HEALTH TIPS

ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ: ಜೀರ್ಣೋದ್ಧಾರ ಸಮಿತಿ ರೂಪೀಕರಣ


                 ಕುಂಬಳೆ: ಇತಿಹಾಸ ಪ್ರಸಿದ್ಧ ಪುತ್ತಿಗೆ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನು ಆರಂಭಿಸಲು ಕ್ಷೇತ್ರ ಆಡಳಿತ ಮೊಕ್ತೇಸರರು, ಹಿರಿಯ ನ್ಯಾಯವಾದಿ ಬಿ. ಸುಬ್ಬಯ್ಯ ರೈ ಇಚ್ಲಂಪಾಡಿಯವರ ಅಧ್ಯಕ್ಷತೆಯಲ್ಲಿ ಜರಗಿದ ಗ್ರಾಮಸ್ಥರ ಮತ್ತು ಪರವೂರ ಭಗವದ್ಬಕ್ತರ ಸಭೆಯಲ್ಲಿ ನಿರ್ಣಯಿಸಲಾಯಿತು.  ಇದಕ್ಕೆ ಪೂರಕವಾಗಿ ನೂತನ ಜೀರ್ಣೋದ್ದಾರ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಧಾರ್ಮಿಕ ಮುಂದಾಳು ಗಿರಿಧರ ಶೆಟ್ಟಿ ಮಂಗಳೂರು ಇವರನ್ನು ಆಯ್ಕೆ ಮಾಡಲಾಯಿತು.
        ಪರಮಪೂಜ್ಯ ಶ್ರಿ ಗುರುದೇವಾನಂದ ಸ್ವಾಮೀಜಿ ಒಡಿಯೂರು, ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆವೂರು, ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು ಹಾಗೂ ಶ್ರೀ ಕೃಷ್ಣ ಗುರೂಜಿ ಕುಕ್ಕಾಜೆ ಇವರ ದಿವ್ಯ ಮಾರ್ಗದರ್ಶನದಲ್ಲಿ ಹೊಸ ಸಮಿತಿಯನ್ನು ರಚಿಸಲಾಯಿತು.
            ಗೌರವ ಮಾರ್ಗದರ್ಶಕರಾಗಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ, ಕೆ.ಕೆ. ಶೆಟ್ಟಿ ಅಹಮ್ಮದ್ ನಗರ, ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಕುಞ್ಞಣ್ಣ ಭಂಡಾರಿ ಬಾಡೂರು,  ಬಿ. ಸುಬ್ಬಯ್ಯ ರೈ ಇಚ್ಲಂಪಾಡಿ,  ಹಾಗೂ ಕ್ಷೇತ್ರದ ಗುರಿಕ್ಕಾರ ಶ್ಯಾಮರಾಯ ಹೊಳ್ಳ ಇವರನ್ನು ಆಯ್ಕೆ ಮಾಡಲಾಯಿತು.



             ಗೌರವಾಧ್ಯಕ್ಷರಾಗಿ  ಬಿ.ವಸಂತ ಪೈ ಬದಿಯಡ್ಕ, ಗಿರಿಧರ್ ಶೆಟ್ಟಿ ಮಂಗಳೂರು, ಕಾರ್ಯಾಧ್ಯಕ್ಷರಾಗಿ ಡಿ. ದಾಮೋಧರನ್ ದೇಲಂಪಾಡಿ,  ಪ್ರಧಾನ ಕಾರ್ಯದರ್ಶಿಗಳಾಗಿ ರಾಜೇಂದ್ರ ರೈ ದೇಲಂಪಾಡಿ ಹಾಗೂ ಕೋಶಾಧಿಕಾರಿಗಳಾಗಿ ಶಿವಪ್ಪ ರೈ ಕೊರತ್ತಿಪ್ಪಾರೆಯವರನ್ನು ಆಯ್ಕೆಮಾಡಲಾಯಿತು.
               ಉಪಾಧ್ಯಕ್ಷರುಗಳಾಗಿ, ಕೋಳಾರು ಸತೀಶ್ಚಂದ್ರ ಭಂಡಾರಿ, ಅಧಿಕಾರಿ ಮಹಾಲಿಂಗೇಶ್ವರಯ್ಯ ಪುತ್ತಿಗೆ, ಜಯಶಂಕರ ರೈ ಪುತ್ತಿಗೆ, ಎಂ ಶಂಕರ ರೈ ಮಾಸ್ತರ್, ಡಿ. ಸುಬ್ಬಣ್ಣ ಆಳ್ವ, ಎ.ಡಿ. ಕೊರಗಪ್ಪ, ಅಶೋಕ ಮಾಸ್ತರ್ ಬಾಡೂರು, ಎಂ.ಕೆ. ಆನಂದ, ಡಿ. ಎನ್. ರಾಧಾಕೃಷ್ಣ, ಸುರೇಂದ್ರ ರೈ, ಪ್ರೇಮಾ ಎಸ್. ರೈ ಇವರನ್ನು ಆರಿಸಲಾಯಿತು.
               ಕಾರ್ಯದರ್ಶಿಗಳಾಗಿ, ವಿಠಲ ರೈ ಮಂಟಪಾಡಿ, ಡಾ. ರತ್ನಾಕರ ಶೆಟ್ಟಿ ಕೋರ್ತಿಮಾರು, ವಸಂತ ಡಿ., ಅಡ್ವ. ಭರತ್ ವೆಂಕಟೇಶ್ ಕಾರಂತ್, ಅಮ್ಮು ಮಾಸ್ತರ್ ಕೋರಿಕ್ಕಾರ್, ಕೇಶವ ಡಿ, ಸದಾನಂದ ರೈ  ಆಮಿನೆ, ಸಾವಿತ್ರಿ ಟೀಚರ್,  ರಾಜಶ್ರೀ ರೈ ನೈಮೊಗರು, ಜಯ ಮಣಿಯಂಪಾರೆ ಇವರು ಆಯ್ಕೆಗೊಂಡರು.
              ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ  ಗೋಪಾಲಕೃಷ್ಣ ಅಡಿಗಳು, ರಾಮ ಅಡಿಗಳು, ಅಮರನಾಥ ರೈ ಚೀಂಕಣಮೊಗರು,  ತಿಮ್ಮಣ್ಣ ರೈ ನೈಮೊಗರು, ಕೋಟ್ಯಣ್ಣ ರೈ ನೈಮೊಗರು, ಮೊಹನ ಪೂಜಾರಿ ಪರ್ಲರಿಯ, ದೇರಣ್ಣ ಶೆಟ್ಟಿ ದೇಲಂಪಾಡಿ, ಬಾಲಕೃಷ್ಣ ರೈ ನೈಮೊಗರು ಮೊದಲಾದವರನ್ನೊಳಗೊಂಡ ಸಲಹಾಮಂಡಳಿ ಹಾಗೂ 51 ಮಂದಿ ಸದಸ್ಯರಿರುವ ಕಾರ್ಯಕಾರೀ ಸಮಿತಿಗಳನ್ನೊಳಗೊಂಡಂತೆ 101 ಮಂದಿ ಸದಸ್ಯರಿರುವ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಯಿತು.
               ಕ್ಷೇತ್ರ ಸೇವಾ ಸಮಿತಿಯ ಅಧಕ್ಷ ಡಿ. ದಾಮೋದರನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಿ. ರಾಜೇಂದ್ರ ರೈ ಜೀರ್ಣೋದ್ದಾರದ ರೂಪುರೇಷೆಗಳನ್ನು ಮಂಡಿಸಿದರು. ಸಭೆಯಲ್ಲಿ ಗಿರಿಧರ್ ಶೆಟ್ಟಿ, ಕೋಳಾರು  ಸತೀಶ್ಚಂದ್ರ ಭಂಡಾರಿ,ಎಂ ಶಂಕರ ರೈ, ಡಿ. ಸುಬ್ಬಣ್ಣ ಆಳ್ವ, ಅಶೋಕ ಮಾಸ್ತರ್ ಮೊದಲಾದವರು ಮಾತನಾಡಿದರು. ಸೇವಾಸಮಿತಿ ಕಾರ್ಯಾಧ್ಯಕ್ಷ  ಡಿ.ಎನ್. ರಾಧಾಕೃಷ್ಣ ಸ್ವಾಗತಿಸಿ, ಕಾರ್ಯದರ್ಶಿ  ಕೇಶವ ಡಿ ವಂದಿಸಿದರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries