HEALTH TIPS

ರಾಷ್ಟ್ರಪತಿ ಕೇರಳ ಭೇಟಿ; ಕೊಚ್ಚಿಗೆ ಆಗಮಿಸಿದ ದ್ರೌಪದಿ ಮುರ್ಮು


          ಎರ್ನಾಕುಳಂ: ಎರಡು ದಿನಗಳ ಅಧಿಕೃತ ಭೇಟಿಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಕೇರಳಕ್ಕೆ ಆಗಮಿಸಿದ್ದಾರೆ.
      ರಾಷ್ಟ್ರಪತಿಗಳು ಕೊಚ್ಚಿಗೆ ಆಗಮಿಸಿದ್ದು, ಕೇರಳಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.
            ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿಗಳನ್ನು ಬರಮಾಡಿಕೊಂಡರು. ನೌಕಾಪಡೆಯ ವಿಮಾನವಾಹಕ ನೌಕೆ ಐಎನ್‍ಎಸ್ ವಿಕ್ರಾಂತ್‍ಗೆ ಭೇಟಿ ನೀಡಿದ ನಂತರ ರಾಷ್ಟ್ರಪತಿಗಳು ನೌಕಾಪಡೆಯ ಐಎನ್‍ಎಸ್ ದ್ರೋಣಾಚಾರ್ಯ ಹಡಗಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾರಂಭದಲ್ಲಿ ದ್ರೌಪದಿ ಮುರ್ಮು ಅವರು ಐಎನ್‍ಎಸ್ ದ್ರೋಣಾಚಾರ್ಯ ಗೆ ರಾಷ್ಟ್ರಪತಿಗಳ ಅತ್ಯುನ್ನತ ಗೌರವ 'ನಿಶಾನ್' ಪ್ರದಾನ ಮಾಡಲಿದ್ದಾರೆ.
           ರಾತ್ರಿ ತಿರುವನಂತಪುರಕ್ಕೆ ತೆರಳಲಿರುವ ರಾಷ್ಟ್ರಪತಿಗಳು ನಾಳೆ ಬೆಳಗ್ಗೆ 9.30ಕ್ಕೆ ಕೊಲ್ಲಂ ವಲ್ಲಿಕಾವಿಲ್‍ನಲ್ಲಿರುವ ಮಾತಾ ಅಮೃತಾನಂದಮಯಿ ಮಠಕ್ಕೂ ತೆರಳಲಿದ್ದಾರೆ. ತಿರುವನಂತಪುರಕ್ಕೆ ಹಿಂತಿರುಗಿದ ನಂತರ ಕವಡಿಯಾರ್ ಉದಯ್ ಪ್ಯಾಲೇಸ್ ಕನ್ವೆನ್ಷನ್ ಸೆಂಟರ್‍ನಲ್ಲಿ ಕುಟುಂಬಶ್ರೀಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಲಕ್ಷದ್ವೀಪಕ್ಕೆ ತೆರಳುವರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries