ಸಿರಿಬಾಗಿಲು ಸಾಂಸ್ಕøತಿಕ ಭವನಕ್ಕೆ ಕೊಂಡೆವೂರು ಶ್ರೀ, ಉದ್ಯಮಿ ಕೆ. ಸದಾಶಿವ ಶೆಟ್ಟಿ ಭೇಟಿ
0
ಮಾರ್ಚ್ 26, 2023
ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ಸಾಂಸ್ಕೃತಿಕ ಭವನಕ್ಕೆ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಭೇಟಿ ನೀಡಿದರು. ಈ ಸಂದರ್ಭ ಕೊಡುಗೈದಾನಿ ಕುಳೂರು ಕನ್ಯಾನ ಸದಾಶಿವ ಶಟ್ಟಿ ಮುಂಬೈ ಉಪಸ್ಥಿತರಿದ್ದರು.
ಸಿರಿಬಾಗಿಲು ಸಾಂಸ್ಕøತಿಕ ಪ್ರತಿಷ್ಠಾನದ ಸಾಧನೆಯ ಬಗ್ಗೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಅವರು, ತಮ್ಮ ಆದಾಯದ ಇತಿಮಿತಿ ನಡುವೆ, ಕಲೆಯ ಮೇಲಿನ ಪ್ರೀತಿಯಿಂದ ಇಂತಹ ಸಾಧನೆಗೆ ಮುಂದಾದು ಅಪೂರ್ವ ಎಂದು ಸಂತಸ ವ್ಯಕ್ತಪಡಿಸಿದರು. ಯಕ್ಷಗಾನ ಮ್ಯೂಸಿಯಂ ಮತ್ತು ಗ್ರಂಥಾಲಯ ನಿರ್ಮಾಣ ಕಾರ್ಯವನ್ನು ಶ್ರೀಗಳು ವೀಕ್ಷಿಸಿ ಶ್ಲಾಘನೆ ವ್ಯಕ್ತಪಡಿಸಿದರು. ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರು ಶ್ರೀಗಳನ್ನು ಗೌರವಿಸಿ ವಂದಿಸಿದರು. ಸಂಸ್ಥೆ ಕೋಶಾಧಿಕಾರಿ ಲಕ್ಮೀನಾರಾಯಣ ಪಟ್ಟೇರಿ,ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ, ಜಗದೀಶ್ ಕೂಡ್ಲು, ಸುಮಿತ್ರಾ ಆರ್ ಮಯ್ಯ, ಅಮಿತಾ ಶೆಟ್ಟಿ, ಜಯರಾಮ ರೈ, ರವೀಂದ್ರ ರೈ, ಶೀನ ಶೆಟ್ಟಿ ಕಜೆ, ಯೋಗಾಚಾರ್ಯ ಪುಂಡರೀಕಾಕ್ಷ ಆಚಾರ್ಯ, ವಿಷ್ಣು ಶ್ಯಾನುಭೋಗ್, ಊರಿನ ಗಣ್ಯರು, ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು. ರಾಜಾರಾಮ ರಾವ್ ಮೀಯಪದವು ಸ್ವಾಗತಿಸಿದರು.
Tags





