ಕಾಸರಗೋಡು: ಕೇರಳ ಸ್ಟೇಟ್ ಬಾರ್ಬರ್ಸ್ ಅಸೋಸಿಯೇಶನ್ ಲೇಡಿ ಬ್ಯೂಟಿಷಿಯನ್ ಸಂಘಟನೆ ಪ್ರಥಮ ಜಿಲ್ಲಾ ಸಮ್ಮೇಳನ ಮಾರ್ಚ್ 28 ರಂದು ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದ ಪೂರ್ವಭಾವಿಯಾಗಿ ಕಾಸರಗೋಡು ನಗರದಿಂದ ಸಮ್ಮೇಳನ ನಗರಿ ವರೆಗೆ ಭವ್ಯ ಮೆರವಣಿಗೆ ನಡೆಯಲಿರುವುದಾಗಿ ಸಂಘಟನೆ ಜಿಲ್ಲಾಧ್ಯಕ್ಷೆ ಶ್ಯಾಮ ಪಿ.ನಾಯರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 10ಕ್ಕೆ ನಡೆಯುವ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸಮ್ಮೇಳನ ಉದ್ಘಾಟಿಸುವರು. ಮಹಿಳಾ ಸದಸ್ಯರನ್ನು ಪ್ರತಿನಿಧಿಕರಿಸಿ 200 ಮಂದಿ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾಧ್ಯಕ್ಷ ಶ್ಯಾಮ ಪಿ.ನಾಯರ್ ಅಧ್ಯಕ್ಷತೆ ವಹಿಸುವರು.ಕೆಎಸ್ ಬಿಎ ಜಿಲ್ಲಾಧ್ಯಕ್ಷ ಎಂ.ಪಿ.ನಾರಾಯಣನ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಮಾಜಿ ರಾಜ್ಯಾಧ್ಯಕ್ಷ ಕೆ.ಇ.ಬಶೀರ್ ಆಶಯ ಭಾಷಣ ಮಾಡುವರು. ಬ್ಯೂಟಿಶಿಯನ್ ವಲಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಸಮ್ಮೇಳನದ ಮೂಲಕ ಒತ್ತಾಯಿಸಲಾಗುವುದು. ಸಂಜೆ ವಿವಿಧ ಕಲಾ, ಸಾಂಸ್ಕøತಿಕ ಕಾರ್ಯಕ್ರಮ ಜರುಲಿರುವುದಾಗಿ ತಿಳಿಸಿದರು.
ಸಂಜೆ ಕಲಾವಿದ ಹಾಡುಗಳು.ಪತ್ರಿಕಾಗೋಷ್ಠಿಯಲ್ಲಿ ಆರ್ ರಮೇಶನ್, ಆರ್ ನಾರಾಯಣನ್, ಸುನೀತಾ ಕುಲಾಲ್, ಶೈಲಜಾ ಪ್ರಸಾದ್, ಬಿ ಸತ್ಯನಾರಾಯಣ ಮತ್ತು ಕೆ ಗೋಪಿ ಉಪಸ್ಥಿತರಿದ್ದರು.
ನಾಳೆ ಕೇರಳ ಸ್ಟೇಟ್ ಬಾರ್ಬರ್ಸ್ ಅಸೋಸಿಯೇಶನ್ ಲೇಡಿ ಬ್ಯೂಟಿಷಿಯನ್ ಜಿಲ್ಲಾ ಸಮ್ಮೇಳನ
0
ಮಾರ್ಚ್ 26, 2023
Tags




