ಕಾಸರಗೋಡು: ಜಿಲ್ಲೆಯನ್ನು ಸಂಪೂರ್ಣ ಕ್ಷಯ ರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾ ಟಿಬಿ ಪೋರಂ ಸಭೆಯು ಸದೃಢ ಕಾರ್ಯಕ್ರಮಗಳನ್ನು ರೂಪಿಸಲು ನಿರ್ಧರಿಸಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಈ ಬಗ್ಗೆ ಮಾತನಾಡಿ, ಸ್ವಯಮಾಡಳಿತ ಸಂಸ್ಥೆಗಳು, ವಿವಿಧ ಇಲಾಖೆಗಳು, ಸರಕಾರ ಹಾಗೂ ಸರಕಾರೇತರ ಸಂಸ್ಥೆಗಳು, ಜಿಲ್ಲಾ ಸಂಪೂರ್ಣ ಕ್ಷಯ ಮುಕ್ತಗೊಳಿಸಲು ಕೈಜೋಡಿಸಬೇಕು. ಜಿಲ್ಲಾ ಪಂಚಾಯಿತಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಟಿಬಿ ಅಧಿಕಾರಿ ಡಾ.ಎ.ಮುರಳೀಧರ ನಲ್ಲೂರಾಯ ಅಧ್ಯಕ್ಷತೆ ವಹಿಸಿ ಮಾತನಾಡಿzರು.
ಜಾಗೃತಿ ಕಾರ್ಯಕ್ರಮದ ಅಂಗವಾಗಿ ಮಾರ್ಚ್ 20 ರಿಂದ 24ರವರೆಗೆ ಜಿಲ್ಲೆಯಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ವಿಶ್ವ ಕ್ಷಯರೋಗ ದಿನದಂದು. ಕರಾವಳಿ ಪ್ರದೇಶಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಗಳು ಮತ್ತು ಕ್ಷಯರೋಗ ಹೆಚ್ಚಿರುವ ಪ್ರದೇಶಗಳಲ್ಲಿ ವಿಶೇಷ ವೈದ್ಯಕೀಯ ಶಿಬಿರಗಳನ್ನು ನಡೆಸಲಾಗುವುದು. ಕಾರ್ಯಕ್ರಮಗಳಲ್ಲಿ ಅರಿವು ಮೂಡಿಸಲು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಸಹ ಪಡೆಯಲು ನಿರ್ಧರಿಸಲಾಗಿದೆ.
ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನ್, ಮೋಹನನ್ ಮಂಗಾಟ್, ವಿ.ಜಿ.ಮೋಹನ್ ದಾಸ್, ಸಿಸ್ಟರ್ ಜಯ ಅಂತೋ ಮಂಗಲತ್, ಕೆ.ಬಾಲಕೃಷ್ಣನ್, ಪಿ.ನಾರಾಯಣನ್, ಯೋಗೀಶ್ ಶೆಟ್ಟಿ, ಲಿಜಿನ್ ಕೆ, ವಿ, ರತೀಶ್ ಪಿ.ಪಿ, ಎಸ್.ಎಚ್.ಹಮೀದ್ ಪಿ.ಪ್ರವೀಣ ಮಾತನಾಡಿದರು. ರಜನಿಕಾಂತ್ ಸ್ವಾಗತಿಸಿ, ವಿ.ರತೀಶ್ ವಂದಿಸಿದರು.
ಜಿಲ್ಲೆಯನ್ನು ಸಂಪೂರ್ಣ ಟಿಬಿ ಮುಕ್ತಗೊಳಿಸಲು ಕಾರ್ಯಕ್ರಮಗಳನ್ನು ತೀವ್ರಗೊಳಿ¸ಲು ತೀರ್ಮಾನ
0
ಮಾರ್ಚ್ 07, 2023



