ಉಪ್ಪಳ: ಉಪ್ಪಳದ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ಎ.7ರಂದು ಸಂಜೆ 4 ರಿಂದ ಎ.13ರ ಸಂಜೆ 4ರ ತನಕ ಸಂಸ್ಕøತ ಭಾರತೀ ಪ್ರಭೋದನಾ ವರ್ಗದ ಆಶ್ರಯದಲ್ಲಿ ಸಂಸ್ಕøತ ಸಂಭಾಷಣಾ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಅಖಂಡ ಸಂಸ್ಕøತ ವಾತಾವರಣ ನಿರ್ಮಾಣವಾಗಲಿದ್ದು, ಸಂಸ್ಕøತ ಸಂಭಾಷಣೆ, ಭಾಷಾ ಕ್ರೀಡೆ ಹಾಗೂ ವ್ಯಾಕರಣ ಪಾಠ, ಸಂಸ್ಕøತದಲ್ಲಿ ಭಾಷಣ ಮಾಡಲು ಕಲಿಯುವುದು, ಸಂಸ್ಕøತ ಮಾಧ್ಯಮದಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ 9487967198ನ್ನು ಸಂಪರ್ಕಿಸಬಹುದು. ಶಿಬಿರಾರ್ಥಿಗಳ ವಯೋಮಿತಿ 14ರಿಂದ 60 ಆಗಿದ್ದು, ಸಂಸ್ಕøತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಕಟಣೆ ತಿಳಿಸಿದೆ.
ಸಂಸ್ಕøತ ಸಂಭಾಷಣಾ ಶಿಬಿರ ಏ.7ರಿಂದ
0
ಮಾರ್ಚ್ 26, 2023
Tags





