ಮುಳ್ಳೇರಿಯ: ಬಡತನ ನಿರ್ಮೂಲನಾ ಯೋಜನೆಯ ಭಾಗವಾಗಿ ಕಾರಡ್ಕ ಬ್ಲಾಕ್ ಪಂಚಾಯತಿ ವತಿಯಿಂದ 33 ಮಂಚಗಳನ್ನು ವಿತರಿಸಲಾಯಿತು. ಕಾರಡ್ಕ ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಮಂಚ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬ್ಲಾಕ್ ಪಂಚಾಯತಿ ಉಪಾಧ್ಯಕ್ಷೆ ಕೆ.ರಮಣಿ ಅಧ್ಯಕ್ಷತೆ ವಹಿಸಿದ್ದರು.
ಕುತ್ತಿಕೋಲ್ ಗ್ರಾಮ ಪಂಚಾಯತಿ ಅಧ್ಯಕ್ಷ ಮುರಳಿ ಪಯ್ಯಂಗಾನಂ, ಕುಂಬ್ದಾಜೆ ಪಂಚಾಯತಿ ಅಧ್ಯಕ್ಷ ಹಮೀದ್ ಪೊಸೋಳಿಗೆ ಮಾತನಾಡಿದರು. ಬ್ಲಾಕ್ ಪಂಚಾಯತಿ ಸದಸ್ಯರು, ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು, ವಿಸ್ತರಣಾ ಅಧಿಕಾರಿಗಳು, ಬ್ಲಾಕ್ ಪಂಚಾಯತಿ ನೌಕರರು ಭಾಗವಹಿಸಿದ್ದರು. ಅಭಿವೃದ್ಧಿ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಕೆ.ನಾರಾಯಣನ್ ಸ್ವಾಗತಿಸಿ, ವಂದಿಸಿದರು.
ಕಾರಡ್ಕ ಬ್ಲಾಕ್ ಪಂಚಾಯತಿಯಿಂದ ಮಂಚ ವಿತರಣೆ
0
ಮಾರ್ಚ್ 26, 2023




.jpg)
