ಕಾಸರಗೋಡು: ವಿವೇಕಾನಂದ ನಗರದಲ್ಲಿ ನೂತನವಾಗಿ ನಿರ್ಮಿಸಿದ ಕಿಯಕೆಡತ್ತ್ ಇಲ್ಲಂ ತರವಾಡಿನ ಪ್ರತಿಷ್ಠಾ ಮಹೋತ್ಸವ, ದೈವಗಳ ಕೋಲ ಹಾಗೂ ತರವಾಡು ಗೃಹ ಪ್ರವೇಶ ಮೇ. 4 ರಿಂದ 7 ರ ವರೆಗೆ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ಉಳಿಯ ಇಲ್ಲಂನಲ್ಲಿ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಬಿಡುಗಡೆಗೊಳಿಸಿದರು.
ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಅವರು ತಂತ್ರಿವರ್ಯರಿಂದ ಆಮಂತ್ರಣಪತ್ರಿಕೆಯನ್ನು ಸ್ವೀಕರಿಸಿದರು. ತರವಾಡು ಸಮಿತಿಯ ಅಧ್ಯಕ್ಷ ಬಿ. ನಾಗೇಶ್ ಚೆಟ್ಟಿಯರ್, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಎಂ. ಕೆ, ಉಪಾಧ್ಯಕ್ಷ ಕೃಷ್ಣಾ ಕಾಳ್ಯಂಗಾಡ್, ಲೋಕೇಶ್ ಉಪಸ್ಥಿತರಿದ್ದರು. ತರವಾಡು ಸಮಿತಿ ಸಂಚಾಲಕ ಸಜಿತ್ ತೆರುವತ್ ಸ್ವಾಗತಿಸಿದರು. ಕೋಶಾಧಿಕಾರಿಯಾದ ರಾಜೇಂದ್ರ ಕಾಳ್ಯಂಗಾಡ್ ವಂದಿಸಿದರು.
ಪ್ರತಿಷ್ಠಾ ಮಹೋತ್ಸವ: ಆಮಂತ್ರಣಪತ್ರಿಕೆ ಬಿಡುಗಡೆ
0
ಮಾರ್ಚ್ 26, 2023
Tags




