಷಯವಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಪಳ್ಳಂಗೋಡು ಅಬ್ದುಲ್ ಖಾದರ್ಮದನಿ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
           ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಇಸ್ಲಾಂನ ಸೂಫಿ ತತ್ವಗಳಂತೆ ನೈತಿಕತೆ ಮತ್ತು ಪರಸ್ಪರ ತಿಳುವಳಿಕೆಯನ್ನು ಕೇಂದ್ರೀಕರಿಸುವ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂಬುದು ಪೆÇ್ರಫೆಸಮಮಿಟ್‍ನ ಮುಖ್ಯ ಸಂದೇಶವಾಗಿದೆ.
             ಮಾ.11ರ ಶನಿವಾರ ಬೆಳಗ್ಗೆ 9 ಗಂಟೆಗೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಸಯ್ಯಿದ್ ಅಟ್ಟಕೋಯ ತಙಳ್ ಕುಂಬೋಳ್ ಅವರು ಪೆÇ್ರಪ್‍ಸಮಿಟ್ ಉದ್ಘಾಟಿಸುವರು.  ಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಫಿರ್ದೌಸ್ ಸುರೈಜಿ ಸಖಾಫಿ ಅಧ್ಯಕ್ಷತೆ ವಹಿಸುವರು. 12ರಂದು ಬೆಳಿಗ್ಗೆ, ಮಾರ್ಚ್ 12ರಂದು ನಡೆಯಲಿರುವ 'ನಾವು ಭಾರತೀಯರು'ಎಂಬ ವಿಷಯದಲ್ಲಿ ನಡೆಯುವ ವಿಚಶಾರಸಂಕಿರಣದಲ್ಲಿ ಸಾಮಾಜಿಕ ಕಾರ್ಯಕರ್ತ ರಾಮ್ ಪುಣ್ಯನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕೇರಳ ಮುಸ್ಲಿಂ ಜಮಾತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಇಬ್ರಾಹೀಮುಲ್ ಖಲೀಲುಲ್ ಬುಖಾರಿ ಉಪನ್ಯಾಸ ನೀಡಲಿದ್ದಾರೆ. ಸಮಸ್ತ ಕಾರ್ಯದರ್ಶಿ ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ, ಸಮಸ್ತ ಕೇಂದ್ರ ಮುಶಾವರ ಸದಸ್ಯ ಮುಹಮ್ಮದಲಿ ಸಖಾಫಿ ತ್ರಿಕರಿಪುರಿ ಮತ್ತು ಬಶೀರ್ ಫೈಝಿ ವೆನ್ನಕೋಡ್ ತರಬೇತಿ ನೀಡುವರು.  ಎಸ್ಸೆಸೆಫ್ ರಾಷ್ಟ್ರೀಯ ಅಧ್ಯಕ್ಷರು ಡಾ. ಮೊಹಮ್ಮದ್ ಫಾರೂಕ್ ನಯೀಮಿ, ಎಂ ಮೊಹಮ್ಮದ್ ಸ್ವಾದಿಕ್, ವಿ.ಪಿ.ಎ ತಂಗಳ್ ಅತ್ತಿರಿ ಮತ್ತು ಇಬ್ರಾಹಿಂ ಬಾಖವಿ ಮೇಲ್ಮುರಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವರು.  :
ಸುದ್ದಿಗೋಷ್ಠೀಯಲ್ಲಿ  ಸೈಯದ್ ಮುನೀರುಲ್ ಅಹ್ದಲ್ ಅಹ್ಸನಿ, ಡಾ. ಎಂ.ಎಸ್ ಮುಹಮ್ಮದ್, ಮೂಸಾ ಸಖಾಫಿ ಕಳತ್ತೂರು, ಮಹಮ್ಮದ್ ಮುದುಸ್ಸಿರ್,
ರಶೀದ್ ಸ-ಅದಿ ಪೂಂಗೋಟ್  ಉಪಸ್ಥಿತರಿದ್ದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries