HEALTH TIPS

'ಕುಟುಂಬಶ್ರೀ' ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು: ಸ್ವ-ಉದ್ಯೋಗಾವಕಾಶ ಕಲ್ಪಿಸುವ ‘ಉನ್ನತಿ’ ಯೋಜನೆಗೆ ಚಾಲನೆ


              ತಿರುವನಂತಪುರಂ: ಕೇರಳ ಸರ್ಕಾರ ತಿರುವನಂತಪುರದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸ್ವಾಗತ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸಿದ್ದರು.
             ವಿಶ್ವದಲ್ಲೇ ಅತಿ ದೊಡ್ಡ ಮಹಿಳಾ ಸ್ವಸಹಾಯ ಜಾಲಗಳಲ್ಲಿ ಒಂದಾದ ‘ಕುಟುಂಬಶ್ರೀ’ಯ ಬೆಳ್ಳಿಹಬ್ಬದ ಸಂಭ್ರಮಾಚರಣೆಯನ್ನು ರಾಷ್ಟ್ರಪತಿಗಳು ಉದ್ಘಾಟಿಸಿದರು.
           ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕರಿಗೆ ಉದ್ಯೋಗ ಮತ್ತು ಸ್ವ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮಹತ್ವದ ಯೋಜನೆಯಾದ 'ಉನ್ನತಿ'ಗೆ ರಾಷ್ಟ್ರಪತಿಗಳು ಚಾಲನೆ ನೀಡಿದರು. ಮಲಯಾಳಂ ಭಾμÉಗೆ ಅನುವಾದಿಸಲಾದ ತಾಂತ್ರಿಕ ಎಂಜಿನಿಯರಿಂಗ್ ಡಿಪೆÇ್ಲಮಾ ಪುಸ್ತಕಗಳ ಬಿಡುಗಡೆಗೂ ರಾಷ್ಟ್ರಪತಿಗಳು ಸಾಕ್ಷಿಯಾದರು.
            ಈ ಸುಂದರ ರಾಜ್ಯದ ಭಾಷೆ ಮತ್ತು ಸಂಸ್ಕøತಿಯಿಂದ ಒಗ್ಗೂಡಿದ ಕೇರಳದಲ್ಲಿ ಎಲ್ಲಾ ಧರ್ಮದವರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಕೇರಳವು ದೇಶದಲ್ಲೇ ಅತ್ಯುತ್ತಮ ಸ್ತ್ರೀ ಮತ್ತು ಪುರುಷ ಅನುಪಾತವನ್ನು ಹೊಂದಿದೆ. ಮಹಿಳಾ ಸಾಕ್ಷರತೆ ಸೇರಿದಂತೆ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯವೂ ಕೇರಳವಾಗಿದೆ ಎಂದು ವರ್ಮು ಹೇಳಿದರು.
            ಕೇರಳದಲ್ಲಿ ಮಹಿಳೆಯರು ಹೆಚ್ಚು ಶಿಕ್ಷಣ ಪಡೆದು ಸಬಲರಾಗಿದ್ದಾರೆ. ಇದು ಹಲವಾರು ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಕೇರಳದ ಉತ್ತಮ ಸಾಧನೆಯಲ್ಲಿ ಪ್ರತಿಫಲಿಸುತ್ತದೆ. 'ಅಮೃತಕಾಲ'ದ ಸಂದರ್ಭದಲ್ಲಿ ಕೇರಳದ ವಿದ್ಯಾವಂತ ಮತ್ತು ಸಮರ್ಪಿತ ಯುವಕರು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವಲ್ಲಿ ದೊಡ್ಡ ಕೊಡುಗೆಯನ್ನು ನೀಡುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries