HEALTH TIPS

ಬೇಸಿಗೆ ರಜೆಗೂ ಮೊದಲೇ ಜಿಲ್ಲಾ ಕೇಂದ್ರ ತಲುಪಿದ ಹೊಸ ಪಠ್ಯ ಪುಸ್ತಕ-ಏಪ್ರಿಲ್ ತಿಂಗಳಲ್ಲೇ ವಿತರಣೆ


                    ಕಾಸರಗೋಡು: ಮುಂಬರುವ ಶಾಲಾ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳು ಬೇಸಿಗೆ ರಜೆಗಾಗಿ ಶಾಲೆಗಳು ಮುಚ್ಚಿಕೊಳ್ಳುವ ಮೊದಲೇ ಜಿಲ್ಲಾಕೇಂದ್ರಕ್ಕೆ ಬಂದು ತಲುಪಿದೆ. 3,90,281 ಪುಸ್ತಕಗಳು ಜಿಲ್ಲಾ ಕೇಂದ್ರವಾಗಿರುವ ಕಾಸರಗೋಡು ಸರ್ಕಾರಿ ಪ್ರೌಢಶಾಲೆ ತಲುಪಿದವು. 9 ಮತ್ತು 10 ನೇ ತರಗತಿಗಳಿಗೆ ಮಲಯಾಳಂ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸಂಪೂರ್ಣ ಪುಸ್ತಕಗಳು ಮತ್ತು 1 ರಿಂದ 5 ನೇ ತರಗತಿಗಳಿಗೆ ಈಗಾಗಲೇ ಕೆಲವೊಂದು ಪಠ್ಯ ಪುಸ್ತಕಗಳು ತಲುಪಿದೆ.
              ಕಾಸರಗೋಡು ಸರ್ಕಾರಿ ಹೈಸ್ಕೂಲ್ ಡಿಸ್ಟ್ರಿಕ್ಟ್ ಹಬ್‍ನಲ್ಲಿ ಇನ್ನು ಮುಂದೆ ಪುಸ್ತಕಗಳನ್ನು ಇಳಿಸಲು ಅಗತ್ಯ ಸ್ಥಳಾವಕಾಶವಿಲ್ಲದಿರುವುದರಿಂದ ಹೆಚ್ಚುವರಿ ಕೊಠಡಿಗಳ ಅಗತ್ಯವಿದೆ.  ಪ್ರಸಕ್ತ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿರುವುದರಿಂದ ಕೊಠಡಿಗಳ ಸಮಸ್ಯೆ ಎದುರಾಘಿದೆ.  ಪರೀಕ್ಷೆಗಳು ಮುಗಿದ ನಂತರ ಉಳಿದ ಪುಸ್ತಕಗಳನ್ನು ರವಾನಿಸಲಾಗುವುದು ಎಂದೂ ಪಠ್ಯಪುಸ್ತಕ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯಲ್ಲಿ 592 ಶಾಲೆಗಳಿಗಾಗಿ 137 ಸೊಸೈಟಿಗಳು ಕಾರ್ಯಾಚರಿಸುತ್ತಿದೆ. ಈಗಾಗಲೇ ಕಾಸರಗೋಡು ಕೇಂದ್ರಕ್ಕೆ ಪೂರೈಕೆಯಾಗಿರುವ ಪುಸ್ತಕಗಳಲ್ಲಿ ಚಿತ್ತಾರಿಕಲ್ ಉಪಜಿಲ್ಲಾ ಶಾಲೆಗಳಿಗೆ ರವಾನಿಸಲಿರುವ ಪುಸ್ತಕಗಳ  ವಿಂಗಡಣಾ ಕಾರ್ಯ ಆರಂಭಗೊಂಡಿದೆ. ಕಾಸರಗೋಡು ಕಂದಾಯ ಶೈಕ್ಷಣಿಕ ಜಿಲ್ಲಾಧಿಕಾರಿ(ಡಿ.ಇ.ಓ)ಅಧೀನದಲ್ಲಿ ಮೂರು ಉಪಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿಗಳಾದ ಕಾಸರಗೋಡು, ಮಂಜೇಶ್ವರಂ ಮತ್ತು ಕುಂಬಳೆ ಕಾರ್ಯಾಚರಿಸುತ್ತಿದ್ದರೆ,   ಕಾಞಂಗಾಡ್ ಕಂದಾಯ ಶೈಕ್ಷಣಿಕ ಜಿಲ್ಲಾ(ಡಿಲ.ಇ.ಓ)ಅಧೀನದಲ್ಲಿ ನಾಲ್ಕು ಎಇಒ ಕಚೇರಿಗಳಾದ ಚಿತ್ತಾರಿಕಲ್, ಚೆರುವತ್ತೂರು, ಹೊಸದುರ್ಗ ಮತ್ತು ಬೇಕಲ ಕಾರ್ಯಾಚರಿಸುತ್ತಿದೆ.  27ರಂದು ಪಠ್ಯಪುಸ್ತಕ ವಿತರಣೆಯ ಉದ್ಘಾಟನೆ ಕಾಸರಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ. ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಪುಸ್ತಕಗಳನ್ನು ವಿತರಿಸಲಾಗುತ್ತದೆ. ಒಂದು ಸೊಸೈಟಿಯು ತನ್ನ ವ್ಯಾಪ್ತಿಯಲ್ಲಿ 5 ಶಾಲೆಗಳನ್ನು ಹೊಂದಿದ್ದು,  9 ಮತ್ತು 10ನೇ ತರಗತಿಯ ಪುಸ್ತಕಗಳನ್ನು ಮುಂದಿನ ತಿಂಗಳು ವಿತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries