ಪೆರ್ಲ
: ಎಣ್ಮಕಜೆ ಗ್ರಾಮಪಂಚಾಯತ್‌ನ 2022-23ನೇ ಸಾಲಿನ ವಾರ್ಷಿಕ ಯೋಜನೆಗೊಳಪಡಿಸಿ ಎಂಟು
ಯೋಜನೆಗಳ ಉದ್ಘಾಟನೆ ಮತ್ತು ಪಂಚಾಯತ್ ಅನುಷ್ಠಾನಗೊಳಿಸುತ್ತಿರುವ ಸ್ವಚ್ಛ ಎಣ್ಮಕಜೆ
ಸಮಗ್ರ ತ್ಯಾಜ್ಯ ನಿರ್ವಹಣಾ ಯೋಜನೆಯಾದ ಕ್ಲಿನ್ ಎಣ್ಮಕಜೆಯ ಉದ್ಘಾಟನೆ ನಡೆಸಲಾಯಿತು.
ಹೆಚ್ಚುತ್ತಿರುವ ತ್ಯಾಜ್ಯ ಸಮಸ್ಯೆಗೆ ಸಂಪೂರ್ಣ ಪರಿಹಾರವಾದ ಕ್ಲೀನ್ ಎಣ್ಮಕಜೆ ಯೋಜನೆಯ ಲಾಂಛನ ಬಿಡುಗಡೆ ಸಂಸದ ರಾಜಮೋಹನ್ ಉಣ್ಣಿತ್ತಾನ್ ನಿರ್ವಹಿಸಿದರು.
ಯೋಜನೆಯ
ಅಂಗವಾಗಿ ಹರಿತ ಕರ್ಮ ಸೇನೆಯ ಎಲೆಕ್ಟ್ರಿಕ್ ವಾಹನಕ್ಕೆ ಹಸಿರು ನಿಶಾನಿ, ಹರಿತಗ್ರಾಮ
ಯೋಜನೆಯಲ್ಲಿ ಸೇರ್ಪಡಿಸಿ ಪಂಚಾಯತ್‌ನ ಸಂಪೂರ್ಣ ಮನೆಗಳಿಗೆ ಒದಗಿಸುವ ಬಟ್ಟೆಚೀಲ ,
ಸ್ಟೀಲ್ ಪಾತ್ರೆ, ಸಾವಯವ ತ್ಯಾಜ್ಯ ಸಂಸ್ಕರಣೆಗೆ ಮನೆಗಳಿಗೆ ಬಕಟ್ ಕಾಂಪೋಸ್ಟ್
ಮೊದಲಾದವುಗಳನ್ನು ಉದ್ಘಾಟನೆ ಮಾಡಿದರು. ಪೆರ್ಲ ಪೇಟೆಯಲ್ಲಿ ನಡೆದ ಉದ್ಘಾಟನಾ
ಸಮಾರಂಭದಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎಕೆ ಎಂ ಆಶ್ರಫ್ ಪಂಚಾಯತ್ ನ
ಕುಟುಂಬಶ್ರೀಯ ಜನಪರ ಹೋಟೆಲ್ ನ ಕೀಲಿ ಕೈ ಹಸ್ತಾಂತರ ಮತ್ತು ತಣ್ಣಗಿನ ನೀರು, ಕಡಿಮೆ
ವೆಚ್ಚದಲ್ಲಿ ಸಾರ್ವಜನಿಕರಿಗೆ ಶವಸಂಸ್ಕಾರಕ್ಕೆ ಅಗತ್ಯವಾದ ಬ್ಯಾರಿಯಲ್ ಬಾಕ್ಸ್‌ನ
ವೃದ್ಧರಿಗೆ ಮಂಚ ವಿತರಣೆಯನ್ನು ನಿರ್ವಹಿಸಲಾಯಿತು.ಪಂಚಾಯತ್ ಅಧ್ಯಕ್ಷ ಜೆ ಎಸ್ ಸೋಮಶೇಖರ
ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಉಪಾಧ್ಯಕ್ಷೆ ಫಾತಿಮತ್ ಜಹಾನಾಸ್ ಹಂಸರ್, ಜಿ.
ಪಂ. ಸದಸ್ಯ ನಾರಾಯಣ ನಾಯ್ಕ್, ಬ್ಲೋಕ್ ಪಂ.ಸದಸ್ಯರಾದ ಬಟ್ಟು ಶೆಟ್ಟಿ,ಅನಿಲ್ ಕುಮಾರ್
ಕೆ.ಪಿ. ಪಂ. ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಬಿ.ಎಸ್.ಗಾಂಭೀರ್, ಜಯಶ್ರೀ
ಕುಲಾಲ್,ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಪಂ.ಸದಸ್ಯರಾದ ಮಹೇಶ್ ಭಟ್, ಶಶಿಧರ ಎಂ,
ನರಸಿಂಹ ಪೂಜಾರಿ, ರೂಪವಾಣಿ ಆರ್.ಭಟ್, ರಮ್ಲ, ಕುಸುಮಾವತಿ, ಉಷಾ ಕುಮಾರಿ, ಆಶಾಲತಾ,ಪಂ.
ಯೋಜನಾ ಸಮಿತಿ ಉಪಾಧ್ಯಕ್ಷೆ ಆಯಿಷಾ ಎ.ಎ,ಮೊದಲಾದವರು ಉಪಸ್ಥಿತರಿದ್ದರು.







