ಬದಿಯಡ್ಕ: ಜನಪ್ರಿಯ ವೈದ್ಯ ಜನಪರ ಸಮಾಜ ಸೇವಕ, ಸರಳ ಸಜ್ಜನ ಸಾಧಕ, ಸಾಹಿತ್ಯ ಕಲಾರಾಧಕ, ಡಾ. ಜನಾರ್ಧನ ನಾಯ್ಕ್ ಸಿ ಎಚ್ ಅವರನ್ನು ಅಂಬೇಡ್ಕರ್ ವಿಚಾರ ವೇದಿಕೆ ವತಿಯಿಂದ ಗೌರವಿಸಲಾಯಿತು. ಎಂ ಎಚ್ ಶೇಖರ್ ಸಂಸ್ಮರಣೆ ಅಂಗವಾಗಿ ಕಾರ್ಯಕ್ರಮವನ್ನು ಬದಿಯಡ್ಕ ಸಂಸ್ಕøತಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ವೇದಿಕೆಯ ಗೌರವಾಧ್ಯಕ್ಷ ಚಂದ್ರಶೇಖರ ಬಿ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಾ ಬಿ ಉದ್ಘಾಟಿಸಿದರು. ನಾರಾಯಣ ಬಾರಡ್ಕ ಅಭಿನಂದನಾ ಭಾಷಣದಲ್ಲಿ ಮಾತನಾಡಿ, ಕಾಸರಗೋಡು ಜನರಲ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ ಜನಾಧರ್Àನ ನಾಯ್ಕ ಅವರು ತಮ್ಮ ಪ್ರಾಮಾಣಿಕ ಸೇವೆಗಾಗಿ ಅತ್ಯುತ್ತಮ ವೈದ್ಯರಾಗಿ ರಾಜ್ಯ ಪ್ರಶಸ್ತಿಯನ್ನು ಐದು ಬಾರಿ ಪಡೆದಿರುತ್ತಾರೆ. ಎಚ್ ಐ ವಿ ಹಾಗೂ ಕೊರೋನಾ ಕುರಿತಾಗಿ ಜನಜಾಗೃತಿ ಮೂಡಿಸಿದ್ದಾರೆ. ರೋಟರಿ ಕ್ಲಬ್ ಅಧ್ಯಕ್ಷರಾಗಿ ಹಲವು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಸಾಹಿತಿಯಾಗಿ, ಕಲಾವಿದನಾಗಿ, ಗುರುತಿಸಿಕೊಂಡಿದ್ದಾರೆ. ವೈದ್ಯಕೀಯ ಕ್ಷೇತ್ರದ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಿದರು.
ಪತ್ರಕರ್ತ, ಸಾಹಿತಿ ರಾಧಾಕೃಷ್ಣ ಕೆ ಉಳಿಯತ್ತಡ್ಕ, ಗಣೇಶ ಸಿಎಚ್, ರವಿ ಕನಕಪ್ಪಾಡಿ, ಸುಪ್ರಿಯಾ ಟೀಚರ್, ಗಂಗಾಧರ ಗೋಳಿಯಡ್ಕ, ಎಚ್ ಪದ್ಮನಾಭ ಶುಭ ಹಾರೈಸಿದರು. ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಮನೀಶ್ ಸಿ ಎಚ್, ಶಿವಾನಿ ಬಿ ಶಂಕರ್, ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಎಂ ಎಸ್ ಶೇಖರ್ ಸಂಸ್ಮರಣೆ :
ಅಂಬೇಡ್ಕರ್ ತತ್ವಾದರ್ಶಗಳನ್ನು ಜನಮನಕ್ಕೆ ತಲುಪಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ ಅಂಬೇಡ್ಕರ್ ವಿಚಾರ ವೇದಿಕೆಯ ಸ್ಥಾಪಕ ಎಂ ಎಸ್ ಶೇಖರ್ ಸಂಸ್ಮರಣೆ ಇದೇ ಸಂದರ್ಭದಲ್ಲಿ ನಡೆಯಿತು. ಗಣೇಶ್ ಸಿ ಎಸ್, ರವಿ ಕನಕಪ್ಪಾಡಿ ಸಂಸ್ಮರಣಾ ಭಾಷಣ ಮಾಡಿದರು. ಎಂ ಎಸ್ ಶೇಖರ್ ಅವರ ಭಾವಚಿತ್ರಕ್ಕೆ ನಿವೃತ್ತ ಗ್ರಾಮಾಧಿಕಾರಿ ಕೃಷ್ಣ ದರ್ಬೆತ್ತಡ್ಕ ಹಾರಾರ್ಪಣೆ ಮಾಡಿದರು. ವೇದಿಕೆಯ ಅಧ್ಯಕ್ಷ ರಾಮಪಟ್ಟಾಜೆ ಸ್ವಾಗತಿಸಿದರು. ವಿಜಯಕುಮಾರ್ ಬಾರಡ್ಕ ಕಾರ್ಯಕ್ರಮ ನಿರೂಪಿಸಿದರು.
ಅಂಬೇಡ್ಕರ್ ವಿಚಾರವೇದಿಕೆಯ ವತಿಯಿಂದ ಪ್ರಸಿದ್ಧ ವೈದ್ಯ ಡಾ. ಜನಾರ್ಧನ ನಾಯ್ಕ್‍ರಿಗೆ ಸನ್ಮಾನ
0
ಮಾರ್ಚ್ 07, 2023


