HEALTH TIPS

ಕೇರಳದಲ್ಲಿ ಕೆ-ಚಿಕನ್ ಶೀಘ್ರ: ಕೇರಳ ಬ್ರಾಂಡ್ ಕೋಳಿ ರಾಜ್ಯದಲ್ಲಿ ಆರಂಭಿಸಲು ಸರ್ಕಾರದಿಂದ ಯೋಜನೆ


              ಕೊಲ್ಲಂ: ಕೇರಳ ಬ್ರಾಂಡ್ ಕೋಳಿಯನ್ನು ರಾಜ್ಯದಲ್ಲಿ ಆರಂಭಿಸಲು  ಸರ್ಕಾರ ಮುಂದಾಗಿದೆ. ಅಂತರರಾಜ್ಯ ಲಾಬಿಗಳು ರಾಜ್ಯದಲ್ಲಿ ಬ್ರಾಯ್ಲರ್ ಮಾರ್ಕೆಟಿಂಗ್ ಏಕಸ್ವಾಮ್ಯತೆಯತ್ತ ವಸಾಗಿದ್ದು, ಇದನ್ನು ನಿಯಂತ್ರಿಸುವ ಲಕ್ಷ್ಯ ಕೆ-ಚಿಕನ್ ಯೋಜನೆಯದ್ದಾಗಿದೆ.
            ಮಾರುಕಟ್ಟೆ ಕ್ಷೇತ್ರದಲ್ಲಿ ಬದಲಾವಣೆ ತರಲು ಕೇರಳದಲ್ಲಿ ಸುಮಾರು ಒಂದು ಸಾವಿರ ಬ್ರಾಯ್ಲರ್ ಫಾರಂ ಸ್ಥಾಪಿಸಿ ಕೇರಳ ಬ್ರಾಂಡ್‍ನಲ್ಲಿ ಕೋಳಿ ಮಾಂಸವನ್ನು ಸಾರ್ವಜನಿಕ ಮಾರುಕಟ್ಟೆಗೆ ತರಲಾಗುವುದು ಎಂದು ಸಚಿವ ಜೆ.ಚಿಂಚುರಾಣಿ ತಿಳಿಸಿದರು.
            ಜಿಲ್ಲಾ ಮಟ್ಟದ ರೈತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವರು ಮಾತನಾಡಿದರು. ಸೂಕ್ತರೀತಿಯಲ್ಲಿ ಕೋಳಿ ಬೆಲೆ ವಿಧಿಸಲಾಗುತ್ತದೆ. ಕೇರಳದಲ್ಲಿ ಮಾಂಸದ ಬೆಲೆಯನ್ನು ಕೊಯಮತ್ತೂರು, ನಾಮಕ್ಕಲ್ ಮತ್ತು ಪಲ್ಲಡಂನಲ್ಲಿ ಏಕಸ್ವಾಮ್ಯಗಳು ನಿರ್ಧರಿಸುವ ಪರಿಸ್ಥಿತಿ ಬದಲಾಗಬೇಕು ಎಂದರು.
           ಮಾಂಸ ಸಂಸ್ಕರಣಾ ಘಟಕಗಳು, ತ್ಯಾಜ್ಯ ಮೌಲ್ಯವರ್ಧಿತ ಘಟಕಗಳು, ಬ್ರಾಯ್ಲರ್ ತಳಿ ಸಾಕಣೆ ಕೇಂದ್ರಗಳು ಮತ್ತು ಕುಟುಂಬಶ್ರೀಯ ಮಾರುಕಟ್ಟೆ ಕೇಂದ್ರಗಳು ಸೇರಿದಂತೆ ಕೇರಳ ಬ್ರಾಂಡ್ ಚಿಕನ್ ಅನ್ನು ಪ್ರಾರಂಭಿಸುವ ಗುರಿ ಇದೆ ಎಂದು ಸಚಿವರು ಹೇಳಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries