ಮಧೂರು: ಕಾಡನ್ ವೀಡು ತರವಾಡು ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾ. 7 ಮಂಗಳವಾರ ಆರಂಭಗೊಂಡಿದ್ದು, ಮಾ. 10 ರವರೆ ಮತ್ತು ಶ್ರೀ ದೈವಗಳ ನೃತ್ಯೋತ್ಸವ ಮಾ.13 ಎಂದು ಸೋಮವಾರ ಮತ್ತು 14 ಮಂಗಳವಾರ ನಡೆಯಲಿರುವುದು.
ಕಾರ್ಯಕ್ರಮದ ಅಂಗವಾಗಿ ಇಂದು(ಬುಧವಾರ) ಬೆಳಿಗ್ಗೆ 10 ಕ್ಕೆ ಹಸಿರುವಾಣಿ ಹೊರೆಕಾಣಿಕೆಯ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಿಂದ ಘೋಷಯಾತ್ರೆಯೊಂದಿಗೆ ಆಗಮಿಸಲಿದೆ. ನಂತರ ಉಗ್ರಾಣ ತುಂಬಿಸುವುದು, ಸಂಜೆ 5ಗಂಟೆಗೆ ತಂತ್ರಿವರ್ಯಬ್ರಹ್ಮಶ್ರೀ ವೇದಮೂರ್ತಿ ಉಳಿಯತ್ತಾಯ ವಿಷ್ಣು ಅಸ್ರರಿಗೆ ಪೂರ್ಣಕುಂಭ ಸ್ವಾಗತ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತುಹೋಮ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ ಮುಂತಾದ ಕಾರ್ಯಕ್ರಮಗಳು ಜರಗಲಿರುವುದು.
ನಾಳೆ(ಗುರುವಾರ) ಬೆಳಿಗ್ಗೆ 9 ಕ್ಕೆ ಗಣಪತಿ ಹೋಮ, ಅನುಜ್ಞಾಕಲಶ, ಶಯ್ಯಾ ಪೂಜೆ, ಕಲಶ ಪೂಜೆ, ಸಂಜೆ ಆದಿವಾಸ ಹೋಮ ನಡೆಯಲಿದೆ. ಶುಕ್ರವಾರ ಪ್ರಾತಃಕಾಲ ಗಣಪತಿ ಹೋಮ, ಪಾನಕಪೂಜೆ, ಪ್ರಾತಃಕಾಲ 7.21ರಿಂದ 8.40ರ ಮಧ್ಯೆ ಒದಗುವ ಚಿತ್ರ ನಕ್ಷತ್ರ ಮೀನ ಲಗ್ನ ಶುಭ ಮುಹೂರ್ತದಲ್ಲಿ ದೈವಗಳ ನೂತನ ಪೀಠ ಪ್ರತಿಷ್ಠೆ, ಬ್ರಹ್ಮ ಕಲಶಾಭಿμÉೀಕ, ತಂಬಿಲ, ನಿತ್ಯ ನೈಮಿತ್ತಿಕ ನಿಶ್ಚಯ ಪ್ರಸಾದ ವಿತರಣೆ ಅನ್ನದಾನ ನಡೆಯಲಿದೆ. ಮಾ.13 ರಂದು ಸೋಮವಾರ ಸಂಜೆ ದೈವಗಳ ಭಂಡಾರ ತೆಗೆಯುವುದು, ರಾತ್ರಿ 8.ಕ್ಕೆ ಶ್ರೀ ಕೊರತಿ ಅಮ್ಮನವರ ಕೋಲ, ಪ್ರಸಾದ ವಿತರಣೆ, ಅನ್ನ ಪ್ರಸಾದ ನಡೆಯಲಿದೆ. ಮಾ.14 ರಂದು ಮಂಗಳವಾರ ಬೆಳಿಗ್ಗೆ ಶ್ರೀ ಕುಂಡ್ಯ ಪಾಡಿಚಾಮುಂಡಿ ದೈವದ ಕೋಲ, ಪ್ರಸಾದ ವಿತರಣೆ, ಬೆಳಿಗ್ಗೆ 10 ಕ್ಕೆ ಶ್ರೀಮೂವಾಳಂಕುಳಿ ಚಾಮುಂಡಿ ದೈವದ ಕೋಲ, ಪ್ರಸಾದ ವಿತರಣೆ, ಮಧ್ಯಾಹ್ನ 1 ಕ್ಕೆ ಅನ್ನಪ್ರಸಾದ, ಅಪರಾಹ್ನ 2 ಕ್ಕೆ ಶ್ರೀ ಧರ್ಮದೈವ ಚಾಮುಂಡಿ ದೈವದ ಕೋಲ, ಶ್ರೀ ವಿಷ್ಣುಮೂರ್ತಿ ದೈವದ ಕೋಲ, ಪ್ರಸಾದ ವಿತರಣೆ, ಸಂಜೆ 5 ಕ್ಕೆ ಶ್ರೀ ಗುಳಿಗ ದೈವದ ಕೋಲ ನಡೆಯಲಿರುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಾಡನ್ ವೀಡ್: ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ: ದೈವಗಳ ಕೋಲ
0
ಮಾರ್ಚ್ 07, 2023



