ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಆಶ್ರಯದಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮ ಮಾ. 27ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಲಿದೆ. ಎಂ.ಕೆ ಜಿನಚಂದ್ರ ದತ್ತಿ ಉಪನ್ಯಾಸ, ಕಮಲಮ್ಮ ದತ್ತಿ ಉಪನ್ಯಾಸ, ಗುಮ್ಮಣ್ಣ ಶೆಟ್ಟಿ ದತ್ತಿ ಉಪನ್ಯಾಸ ನಡೆಯುವುದು.
ಕಸಾಪ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ ಭಟ್ ಅಧ್ಯಕ್ಷತೆ ವಹಿಸುವರು. ಪ್ರಾಚೀನ ಕನ್ನಡ ಸಾಃಇತ್ಯಕ್ಕೆ ಜೈನರ ಕೊಡುಗೆ ವಿಷಯದಲ್ಲಿ ನಿವೃತ್ತ ಶಿಕ್ಷಕ ವಿಶಾಲಾಕ್ಷ ಪುತ್ರಕಳ, ಕನ್ನಡ ಸಾಹಿತ್ಯ ಲೋಕಕ್ಕೆ ಮಕ್ಕಳ ಕೊಡುಗೆ ವಿಷಯದಲ್ಲಿ ಕವಿ, ಚಿತ್ರಕಲಾವಿದ ಬಾಲ ಮಧುರಕಾನನ, ತುಳು-ಕನ್ನಡ ಭಾಷೆ ಸಾಹಿತ್ಯ ಸಂಸ್ಕøತಿ ಬಾಂಧವ್ಯ ವಿಷಯದಲ್ಲಿ ಪ್ರೊ. ಪಿ. ಎನ್. ಮೂಡಿತ್ತಾಯ ಉಪನ್ಯಾಸನೀಡುವರು. ಶಾಲಾ ಮುಖ್ಯ ಶಿಕ್ಷಕಿಜಯಶ್ರೀ ಎನ್, ಪಿಟಿಎ ಅಧ್ಯಕ್ಷ ಅನಿಲ್ ಕುಮಾರ್ ಉಪಸ್ಥಿತರರುವರು.
ಇಂದು ಕಸಾಪ ವತಿಯಿಂದ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ
0
ಮಾರ್ಚ್ 26, 2023
Tags




