ಉಪ್ಪಳ: ತ್ಯಾಜ್ಯ ನಿರ್ವಹಣಾ ರಂಗದಲ್ಲಿ ನಡೆಸುತ್ತಿರುವ ಅಕ್ರಮಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ರೂಪಿಕರಿಸಲಾದ ಪ್ರತ್ಯೇಕ ತನಿಖಾ ದಳ ಮಂಗಲ್ಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ 14 ಅಂಗಡಿಗಳಲ್ಲಿ ತಪಾಸಣೆ ನಡೆಸಿ ವಿವಿಧ ಅಂಗಡಿಗಳಿಂದ ಸುಮಾರು 160 ಕೆಜಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡಿತು.
ಪಾರ್ಕಿಂಗ್ ಪ್ಯಾಲೇಸ್ ಉಪ್ಪಳ ಸಂಸ್ಥೆಯಿಂದ 100 ಕೆಜಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳಾದ ಪ್ಲಾಸ್ಟಿಕ್ ಗ್ಲಾಸ್, ಪಾಲಿಥಿನ್ ಬ್ಯಾಗ್, ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಕಂಟೈನರ್ ಎಂಬಿವುಗಳನ್ನು ವಶಪಡಿಸಿಕೊಳ್ಳಲಾಗಿದೆ ಪ್ಲಾಸ್ಟಿಕ್ ಕವರ್‍ಗಳಲ್ಲಿ ವಸ್ತುಗಳನ್ನು ಮಾರಾಟ ಮಾಡುವ ರಸ್ತೆಬದಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿಯೂ ತನಿಖೆ ಮುಂದುವರಿಯಲಿದೆ ಎಂದು ತನಿಖಾದಳ ತಿಳಿಸಿದೆ.
ಜಿಲ್ಲಾ ಶುಚಿತ್ವ ಮಿಶನ್ ಎನ್ಫೋಸ್ರ್ಮೆಂಟ್ ಅಧಿಕಾರಿ ಯವರ ನೇತೃತ್ವದಲ್ಲಿ ನಡೆದ ತಪಾಸಣೆಯಲ್ಲಿ ಪೊಲೀಸ್ ಅಧಿಕಾರಿಗಳು, ಮಂಗಲ್ಪಾಡಿ ಗ್ರಾಮ ಪಂಚಾಯತಿ ಆರೋಗ್ಯ ಇಲಾಖೆ ಅಧಿಕಾರಿಗಳು, ಜಾಗೃತ ಇಲಾಖೆ ಅಧಿಕಾರಿಗಳು, ಜಿಲ್ಲಾ ಜಂಟಿ ನಿರ್ದೇಶಕರ ಕಛೇರಿಯ ಉದ್ಯೋಗಸ್ಥರು ಭಾಗವಹಿಸಿದ್ದರು.




.jpg)
.jpg)
