HEALTH TIPS

ಕೋವಿಡ್ ಹೆಚ್ಚಳ: ಆಯಂಟಿಬಯೋಟಿಕ್ ಬಳಕೆ ವಿರುದ್ಧ ಐಸಿಎಂಆರ್ ಎಚ್ಚರಿಕೆ

                ವದೆಹಲಿ: ದೇಶದಲ್ಲಿ ಕಳೆದ ಕೆಲ ವಾರಗಳಿಂದ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಭಾರತದ ವೈಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪರಿಷ್ಕರಿಸಿದ್ದು, ಆಯಟಿಬಯೋಟಿಕ್ ಔಷಧಿಗಳ ಬಳಕೆ ವಿರುದ್ಧ ಹೊಸ ಮಾರ್ಗಸೂಚಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

                      "ಮಾರ್ಗಸೂಚಿಯು ಲೊಪಿನವೀರ್-ರಿಟೊನವೀರ್, ಎಚ್‌ಸಿಕ್ಯೂ, ಇವೆರ್‌ಮೆಟಿಸಿನ್, ಕೊನ್ವಲೆಸೆಂಟ್ ಪ್ಲಾಸ್ಮಾ, ಮೊಲ್ನುಪಿರವಿರ್, ಫವಿಪಿರವಿರ್, ಅಝಿತ್ರೊಮೈಸಿನ್, ಡಾಕ್ಸಿಸಿಲಿನ್ ಔಷಧಿ ಬಳಕೆ ಮಾಡದಿರಲು ಮಾರ್ಗಸೂಚಿ ಸಲಹೆ ಮಾಡುತ್ತದೆ" ಎಂದು ಐಸಿಎಂಆರ್ ಟ್ವೀಟ್ ಮಾಡಿದೆ.

                       ಶಂಕಿತ ಬ್ಯಾಕ್ಟೀರಿಯಾ ಸೋಂಕಿನ ಬಗ್ಗೆ ಕ್ಲಿನಿಕಲ್ ಪರೀಕ್ಷೆಯಲ್ಲಿ ತಿಳಿದು ಬಾರದ ಸಂದರ್ಭದಲ್ಲಿ ಆಯಂಟಿಬಯೋಟಿಕ್ಸ್ ಬಳಕೆ ಬೇಡ. ಕೋವಿಡ್-19 ಸೋಂಕಿನ ಜತೆಗೆ ಇತರ ಸಹ ಸೋಂಕುಗಳ ಸಾಧ್ಯತೆ ಬಗ್ಗೆ ಕೂಡಾ ಗಂಭೀರವಾಗಿ ಪರಿಗಣಿಸಬೇಕು. ಸೌಮ್ಯ ಪ್ರಮಾಣದ ರೋಗಗಳಲ್ಲಿ ವ್ಯವಸ್ಥಿತ ಕಾರ್ಟಿಕೊಸ್ಟಿರಾಯ್ಡ್ ಕಂಡುಬರುವುದಿಲ್ಲ" ಎಂದು ಸ್ಪಷ್ಟಪಡಿಸಿದೆ.

                   ಉಸಿರಾಟಕ್ಕೆ ಕಷ್ಟವಾದಲ್ಲಿ, ಅಧಿಕ ಜ್ವರ ಅಥವಾ ತೀವ್ರ ಕಫ, ವಿಶೇಷವಾಗಿ ಐದು ದಿನಗಳಿಂತ ಹೆಚ್ಚು ಕಾಲ ಮಂಡುಬಂದಲ್ಲಿ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ಅತ್ಯಧಿಕ ಅಪಾಯ ಸಾಧ್ಯತೆಯ ಲಕ್ಷಣಗಳಿರುವ ವ್ಯಕ್ತಿಗಳಿಗೆ ಕಡಿಮೆ ಮಿತಿಯನ್ನು ನಿಗದಿಪಡಿಸಬೇಕು" ಎಂದು ಸೂಚಿಸಿದೆ. ತೀವ್ರಗತಿಯಲ್ಲಿ ಏರಿಕೆಯಾಗುವ ಸೌಮ್ಯ ಅಥವಾ ತೀವ್ರತರ ರೋಗಗಳಲ್ಲಿ ರೆಮ್‌ಡೆಸಿವಿರ್ ಅನ್ನು ಐದು ದಿನಗಳ ಕಾಲ ತೆಗೆದುಕಳ್ಳಬೇಕು (ಒಂದನೇ ದಿನ 200 ಎಂಜಿ 4 ಮತ್ತು ಉಳಿದ ನಾಲ್ಕು ದಿನಗಳಲ್ಲಿ 100 ಎಂಜಿ 4 ಓಡಿ) ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries