ಕಾಸರಗೋಡು: ಸಮಾಜದ ಪರ್ಯಾಯ ಚಿಕಿತ್ಸಾ ವಿಧಾನಗಳ ಬಗ್ಗೆ ತಪ್ಪು ಮಾಹಿತಿ ನೀಡುವ ಮೂಲಕ ಸಾರ್ವಜನಿಕರನ್ನು ತಪ್ಪುದರಿಗೆಳೆಯುವುದನ್ನು ನಿಲ್ಲಿಸುವಂತೆ
ಭಾರತೀಯ ಆಯುರ್ವೇದಿಕ್ ಮೆಡಿಕಲ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಸಮ್ಮೇಳನ ಆಗ್ರಹಿಸಿದೆ. ಶತಮಾನಗಳಿಂದ ಜನರು ವಿಶ್ವಾಸಾರ್ಹವಾಗಿ ಬಳಸುತ್ತಿರುವ ಆಯುರ್ವೇದ ಚಿಕಿತ್ಸಾ ವ್ಯವಸ್ಥೆಯನ್ನು ಅದರ ಮೂಲ ರೂಪದಲ್ಲಿ ಸಂರಕ್ಷಿಸುವಂತೆಯೂ ಸರ್ಕಾರವನ್ನು ಒತ್ತಾಯಿಸಲಾಯಿತು. ಕಾಞಂಗಾಡ್‍ನಲ್ಲಿ ನಡೆದ ಎಎಂಎಐ ಜಿಲ್ಲಾ ಸಮ್ಮೇಳನದಲ್ಲಿ ಈ ಬಗ್ಗೆ ಠರಾವು ಮಂಡಿಸಲಾಯಿತು.
ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತಾ ಟೀಚರ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಯಾವುದೇ ಅಡ್ಡ ಪರಿಣಾಮ ಬೀರದ ಆಯುರ್ವೇದದಂತಹ ಚಿಕಿತ್ಸೆಗಳನ್ನು ಅಳವಡಿಸಿಕೊಂಡು ಜೀವನಶೈಲಿ ರೋಗಗಳನ್ನು ಎದುರಿಸಬೇಕು ಎಂದು ತಿಳಿಸಿದರು. ಡಾ.ಕೆ. ಪ್ರೇಮರಾಜ್, ಡಾ. ಪದ್ಮೇಕ್ಷನನ್ ಕೆ.ಪಿ, ಡಾ. ಮನೋಜ್ ಕಾಲೂರು, ಡಾ. ಬಿನೋಯ್ ಯು.ಪಿ, ಡಾ. ಶ್ರುತಿ ಪಂಡಿತ್, ಡಾ.ರಂಜಿತ್ ಕೆ.ಆರ್., ಡಾ. ದಿವ್ಯಾ ಪಿ.ವಿ., ಡಾ. ಅಜಿತ್. ಎ, ಡಾ.ಸೀಮಾ.ಜಿ.ಕೆ, ಡಾ.ಪ್ರವೀಣ್ ಪಿ.ಆರ್, ಡಾ. ಕುಮಾರನ್.ಕೆ, ಡಾ. ಕೃಷ್ಣಕುಮಾರ್ ನಂಬಿಯಾರ್ ಉಪಸ್ಥಿತರಿದ್ದರು. ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಡಾ. ಪದ್ಮೆಕಷ್ಣನ್.ಕೆಪಿ ಅಧ್ಯಕ್ಷ, ಡಾ. ಶ್ರುತಿ ಪಂಡಿತ್ ಕಾರ್ಯದರ್ಶಿ, ಡಾ. ಅಜಿತ್ ಎ ಕೋಶಾಧಿಕಾರಿ, , ಡಾ. ದಿವ್ಯಾ ಪಿವಿ ಮಹಿಳಾ ಸಮಿತಿ ಅಧ್ಯಕ್ಷೆ ಹಾಗೂ ಡಾ. ಸೆಮಿನಾ. ಕೆ ಅವರನ್ನು ಮಹಿಳಾ ಸಮಿತಿ ಸಂಚಾಲಕಿಯನ್ನಾಗಿ ಆಯ್ಕೆ ಮಾಡಲಾಯಿತು.
ಆಯುರ್ವೇದ ಚಿಕಿತ್ಸೆಯ ವಿರುದ್ಧ ಸುಳ್ಳುಪ್ರಚಾರ ಕೊನೆಗೊಳಿಸಬೇಕು-ಎಎಂಎಐ ಜಿಲ್ಲಾ ಸಮ್ಮೇಳನ
0
ಮಾರ್ಚ್ 12, 2023
Tags


