ಕಾಸರಗೋಡು: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಾಸರಗೋಡು ಜಿಲ್ಲೆ 81.35 ರಷ್ಟು ಸಾಲ ಮತ್ತು ಠೇವಣಿ ಅನುಪಾತವನ್ನು ಸಾಧಿಸಿದೆ ಎಂದು ಜಿಲ್ಲಾ ಮಟ್ಟದ ಬ್ಯಾಂಕಿಂಗ್ ಅವಲೋಕನಾ ಸಭೆಯಲ್ಲಿ ವ್ಯಕ್ತಪಡಿಸಲಾಗಿದೆ. ಪ್ರಾಥಮಿಕ ವಲಯದಲ್ಲಿ ಶೇ 94ರಷ್ಟು ಗುರಿ ಸಾಧಿಸಲಾಗಿದ್ದು, ಒಟ್ಟು ಬ್ಯಾಂಕಿಂಗ್‍ಪ್ರದೇಶದಲ್ಲಿ ರೂ.3786300000 ಗುರಿಯಲ್ಲಿ ರೂ.3560404400 ಗುರಿ ಸಾಧಿಸಲಾಗಿದೆ.
ಕೃಷಿ ಸಾಲ ಕ್ಷೇತ್ರದಲ್ಲಿ ಹೆಚ್ಚಿನ ಗುರಿ ಸಾಧಿಸಲಾಗಿದೆ. ದ್ವಿತೀಯ ವಲಯದಲ್ಲಿ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಲಯವು ಮೂರನೇ ಹಣಕಾಸು ತ್ರೈಮಾಸಿಕದಲ್ಲಿ ಶೇ. 73ರಷ್ಟು ಬೆಳವಣಿಗೆ ದಾಖಲಿಸಿದೆ. ರೂ.1037350000 ಗುರಿಯಲ್ಲಿ 756956700 ಸಾಧಿಸಲಾಗಿದೆ. ಶಿಕ್ಷಣ ಸಾಲ, ಗೃಹ ಸಾಲ ಸೇರಿದಂತೆ ಮೂರನೇ ವಲಯದಲ್ಲಿ ಶೇ.22ರಷ್ಟು ಗುರಿ ತಲುಪಿದೆ. 1116500000 ರೂ. ಗುರಿಯಲ್ಲಿ ರೂ.245332300 ಪ್ರಗತಿ ಸಾಧಿಸಲಾಗಿದೆ. ಡಿಸೆಂಬರ್ ಮೂರನೇ ತ್ರೈಮಾಸಿಕದಲ್ಲಿ ಜಿಲ್ಲೆಯಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆದ್ಯತಾ ವಿಭಾಗದಲ್ಲಿ ಶೇ.77 ಮತ್ತು ಆದ್ಯತೆಯೇತರ ವಿಭಾಗದಲ್ಲಿ ಶೇ.67ರಷ್ಟು ಸುಧಾರಣೆಯಾಗಿದೆ. ಒಟ್ಟು ಶೇ.74ರಷ್ಟು ಗುರಿ ಸಾಧಿಸಲಾಗಿದೆ.
ಕಾಸರಗೋಡು ಕಲೆಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಬ್ಯಾಂಕಿಂಗ್ ಅವಲೋಕನಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅಧ್ಯಕ್ಷತೆ ವಹಿಸಿದ್ದರು. ಲೀಡ್ ಬ್ಯಾಂಕ್ ನ ಜಿಲ್ಲಾ ವ್ಯವಸ್ಥಾಪಕ ಎನ್.ವಿ.ಬಿಮಲ್ ವರದಿ ಮಂಡಿಸಿದರು. ಕೆನರಾ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಶಶಿಧರ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಿಸರ್ವ್ ಬ್ಯಾಂಕ್ ಸಹಾಯಕ ಮಹಾ ವ್ಯವಸ್ಥಾಪಕ ಪ್ರದೀಪ್ ಮಾಧವ್ ಅವಲೋಕನ ನಡೆಸಿದರು.
ಕೃಷಿ ಸಾಲ ಕ್ಷೇತ್ರದಲ್ಲಿ ಶೇ 94ರಷ್ಟು ಗುರಿ ಸಾಧನೆ: ಜಿಲ್ಲಾ ಮಟ್ಟದ ಬ್ಯಾಂಕಿಂಗ್ ಅವಲೋಕನಾ ಸಮಿತಿ ಸಭೆ
0
ಮಾರ್ಚ್ 17, 2023
Tags


