ಮುಳ್ಳೇರಿಯ: ಬಾನಂ ಸರ್ಕಾರಿ ಪ್ರೌಢಶಾಲೆಯಲ್ಲಿ ಅಧ್ಯಯನ ಉತ್ಸವ ಹಾಗೂ ಇಲಾ ಯೋಜನೆಯ ಪ್ರಸ್ತುತಿ ಏರ್ಪಡಿಸಲಾಗಿತ್ತು. ಪರಪ್ಪ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಕೆ.ಭೂಪೇಶ್ ಅಧ್ಯಯನ ಉತ್ಸವ ಉದ್ಘಾಟಿಸಿದರು. ಕೊಡೋಂಬೆಳ್ಳೂರು ಗ್ರಾಮ ಪಂಚಾಯಿತಿ ಅಭಿವೃದ್ದಿ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಗೋಪಾಲಕೃಷ್ಣನ್ ಇಲಾ ಯೋಜನೆ ಉದ್ಘಾಟಿಸಿದರು. ಬ್ಲಾ.ಪಂ.ಅಧ್ಯಕ್ಷ ಕೆ.ಎನ್.ಅಜಯನ್ ಅಧ್ಯಕ್ಷತೆ ವಹಿಸಿದ್ದರು. ಮಾತೃಸಂಘದ ಅಧ್ಯಕ್ಷೆ ರಜಿತಾಭೂಪೇಶ್, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ಪಾಚ್ಚೇನಿ ಕೃಷ್ಣನ್, ಮುಖ್ಯಶಿಕ್ಷಕಿ ಕೆ.ಎಂ.ರಮಾದೇವಿ, ಪಿ.ಕೆ.ಬಾಲಚಂದ್ರನ್, ಕೆ.ಪಿ.ಪ್ರಮೋದ್, ಕೆ.ಆರ್.ಸುಮತಿ ಮಾತನಾಡಿದರು. ನಂತರ ಮಕ್ಕಳ ಕಲಿಕಾ ಸಾಧನೆಗಳ ಪ್ರದರ್ಶನ ನಡೆಯಿತು. ಸಿಬ್ಬಂದಿ ಕಾರ್ಯದರ್ಶಿ ಸಂಜಯಲ್ ಮಣೈಲ್ ಕಾರ್ಯಕ್ರಮ ನಿರೂಪಿಸಿದರು.
ಬಾನಂ ಸರ್ಕಾರಿ ಪ್ರೌಢಶಾಲೆಯಲ್ಲಿ ಅಧ್ಯಯನ ಉತ್ಸವ
0
ಮಾರ್ಚ್ 07, 2023



.jpg)
