ಪತ್ತನಂತಿಟ್ಟ: ಮೀನಮಾಸ ಪೂಜೆಗಾಗಿ ಇಂದು ಶಬರಿಮಲೆ ದೇವಾಲಯದ ಗರ್ಭಗೃಹ ಬಾಗಿಲು ತೆರೆಯಲಾಯಿತು. ಇದು ಸಂಜೆ 5 ಗಂಟೆಗೆ ತೆರೆಯಲ್ಪಟ್ಟಿತು.
ಮಾ.19ರ ರಾತ್ರಿ ಹರಿವರಾಸನ ಗಾಯನದೊಂದಿಗೆ ಮೀನಮಾಸ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿವೆ. ದೇಗುಲದ ತಂತ್ರಿಗಳಾದ ಕಂಠಾರರ್ ರಾಜೀವರ್ ನೇತೃತ್ವದಲ್ಲಿ ದೇವಸ್ಥಾನದ ಮೇಲ್ಶಾಂತಿ ಜಯರಾಮನ್ ನಂಬೂದಿರಿ ಅವರು ದೇವಸ್ಥಾನದ ಪ್ರದಕ್ಷಿಣೆ ನಡೆಸಿ ದೀಪ ಬೆಳಗಿಸುವರು.
ಆರಂಭದ ದಿನ ಯಾವುದೇ ಪೂಜೆ ಇರುವುದಿಲ್ಲ. ನಿರ್ಮಾಲ್ಯ ದರ್ಶನ ಹಾಗೂ ಅಭಿಷೇಕ ನಡೆಯಲಿದೆ. ನಂತರ 5.30ಕ್ಕೆ ಮಹಾಗಣಪತಿ ಹೋಮ. ತುಪ್ಪದ ಅಭಿμÉೀಕ, ಉಷಃಪೂಜೆ ನಡೆಯಲಿದೆ.15ರಿಂದ 19ರವರೆಗೆ 5 ದಿನ ಉದಯಾಸ್ತಮಯ ಪೂಜೆ, ಕಲಶಾಭಿμÉೀಕ, ಕಲಭಾಭಿμÉೀಕ, ಪಡಿಪೂಜೆ, ಪುμÁ್ಪಭಿμÉೀಕ ನಡೆಯಲಿದೆ.
ಭಕ್ತರು ವರ್ಚುವಲ್ ಕ್ಯೂ ಮೂಲಕ ಬುಕ್ಕಿಂಗ್ ಮಾಡಿ ದರ್ಶನಕ್ಕೆ ತಲುಪಬಹುದು. ನಿಲಯ್ಕಲ್ ನಲ್ಲಿ ಸ್ಪಾಟ್ ಬುಕ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಶಬರಿಮಲೆ ದೇವಾಲಯದ ಸಂಕೀರ್ಣವು ಮಾರ್ಚ್ 26 ರಂದು ತೆರೆದು ಏಪ್ರಿಲ್ 5 ರಂದು ಉತ್ರಂ ತಿರುಲ್ಸವಂಗಾಗಿ ಮುಚ್ಚಲಿದೆ. ಮಾರ್ಚ್ 27 ರಂದು ಧ್ವಜಾರೋಹಣ ಮಾಡಲಾಗುವುದು. ಏಪ್ರಿಲ್ 5 ರಂದು ಪೈಂಕುಣಿ ಉತ್ರಂ ಆರತ್ ನಡೆಯಲಿದೆ.
ಮೀನಮಾಸ ಪೂಜೆ; ಶಬರಿಮಲೆ ದೇವಸ್ಥಾನದಲ್ಲಿ ಇಂದಿನಿಂದ ಪೂಜಾದಿಗಳು
0
ಮಾರ್ಚ್ 14, 2023


