ಕಾಸರಗೋಡು: ಜಿಲ್ಲಾ ಯೋಜನಾ ಸಮಿತಿಯು 38 ಗ್ರಾ.ಪಂ., ಮೂರು ನಗರಸಭೆ, 6 ಬ್ಲಾಕ್ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳ ತಿದ್ದುಪಡಿ ವಾರ್ಷಿಕ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಷಿಕ ಯೋಜನಾ ನಿಧಿ ಬಳಕೆ ಪ್ರಗತಿ ಸಭೆಯನ್ನು ಪರಿಶೀಲಿಸಿದ್ದು, ಇದೀಗ ಕಾಸರಗೋಡು ಜಿಲ್ಲೆ ರಾಜ್ಯಕ್ಕೆ ಹನ್ನೊಂದನೇ ಸ್ಥಾನದಲ್ಲಿದೆ.
ಕಾಸರಗೋಡು ಜಿಲ್ಲೆಯ ಕಯ್ಯೂರು ಚಿಮೇನಿ ಗ್ರಾಮ ಪಂಚಾಯಿತಿ ಶೇ.75.88 ರಷ್ಟು ಖರ್ಚು ಮಾಡಿ 27ನೇ ಸ್ಥಾನದಲ್ಲಿದೆ. ಮಂಗಲ್ಪಾಡಿ ಪಂಚಾಯತ್ ಶೇ.06 ರಷ್ಟು ಖರ್ಚು ಮಾಡಿ ಕೊನೆಯ ಸ್ಥಾನದಲ್ಲಿದೆ.
ಜಿಲ್ಲೆಯ ಕುಟ್ಟಿಕೋಲ್ ಮತ್ತು ಚೆರುವತ್ತೂರು, ಮಂಜೇಶ್ವರ ಮತ್ತು ಕೋಡೋಬೆಳ್ಳೂರು ಪಂಚಾಯಿತಿಗಳು ಅತಿ ಹೆಚ್ಚು ಮೊತ್ತವನ್ನು ಖರ್ಚು ಮಾಡಿವೆ.
ಪರಪ್ಪ ಬ್ಲಾಕ್ ಪಂಚಾಯಿತಿ ಶೇ.61.08 ರಷ್ಟು ಹಣ ಖರ್ಚು ಮಾಡಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. 60.35ರಷ್ಟು ಮೊತ್ತವನ್ನು ನೀಲೇಶ್ವರ ಖರ್ಚು ಮಾಡಿದೆ. ಕಾಸರಗೋಡು- 54.17, ಕಾಞಂಗಾಡ್ 52.09, ಮಂಜೇಶ್ವರ 51.86, ಕಾರಡ್ಕ 50.92 ಶೇ. ನಿಧಿ ವಿನಿಯೋಗಿಸಿದೆ. ನಗರಸಭೆಗಳಲ್ಲಿ ನೀಲೇಶ್ವರ ಶೇ.40.66, ಕಾಞಂಗಾಡ್ 34.82 ಕಾಸರಗೋಡು ಶೇ.32.74 ಖರ್ಚು ಮಾಡಿದೆ.
ಕಾಸರಗೋಡು ಜಿಲ್ಲಾ ಪಂಚಾಯತ್ ಶೇ.40.51 ರಷ್ಟು ಖರ್ಚು ಮಾಡಿ ರಾಜ್ಯದಲ್ಲಿ ಎಂಟನೇ ಸ್ಥಾನದಲ್ಲಿದೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣನ್ ಮಾಹಿತಿ ನೀಡಿದರು. ಮಾ.26ರಂದು ಮತ್ತೊಮ್ಮೆ ಸಭೆ ನಡೆಸಿ ಯೋಜನೆ ಪರಿಶೀಲನೆ ನಡೆಸಲಾಗುವುದು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ. ಬೇಬಿ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಯೋಜನಾಧಿಕಾರಿ ಎ.ಎಸ್.ಮಾಯಾ, ಜಿಲ್ಲಾ ಯೋಜನಾ ಸಮಿತಿ ಸದಸ್ಯರು ಭಾಗವಹಿಸಿದ್ದರು.
ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ವಾರ್ಷಿಕ ಯೋಜನೆ ತಿದ್ದುಪಡಿಗಳ ಅಂಗೀಕಾರ: ನಿಧಿ ಬಳಕೆಯ ಪ್ರಗತಿ ಪರಿಶೀಲನೆ
0
ಮಾರ್ಚ್ 07, 2023



