HEALTH TIPS

ಏಷ್ಯಾನೆಟ್ ಸುದ್ದಿ ಕಚೇರಿಗೆ ದಾಳಿ: ಪೊಕ್ಸೋ ಕೇಸ್ ದಾಖಲಿಸಲಾಗುವುದೆಂದ ಸಿಎಂ: ಗೂಂಡಾಗಿರಿ ತೋರಿಸಿದ ಎಸ್.ಎಫ್.ಐ


           ಕೊಚ್ಚಿ: ಏಷ್ಯಾನೆಟ್ ನ್ಯೂಸ್ ನ ವಿವಾದಿತ ಸುದ್ದಿಯ ಹಿನ್ನೆಲೆಯಲ್ಲಿ ಪೋಕ್ಸೊ ಕಾಯ್ದೆಯಡಿ ಸೆಕ್ಷನ್‍ಗಳನ್ನು ಸೇರಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಸೂಚನೆ ನೀಡಿದ್ದಾರೆ.
         ಇದರ ಬೆನ್ನಿಗೇ ಏಷಿಯಾನೆಟ್ ಕಚೇರಿಗೆ ಎಸ್.ಎಫ್.ಐ. ದಾಳಿ ನೆಡಸಿ ದಾಂಧಲೆ ಎಬ್ಬಿಸಿತು. ಮಾದಕ ವಸ್ತುಗಳ ಬಳಕೆಯ ಕುರಿತು ಏμÁ್ಯನೆಟ್ ನ್ಯೂಸ್‍ನ ರೋವಿಂಗ್ ವರದಿಯಿಂದ ಈ ಸಮಸ್ಯೆ ಉದ್ಭವಿಸಿದೆ.
           ಪಿವಿ ಅನ್ವರ್ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಏμÁ್ಯನೆಟ್ ನ್ಯೂಸ್ ಸುದ್ದಿ ಸರಣಿಯಲ್ಲಿ ಪ್ರಸಾರಮಾಡಿದ ವಿಷಯ ನಕಲಿ ಎಂಬ ದೂರು ಬಂದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವಿಧಾನಸಭೆಯಲ್ಲಿ ಹೇಳಿದರು. ಹದಿನಾಲ್ಕು ವರ್ಷದ ವಿದ್ಯಾರ್ಥಿನಿ ತಾನು ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಜನರೊಂದಿಗೆ ಮತ್ತು ಅದೇ ವಯಸ್ಸಿನ ಅನೇಕ ಜನರೊಂದಿಗೆ ಡ್ರಗ್ ಡೀಲ್ ಮಾಡಿದ್ದಾಗಿ  ಸುದ್ದಿ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದು ವಿವಾದವಾಯಿತು.
             ಬಳಿಕ ಈ ಹಿನ್ನೆಲೆಯಲ್ಲಿ ಕಣ್ಣೂರು ನಗರ ಪೆÇಲೀಸರು ಜಿಲ್ಲೆಯಲ್ಲಿ ತನಿಖೆ ನಡೆಸಿದ್ದಾರೆ. ವಿದ್ಯಾರ್ಥಿನಿಯರ ಪ್ರಕಾರ, ಸದರಿ ಶಾಲೆಯ ಮಕ್ಕಳನ್ನು ಭೇಟಿಯಾಗಿ,  ಸ್ನೇಹಿತರನ್ನು ಮಾತನಾಡಿಸಿ ಶಾಲೆಯ ಅಧಿಕಾರಿಗಳನ್ನು ವಿಚಾರಿಸಿದಾಗ ಬೇರೆ ಯಾವ ಮಕ್ಕಳೂ ಮಾದಕ ದಾಸ್ಯಕ್ಕಾಗಲಿ, ಕಿರುಕುಳಕ್ಕಾಗಲಿ ಒಳಗಾದ ಬಗ್ಗೆ ತಿಳಿದುಬಂದಿಲ್ಲ. ಅಪ್ರಾಪ್ತ ಬಾಲಕಿಯನ್ನು ಬಳಸಿಕೊಂಡು ಇಂತಹ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದೂರನ್ನು ಸ್ವೀಕರಿಸಿದ್ದೇವೆ ಎಂದು ನಗರ ಪೋಲೀಸ್ ಕಮಿಷನರ್ ತಿಳಿಸಿದ್ದಾರೆ. ಅಪರಾಧದ ಬಗ್ಗೆ ತಿಳಿದ ನಂತರ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಸಂತ್ರಸ್ತೆ ಸ್ವತಃ ಬಹಿರಂಗಪಡಿಸಿದರೂ ಪೊಲೀಸರಿಗೆ ದೂರು ನೀಡದಿರುವುದು ಪೊಕ್ಸೋ ಕಾಯ್ದೆಯ ಸೆಕ್ಷನ್ 21/19 ರ ಅಡಿಯಲ್ಲಿ ಅಪರಾಧವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

          ನಿನ್ನೆ ಸಂಜೆಯ ಬಳಿಕ ಏಷಿಯಾನೆಟ್ ನ್ಯೂಸ್ ನ ಕೊಚ್ಚಿ ಪ್ರಾದೇಶಿಕ ಕಚೇರಿಗೆ ನುಗ್ಗಿದ ಎಸ್ ಎಫ್ ಐ ಕಾರ್ಯಕರ್ತರು ಕಾರ್ಯಚಟುವಟಿಕೆಗೆ ಅಡ್ಡಿಪಡಿಸಿ ಕಚೇರಿಯೊಳಗೆ ಘೋಷಣೆ ಕೂಗಿ, ನೌಕರರಿಗೆ ಬೆದರಿಕೆ ಹಾಕಿದರು. ಕಚೇರಿ ಮುಂದೆ ಎಸ್‍ಎಫ್‍ಐ ಕಾರ್ಯಕರ್ತರು ಅವಾಚ್ಯ ಶಬ್ದಗಳಿಂದ ನಿಂದಿಸುವ ಬ್ಯಾನರ್ ಕಟ್ಟಿದ್ದರು. ಕಾರ್ಯಕರ್ತರನ್ನು ಪೆÇಲೀಸರು ಅಲ್ಲಿಂದ ಹೊರ ಹಾಕಿದರು. ಏμÁ್ಯನೆಟ್ ನ್ಯೂಸ್‍ನ ಸ್ಥಾನೀಯ ಸಂಪಾದಕ ಅಭಿಲಾμï ಜಿ ನಾಯರ್ ಅವರು ಅತಿಕ್ರಮ ಪ್ರವೇಶ ಮಾಡಿ ಕಚೇರಿಯ ಕೆಲಸಕ್ಕೆ ಅಡ್ಡಿಪಡಿಸಿದ ಬಗ್ಗೆ ನೀಡಿದ ದೂರಿನ ಮೇರೆಗೆ ಪಾಲಾರಿವಟ್ಟಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭದ್ರತಾ ಸಿಬ್ಬಂದಿಯನ್ನು ಹತ್ತಿಕ್ಕಿ ಕಾರ್ಯಕರ್ತರು ಕಚೇರಿಗೆ ನುಗ್ಗಿದ ಸಿಸಿಟಿವಿ ದೃಶ್ಯಾವಳಿ ಹಾಗೂ ಕ್ಯಾಮರಾ ದೃಶ್ಯಾವಳಿಗಳನ್ನು ದೂರಿನ ಜತೆಗೆ ಸಾಕ್ಷ್ಯವಾಗಿ ಸಲ್ಲಿಸಲಾಗಿದೆ.
          ಎಸ್‍ಎಫ್‍ಐ ಕ್ರಮವನ್ನು ಕೇರಳ ಪತ್ರಕರ್ತರ ಸಂಘ ಖಂಡಿಸಿದೆ. ಈ ಸುದ್ದಿಗೆ ಭಿನ್ನಾಭಿಪ್ರಾಯ ಅಥವಾ ವಿರೋಧದ ಹಂತಗಳಲ್ಲಿ ಹಿಂದೆ ಪ್ರತಿಭಟನೆಗಳು ನಡೆದಿವೆ. ಆದರೆ ಮಾಧ್ಯಮ ಸಂಸ್ಥೆಯೊಂದರ ಕಚೇರಿಗೆ ನುಗ್ಗಿ ನೌಕರರಿಗೆ ಬೆದರಿಕೆ ಹಾಕಿರುವುದು ಪ್ರತಿಭಟನೆಯಲ್ಲ, ಗೂಂಡಾಗಿರಿ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗೌರವಿಸುವ ಕೇರಳದಂತಹ ದೇಶವು ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಇದು ಜವಾಬ್ದಾರಿಯುತ ರಾಜಕೀಯ ಪಕ್ಷದ ವಿದ್ಯಾರ್ಥಿ ಸಂಘಟನೆಯಿಂದ ನ್ಯಾಯ ವ್ಯವಸ್ಥೆ ಇರುವ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸ್ವತಂತ್ರ ಮಾಧ್ಯಮ ಕಾರ್ಯದ ಮೇಲಿನ ದಾಳಿಯಾಗಿದೆ. ಸಂಸ್ಥೆಯೊಳಗೆ ನುಗ್ಗಿ ಘೋಷಣೆಗಳನ್ನು ಕೂಗಿ, ಸಂಸ್ಥೆಯ ಮುಂದೆ ನಿಂದನೀಯ ಬ್ಯಾನರ್ ಕಟ್ಟಿರುವುದು ಖಂಡನೀಯ. ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷೆ ಎಂ.ವಿ.ವಿನೀತಾ ಹಾಗೂ ಪ್ರಧಾನ ಕಾರ್ಯದರ್ಶಿ ಆರ್.ಕಿರಣ್ ಬಾಬು ಆಗ್ರಹಿಸಿದ್ದಾರೆ.
           ತಿರುವನಂತಪುರ ಪ್ರೆಸ್ ಕ್ಲಬ್ ಕೂಡ ಘಟನೆಯನ್ನು ತೀವ್ರವಾಗಿ ಪ್ರತಿಭಟಿಸಿದೆ. ಸಂಘಟನೆಗಳ ನೆಪದಲ್ಲಿ ಕ್ರಿಮಿನಲ್‍ಗಳು ಅಭಿವೃದ್ಧಿ ಹೊಂದಲು ಬಿಡಬಾರದು. ಮಾಧ್ಯಮ ಸ್ವಾತಂತ್ರ್ಯಕ್ಕೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರೆಸ್ ಕ್ಲಬ್ ಅಧ್ಯಕ್ಷ ಎಂ.ರಾಧಾಕೃಷ್ಣನ್ ಮತ್ತು ಕಾರ್ಯದರ್ಶಿ ಕೆ.ಎನ್.ಸಾನು ಒತ್ತಾಯಿಸಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries